»   » ರಾಜಕುಮಾರನನ್ನ ನೋಡಲು '400 ಕಿ.ಮೀ'ನಿಂದ ಬಂದ ಅಭಿಮಾನಿ

ರಾಜಕುಮಾರನನ್ನ ನೋಡಲು '400 ಕಿ.ಮೀ'ನಿಂದ ಬಂದ ಅಭಿಮಾನಿ

Posted By:
Subscribe to Filmibeat Kannada

ಅಭಿಮಾನಿಗಳ ಅಭಿಮಾನಕ್ಕೆ ಬೆಲೆ ಕಟ್ಟುವವರು ಯಾರು?. ಅಭಿಮಾನಿಗಳನ್ನ ದೇವರೆಂದು ಪೂಜಿಸುವ ಅಣ್ಣಾವ್ರ ಕಿರಿಯ ಪುತ್ರ ಪವರ್ ಸ್ಟಾರ್ ಪುನೀತ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ರಾಜ್ಯದ ನಾನಾ ಜಿಲ್ಲೆಗಳಿಂದ ಅಭಿಮಾನಿಗಳು ಸಾಗರದ ರೀತಿಯಲ್ಲಿ ಬರುತ್ತಲೇ ಇದ್ದಾರೆ. ಸ್ಟಾರ್ ಗಳಿಗೆ ಸಾಕಷ್ಟು ಅಭಿಮಾನಿಗಳು ಇರುತ್ತಾರೆ.

ಒಬ್ಬರು ಒಂದೊಂದು ರೀತಿಯಲ್ಲಿ ತಮ್ಮ ಪ್ರೀತಿಯನ್ನ ವ್ಯಕ್ತ ಪಡಿಸುತ್ತಾರೆ. ಆದರೆ ಇಲ್ಲೊಬ್ಬ ಅಭಿಮಾನಿ ಪುನೀತ್ ಅವರನ್ನ ಭೇಟಿ ಮಾಡಲು ಸುಮಾರು ಐದು ವರ್ಷದಿಂದ ಹುಟ್ಟುಹಬ್ಬದಂದು ತಪ್ಪದೆ ಬರುತ್ತಾನೆ. ಸುಮಾರು 400ಕಿಲೋ ಮೀಟರ್ ನಿಂದ ಬಂದು ರಾಜರತ್ನನಿಗೆ ಶುಭಕೋರುತ್ತಾನೆ. ಅದರಲ್ಲಿ ಏನಿದೆ. ಸಾಕಷ್ಟು ಜನರು ದೂರದ ಊರಿನಿಂದ ಬರುತ್ತಾರೆ ಅಂತ ನೀವು ಯೋಚನೆ ಮಾಡಿದ್ರೆ ಅದು ತಪ್ಪು.

ಈತ ಎಲ್ಲರ ಅಭಿಮಾನಿಗಳ ಮಧ್ಯೆ ವಿಶೇಷವಾಗಿ ನಿಲ್ಲುವ ಅಭಿಮಾನಿ 400 ಕಿಲೋ ಮೀಟರ್ ನಿಂದ ಬರುವುದರ ಜೊತೆಯಲ್ಲಿ ಪ್ರತಿಯೊಬ್ಬರು ಈತನತ್ತ ನೋಡುವಂತೆ ಆಕರ್ಷಣೆ ಮಾಡುವುದೇ ಈತನ ಸಾಮಾರ್ಥ್ಯ. ಹಾಗಾದರೆ ಆತ ಯಾರು? ಎಲ್ಲಿಂದ ಬರುತ್ತಾನೆ? ಪವರ್ ಸ್ಟಾರ್ ಭೇಟಿ ಮಾಡಿದಾಗ ಅಪ್ಪು ಹೇಳಿದ್ದೇನು? ಈ ಎಲ್ಲಾ ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ರಾಣೆಬೆನ್ನೂರಿನ ವಿಶೇಷ ಅಭಿಮಾನಿ

