ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದ ಯಶ್ ಅಭಿಮಾನಿ ಸಾವು
Recommended Video

ಬೆಂಕಿ ಹಚ್ಚಿಕೊಂಡಿದ್ದ ಯಶ್ ಅಭಿಮಾನಿ ಇನ್ನಿಲ್ಲ..! | FILMIBEAT KANNADA
ನಿನ್ನೆ ನಟ ಯಶ್ ಮನೆ ಮುಂದೆ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದ ಅಭಿಮಾನಿ ರವಿ ಇಂದು ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರವಿ ಇಂದು ಬೆಳಗ್ಗೆ ಮೃತರಾಗಿದ್ದಾರೆ.

ಈ ವರ್ಷ ನಟ ಅಂಬರೀಶ್ ಅವರ ನಿಧನದ ಹಿನ್ನಲೆಯಲ್ಲಿ ಯಶ್ ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರಲಿಲ್ಲ. ಹೀಗಾಗಿ ಯಶ್ ಹುಟ್ಟುಹಬ್ಬದ ದಿನ ಅವರನ್ನು ನೋಡಲು ಆಗಲಿಲ್ಲ ಎಂಬ ಕಾರಣಕ್ಕೆ ರವಿ ಯಶ್ ಮನೆ ಮುಂದೆ ಪೆಟ್ರೋಲ್ ಸುರಿಸುಕೊಂಡು ಬೆಂಕಿ ಹಚ್ಚಿಕೊಂಡಿದ್ದ. ಕೂಡಲೇ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.
ನಿನ್ನೆ ಯಶ್ ಕೂಡ ಆಸ್ಪತ್ರೆಗೆ ಭೇಟಿ ನೀಡಿ ರವಿ ಹಾಗೂ ಅವರ ಕುಟುಂಬದವರನ್ನು ಮಾತನಾಡಿಸಿಕೊಂಡು ಬಂದಿದ್ದರು.ಯಾವ ಅಭಿಮಾನಿಗಳು ಈ ರೀತಿ ಮಾಡಿಕೊಳ್ಳಬಾರದು. ಈ ರೀತಿ ಮಾಡಿಕೊಳ್ಳುವವರು ನನ್ನ ಅಭಿಮಾನಿಗಳು ಅಲ್ಲ. ಎಂದು ಹೇಳಿದ್ದರು.
ಬೆಂಕಿ ಹಚ್ಚಿಕೊಂಡಿದ್ದ ಕಾರಣ ರವಿಯ 80 ರಷ್ಟು ದೇಹ ಸುಟ್ಟು ಹೋಗಿತ್ತು. ಗಂಭೀರ ಸ್ಥಿತಿಯಲ್ಲಿ ಇದ್ದ ರವಿ ಇಂದು ಮುಂಜಾನೆ ಕೊನೆಯೂಸಿರೆಳೆದರು.
More from Filmibeat
English summary
a fan of of kannada actor Yash passes away victoria hospital Bengaluru today (January 9th)


Click it and Unblock the Notifications











