'ಕೆಜಿಎಫ್' ಟ್ರೈಲರ್ ನೋಡಿ ಉಪೇಂದ್ರ ಕಾಲೆಳೆದ ಅಭಿಮಾನಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾದ ಟ್ರೈಲರ್ ನೋಡಿ ಕನ್ನಡ ಚಿತ್ರರಂಗ ಪ್ರಶಂಸೆಗಳು ಸುರಿಮಳೆಗೈಯುತ್ತಿದೆ. ಕನ್ನಡದ ಸ್ಟಾರ್ ನಟರು, ಸುದೀಪ್, ಶ್ರೀಮುರಳಿ, ಶ್ರುತಿ ಹರಿಹರನ್, ಧನಂಜಯ್, ರಶ್ಮಿಕಾ ಮಂದಣ್ಣ ಸೇರಿದಂತೆ ಬಹುತೇಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಕೇವಲ ಕನ್ನಡ ಕಲಾವಿದರ ಮಾತ್ರವಲ್ಲದೇ, ಪರಭಾಷೆಯ ಸೆಲೆಬ್ರಿಟಿಗಳು ಕೂಡ ಕೆಜಿಎಫ್ ಟ್ರೈಲರ್ ಶಬ್ಬಾಶ್ ಎನ್ನುತ್ತಿದ್ದಾರೆ. ರಾಮ್ ಗೋಪಾಲ್ ವರ್ಮಾ, ರಾಶಿ ಖನ್ನಾ, ರಾಣಾ ದಗ್ಗುಬಾಟಿ, ವಿಶಾಲ್, ಹೀಗೆ ದೊಡ್ಡ ಬಳಗವೇ ಚಪ್ಪಾಳೆ ಹೊಡೆಯುತ್ತಿದೆ.

ಹೀಗಿರುವಾಗ, ಇಲ್ಲೊಬ್ಬ ಅಭಿಮಾನಿ ಕೆಜಿಎಫ್ ಟ್ರೈಲರ್ ನೋಡಿ, ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಕಾಲೆಳೆದಿದ್ದಾನೆ. ಇದಕ್ಕೆ ಉಪ್ಪಿ ಕೂಡ ತಮ್ಮದೇ ಸ್ಟೈಲ್ ನಲ್ಲಿ ಆ ಅಭಿಮಾನಿ ಉತ್ತರ ನೀಡಿದ್ದಾರೆ. ಅಷ್ಟಕ್ಕೂ, ಕೆಜಿಎಫ್ ಟ್ರೈಲರ್ ಗೂ ಉಪ್ಪಿಗೂ ಏನ್ ಸಂಬಂಧ.? ಉಪ್ಪಿಗೆ ಆ ಅಭಿಮಾನಿ ಹೇಳಿದ್ದೇನು.? ರಿಯಲ್ ಸ್ಟಾರ್ ಕೊಟ್ಟ ರಿಯಾಕ್ಷನ್ ಏನು.? ಮುಂದೆ ಓದಿ......

 ಉಪ್ಪಿಗೆ ಆ ಅಭಿಮಾನಿ ಕೇಳಿದ್ದೇನು.?

ಉಪ್ಪಿಗೆ ಆ ಅಭಿಮಾನಿ ಕೇಳಿದ್ದೇನು.?

''ಸಿನಿಮಾ ಹೇಗೆ ಮಾಡಬೇಕು ಎಂದು ತೋರಿಸುವ ಮೂಲಕ ಇಡೀ ಭಾರತದ ಗಮನ ಸೆಳೆದಿರುವ ಪ್ರಶಾಂತ್ ನೀಲ್ ಮತ್ತು ತಂಡದಿಂದ ನೀವು ಏನಾದರು ಕಲಿತುಕೊಂಡ್ರಾ.? ನಿಮಗೆ ಇದೆಲ್ಲಾ ಬೇಡ ಬಿಡಿ. ಯಾಕಂದ್ರೆ, ನೀವು ಅಂದುಕೊಂಡಿದ್ದೀರಾ, ಇದೆಲ್ಲಾ ನಾನು ಆಗಲೇ ಮಾಡಿಬಿಟ್ಟಿದ್ದೀನಿ ಅಂತ. ಸತ್ಯ ಏನಪ್ಪಾ ಅಂದ್ರೆ, ಅಭಿಮಾನಿಗಳ ಬಗ್ಗೆ ಯೋಚನೆ ಮಾಡದೇ ನೀವು ಬರಿ ರೀಮೇಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೀರಾ'' ಎಂದು ಕ್ಯಾಪ್ಟನ್ ಮೂವೀಸ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಉಪ್ಪಿ ಸ್ಟೈಲ್ ನಲ್ಲಿ ಉತ್ತರಿಸಿದ್ರು