ಈತ ಸಿದ್ದು ಉತ್ತರ ಕರ್ನಾಟಕದ ಹೆಬ್ಬಾಗಿಲು ರಾಣೆಬೆನ್ನೂರು ತಾಲೂಕಿನ ಹಿರೇಬಿದರಿ ಗ್ರಾಮದ ನಿವಾಸಿ. ಪವರ್ ಸ್ಟಾರ್ ಎಂದರೆ ಎಲ್ಲಿಲ್ಲದ ಪ್ರೀತಿ. ಅದಕ್ಕಾಗಿ ಅಪ್ಪು ಹುಟ್ಟುಹಬ್ಬದ ದಿನ ರಾಣೆಬೆನ್ನೂರಿನಿಂದ ಬೆಂಗಳೂರಿಗೆ ಬರುತ್ತಾನೆ .

ಎದೆ ಮೇಲೆ ಪವರ್ ಸ್ಟಾರ್ ಚಿತ್ತಾರ

ಸಿದ್ದು ಪ್ರತಿ ವರ್ಷ ಬೆಂಗಳೂರಿಗೆ ಹುಟ್ಟುಹಬ್ಬಕ್ಕೆ ಒಂದು ದಿನ ಇದೆ ಎನ್ನುವ ಮುಂಚೆಯೇ ಬಂದು ತಮ್ಮ ದೇಹದ ಮೇಲೆ ಪುನೀತ್ ಅವರ ಬಾವಚಿತ್ರವನ್ನ ಬಣ್ಣದ ಮೂಲಕ ಬಿಡಿಸಿಕೊಳ್ಳುತ್ತಾನೆ. ಪ್ರತಿ ವರ್ಷ ಬೇರೆ ಬೇರೆ ಚಿತ್ತಾರ ಬಿಡಿಸಿಕೊಂಡು ಜನರನ್ನ ಆಕರ್ಷಣೆ ಮಾಡುತ್ತಾನೆ.

ಐದನೇ ಬಾರಿ ಅಪ್ಪು ಭೇಟಿ

ಪವರ್ ಸ್ಟಾರ್ ಹುಟ್ಟುಹಬ್ಬ ಮಾತ್ರವಲ್ಲದೆ ಅಪ್ಪು ಸಿನಿಮಾ ಬಿಡುಗಡೆ ಆಗುವ ಸಂದರ್ಭದಲ್ಲಿ, ಶಿವರಾಜ್ ಕುಮಾರ್ ಬರ್ತಡೇಯಲ್ಲಿ. ಹೀಗೆ ಸಾಕಷ್ಟು ಶುಭ ಸಮಾರಂಭದಲ್ಲಿ ಸಿದ್ದು ಪುನೀತ್ ಅವರನ್ನ ಭೇಟಿ ಮಾಡಿದ್ದಾರೆ. ಕಳೆದ ಐದು ವರ್ಷದಿಂದ ಇದೇ ರೀತಿಯಲ್ಲಿ ಜನರ ಜೊತೆ ಅಪ್ಪು ಅವರನ್ನು ಆಕರ್ಷಣೆ ಮಾಡುತ್ತಿದ್ದಾನೆ.

ಅಭಿಮಾನಿಯ ಅಭಿಮಾನಕ್ಕೆ ಖುಷಿಯಾದ ಅಪ್ಪು

ಪ್ರತಿ ಬಾರಿ ಸಿದ್ದು ಅವರನ್ನ ಭೇಟಿ ಆದಾಗ ಪುನೀತ್ ಖುಷಿಯನ್ನ ವ್ಯಕ್ತ ಪಡಿಸಿದ್ದಾರೆ. ಅಷ್ಟೇ ಅಲ್ಲದೆ ಎಲ್ಲಾ ಸಮಾರಮಭದಲ್ಲಿಯೋ ಕಾಣಿಸಿಕೊಳ್ಳುತ್ತೀಯಾ ಅಂತ ಆಶ್ಚರ್ಯವನ್ನು ವ್ಯಕ್ತ ಪಡಿಸಿದ್ದಾರೆ.

English summary
Puneet Rajkumar fan come to Bangalore every year from Ranbennur for Puneeth birthday. The specialty is that he draws Puneet's drawing on his body with colors and attracting everyone.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X