ದರ್ಶನ್ ಹುಟ್ಟುಹಬ್ಬಕ್ಕೆ ಟ್ರ್ಯಾಕ್ಟರ್ ಉಡುಗೊರೆ ಕೊಟ್ಟ ಅಭಿಮಾನಿ; ಅದರ ಬೆಲೆ ಎಷ್ಟು?
ಅಭಿಮಾನಿಗಳ ಪ್ರೀತಿಯ ಡಿಬಾಸ್ 47ನೇ ವರ್ಷದ ಹುಟ್ಟುಹಬ್ಬ ಸಂಭ್ರಮ ಜೋರಾಗಿದೆ. ಅಭಿಮಾನಿಗಳು ದೊಡ್ಡಮಟ್ಟದಲ್ಲಿ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಈಗಾಗಲೇ ಆರ್. ಆರ್ ನಗರದಲ್ಲಿರುವ ತೂಗುದೀಪ ನಿವಾಸದಲ್ಲೇ ಸಡಗರ ಶುರುವಾಗಿದೆ. ಇನ್ನು ದರ್ಶನ್ ಹುಟ್ಟುಹಬ್ಬಕ್ಕೆ ಅಭಿಮಾನಿಯಿಂದ ಭರ್ಜರಿ ಉಡುಗೊರೆ ಸಿಕ್ಕಿದೆ.
'ಕಾಟೇರ' ಸಕ್ಸಸ್ ಹಿನ್ನೆಲೆಯಲ್ಲಿ ಈ ಬಾರಿ ದರ್ಶನ್ ಹುಟ್ಟುಹಬ್ಬ ಸಂಭ್ರಮ ಡಬಲ್ ಆಗಿದೆ. ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಸಿನಿಮಾ 200 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. ಸದ್ಯ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗಿ ಸಿನಿಮಾ ಸದ್ದು ಮಾಡ್ತಿದೆ. ಮತ್ತೊಂದು ಕಡೆ 'ಡೆವಿಲ್' ಸಿನಿಮಾ ಟೀಸರ್ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಮಧ್ಯರಾತ್ರಿ 12 ಗಂಟೆಗೆ ಸಣ್ಣ ಝಲಕ್ ಅಭಿಮಾನಿಗಳನ್ನು ರಂಜಿಸಲು ಸಿದ್ಧವಾಗಿದೆ.

ಈಗಾಗಲೇ ಅಭಿಮಾನಿಗಳು ಸ್ಪೆಷಲ್ ಕಾಮನ್ ಡಿಪಿ ಕ್ರಿಯೇಟ್ ಮಾಡಿ ದರ್ಶನ್ ಹುಟ್ಟುಹಬ್ಬ ಸಂಭ್ರಮಾಚರಣೆಗೆ ಚಾಲನೆ ನೀಡಿದ್ದಾರೆ. ಇನ್ನು ಹುಟ್ಟುಹಬ್ಬದ ದಿನ ನೆಚ್ಚಿನ ನಟನನ್ನು ನೋಡಿ, ಕೈ ಕುಲುಕಿ ಶುಭ ಕೋರಲು ಕಾಯುತ್ತಿದ್ದಾರೆ. ಮಧ್ಯರಾತ್ರಿಯೇ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ದರ್ಶನ್ ಹುಟ್ಟುಹಬ್ಬ ಆಚರಿಸಲಿದ್ದಾರೆ. ತಿಂಗಳ ಹಿಂದೆಯೇ ಅಭಿಮಾನಿಗಳಲ್ಲಿ ದರ್ಶನ್ ವಿಶೇಷ ಮನವಿ ಮಾಡಿದ್ದರು. ಹಾರ, ಬ್ಯಾನರ್, ಕೇಕ್ ತರಬೇಡಿ. ಅದರ ಬದಲು ದವಸ ಧಾನ್ಯ ಉಡುಗೊರೆ ನೀಡಿ. ಅದನ್ನು ಅವಶ್ಯಕತೆ ಇರುವವರಿಗೆ ತಲುಪಿಸುತ್ತೇನೆ ಎಂದಿದ್ದರು.
ನೆಚ್ಚಿನ ನಟನ ಮಾತಿನಂತೆ ಅಭಿಮಾನಿಗಳು ದೊಡ್ಡಮಟ್ಟದಲ್ಲಿ ದವಸ, ಧಾನ್ಯ ತಂದು ದರ್ಶನ್ ನಿವಾಸಕ್ಕೆ ನೀಡಿದ್ದಾರೆ. ಅದನ್ನು ಅವಶ್ಯಕತೆ ಇರುವವರಿಗೆ ತಲುಪಿಸುವ ಪ್ರಯತ್ನ ನಡೀತಿದೆ. ಇನ್ನು ಸಿಂಧನೂರಿನಿಂದ ಅಭಿಮಾನಿಯೊಬ್ಬರು ಕಾಲ್ನಡಿಗೆಯಲ್ಲಿ ಬಂದು ದರ್ಶನ್‌ಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಅಭಿಮಾನಿಯೊಬ್ಬರು ಟ್ರ್ಯಾಕ್ಟರ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
ಹೌದು. 'ಕಾಟೇರ' ಚಿತ್ರದಲ್ಲಿ ದರ್ಶನ್ ರೈತರಿಗೆ ಬೆಂಬಲವಾಗಿ ನಿಲ್ಲುವ ನಾಯಕನ ಪಾತ್ರ ಮಾಡಿದ್ದರು. ಸಿನಿಮಾ ಸಕ್ಸಸ್ ಬೆನ್ನಲ್ಲೇ 'ಕರ್ನಾಟಕ ರಾಜ್ಯ ರೈತ ಸಂಘ'ದ ಪರವಾಗಿ ನಟ ದರ್ಶನ್‌ಗೆ 'ಭೂಮಿಪುತ್ರ' ಎಂಬ ಬಿರುದು ನೀಡಿದ್ದರು. ಇದೀಗ ಅಭಿಮಾನಿಯೊಬ್ಬರು ಟ್ರ್ಯಾಕ್ಟರ್ ಅನ್ನು ದರ್ಶನ್‌ಗೆ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದ್ದಾರೆ. ಆರ್. ಆರ್ ನಗರದ ನಿವಾಸಕ್ಕೆ ತಂದು ಕೊಟ್ಟಿದ್ದು ದರ್ಶನ್ ಟ್ರ್ಯಾಕ್ಟರ್ ಏರಿ ಒಂದು ರೌಂಡ್ ಸುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ.

ACE ಬ್ರ್ಯಾಂಡ್ DI-550 STAR ಮಾಡೆಲ್ ಟ್ರ್ಯಾಕ್ಟರ್ ಅನ್ನು ಉಡುಗೊರೆ ನೀಡಲಾಗಿದೆ. ಈ ಟ್ರ್ಯಾಕ್ಟರ್ ಬೆಲೆ ಅಂದಾಜು 7 ಲಕ್ಷ ರೂ.ನಿಂದ 8 ಲಕ್ಷ ರೂ. ಎನ್ನುವ ಅಂದಾಜಿದೆ. ಚಾಲೆಂಜಿಂಗ್ ಸ್ಟಾರ್ ಟ್ರ್ಯಾಕ್ಟರ್ ಏರಿ ಸುತ್ತಾಡಿರುವ ವಿಡಿಯೋ ವೈರಲ್ ಆಗ್ತಿದೆ.


Click it and Unblock the Notifications