ಉಪ್ಪಿ ಸ್ಟೈಲ್ ನಲ್ಲಿ ಉತ್ತರಿಸಿದ್ರು

''ನಾನು ನನಗೋಸ್ಕರ ಮಾಡಿದ್ರೆ ನಾನೊಬ್ಬ ಅತ್ಯುತ್ತಮ ನಟ, ನಿರ್ದೇಶಕ ಮತ್ತು ಸೂಪರ್ ಸ್ಟಾರ್ ಹಾಗೂ ಎಲ್ಲರಿಗಿಂತ ಉತ್ತಮ. ಆದ್ರೆ, ನಾನು ದುರಾದೃಷ್ಟವಶಾತ್ ನಾನು ಬೇರೆಯವರಿಗಾಗಿ(ನಿಮಗಾಗಿ)ಬದುಕ್ತಿದ್ದೀನಿ. (ಸದಾ ನಾನು ಯಾವಾಗಲೂ ಬೇರೆಯವರ ಸಾಧನೆ ಮತ್ತು ಖುಷಿಯನ್ನ ಎದುರು ನೋಡುತ್ತೇನೆ)ಅದಕ್ಕಾಗಿಯೇ ಪ್ರಜಾಕೀಯ'' ಎಂದು ಟಾಂಗ್ ಕೊಟ್ಟಿದ್ದಾರೆ.

ಮತ್ತೆ ಕಿಡಿಕಾರಿದ ಅಭಿಮಾನಿ

ಮತ್ತೆ ಕಿಡಿಕಾರಿದ ಅಭಿಮಾನಿ

ಉಪ್ಪಿಯ ಪ್ರತಿಕ್ರಿಯೆ ನೋಡಿ ಆ ಅಭಿಮಾನಿ ಮತ್ತೆ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ. 'ಬಾಸ್ ಒಂದು ಮಾತು ಹೇಳಿ, ನೀವು ಯಾಕೆ ಆಕಸ್ಮಾತ್ ಪದ ಬಳಿಸಿದ್ದೀರಾ. ನಾವು ನಿಮ್ಮನ್ನ ರಾಜಕೀಯಕ್ಕೆ ಬರುವಂತೆ ಒತ್ತಾಯ ಮಾಡಿಲ್ಲ. ನಮ್ಮನ್ನ ಹೇಗೆ ಅಪರಾಧಿ ಮಾಡ್ತೀರಾ. ಇದು ನಿಮ್ಮ ಆಯ್ಕೆ ಆದ್ರೆ, ಆಕಸ್ಮಾತ್ ಪದ ಬಳಸುತ್ತಿದ್ದೀರಾ'' ಎಂದು ಪ್ರಶ್ನಿಸಿದ್ದಾರೆ.

ಕೆಜಿಎಫ್ ಹೊಗಳಿದ ಉಪ್ಪಿ.!

ಕೆಜಿಎಫ್ ಹೊಗಳಿದ ಉಪ್ಪಿ.!

ಹೀಗಂತ ಕೆಜಿಎಫ್ ಚಿತ್ರದ ಟ್ರೈಲರ್ ಬಗ್ಗೆ ಉಪ್ಪಿ ಮಾತನಾಡಿಲ್ಲ ಅಂತಲ್ಲ. ಯಶ್ ಚಿತ್ರಕ್ಕೆ ಉಪ್ಪಿ ಕೂಡ ಮೆಚ್ಚಿಕೊಂಡಿದ್ದಾರೆ. ''ಯಶ್ ಮತ್ತು ತಂಡಕ್ಕೆ ಒಳ್ಳೆಯದಾಗಲಿ. ಕೆಜಿಎಫ್ ಟ್ರೈಲರ್ ಅದ್ಭುತವಾಗಿದೆ. ಕನ್ನಡ ಇಂಡಸ್ಟ್ರಿಗೆ ಇದು ಹೆಮ್ಮೆ. ಈ ಸಿನಿಮಾ ನೋಡಲು ಕಾಯುತ್ತಿದ್ದೇವೆ'' ಎಂದು ಉಪೇಂದ್ರ ಶುಭಹಾರೈಸಿದ್ದಾರೆ.

More from Filmibeat

English summary
A Fan argue with upendra because of kgf trailer in twitter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X