ಉಪ್ಪಿಯನ್ನು ಡಿಫೆರೆಂಟ್ ಆಗಿ ಮದುವೆಗೆ ಆಹ್ವಾನಿಸಿದ ಅಭಿಮಾನಿ
ರಿಯಲ್ ಸ್ಟಾರ್ ಉಪೇಂದ್ರ ಡಿಫರೆಂಟ್ ಎನ್ನುವುದು ಎಲ್ಲರಿಗೆ ಗೊತ್ತು. ಅದೇ ರೀತಿ ಅವರ ಅಭಿಮಾನಿಗಳು ಕೂಡ ಸಖತ್ ಡಿಫರೆಂಟ್. ಉಪೇಂದ್ರ ಅಭಿಮಾನಿಗಳು ಎಷ್ಟು ವಿಭಿನ್ನ ಎನ್ನುವದನ್ನು ಈಗಾಗಲೇ ಅನೇಕರು ಸಾಬೀತು ಮಾಡಿದ್ದಾರೆ. ಈಗ ಮತ್ತೊಬ್ಬ ಅಭಿಮಾನಿ ತನ್ನ ಮದುವೆಯ ಆಮಂತ್ರಣ ಪತ್ರಿಕೆ ಮೂಲಕ ವಿಭಿನ್ನತೆ ಮೆರೆದಿದ್ದಾರೆ.
ಬೆಂಗಳೂರಿನವರರೇ ಆದ ಅವರ ಉದಯ್ ಗೌಡ ಎಂಬುವವರು ಉಪ್ಪಿ ಅವರ ಅಪ್ಪಟ್ಟ ಅಭಿಮಾನಿ. ಉದಯ್ ಮಾತ್ರವಲ್ಲದೆ ಅವರ ಸಹೋದರ ವಿನಯ್ ಗೌಡ ಕೂಡ ಉಪೇಂದ್ರ ಅವರ ಪಕ್ಕಾ ಫ್ಯಾನ್. ಉಪೇಂದ್ರ ಅವರ ಯಾವುದೇ ಸಿನಿಮಾ ಬಿಡುಗಡೆಯಾದರು ಚಿತ್ರಮಂದಿದಲ್ಲಿ ಇವರದ್ದೆ ಹಬ್ಬ. ಈ ಅಣ್ ತಮ್ಮಂದಿರ ಪೈಕಿ ಅಣ್ಣ ಉದಯ್ ಗೌಡ ಅವರ ವಿವಾಹ ನಿಶ್ಚಯ ಆಗಿದೆ. ತಮ್ಮ ಮದುವೆಗೆ ಡಿಫರೆಂಟ್ ಆದ ಆಹ್ವಾನ ಪತ್ರಿಕೆಯೊಂದಿಗೆ ಈ ಅಭಿಮಾನಿ ಉಪೇಂದ್ರ ಅವರನ್ನು ಆಹ್ವಾನ ಮಾಡಿದ್ದಾರೆ.

ಸುಮಾರು ವರ್ಷದಿಂದ ಉಪೇಂದ್ರ ಅವರ ಅಭಿಮಾನಿಯಾಗಿರುವ ಉದಯ್ ತನ್ನ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ತಾನು ಈ ಹಿಂದೆ ಉಪೇಂದ್ರ ಅವರ ಜೊತೆಗೆ ತೆಗೆಸಿಕೊಂಡ ಸಾಕಷ್ಟು ಫೋಟೋಗಳನ್ನೆಲ್ಲ ಸೇರಿಸಿ ವಿಶೇಷ ಆಮಂತ್ರಣ ಪತ್ರಿಕೆ ಮಾಡಿಸಿದ್ದಾರೆ. ಒಂದು ಗಿಡದ ಲಗ್ನ ಪತ್ರಿಕೆಯನ್ನು ಉಪೇಂದ್ರ ಅವರ ನೀಡಿದ್ದಾರೆ. ಅಭಿಮಾನಿಯ ವಿಶೇಷ ಲಗ್ನ ಪತ್ರಿಕೆ ನೋಡಿ ಉಪೇಂದ್ರ ಕೂಡ ಖುಷಿ ಆಗಿದ್ದಾರೆ. ತಮ್ಮ ಫ್ಯಾನ್ ತಂದಿರುವ ಗಿಡವನ್ನು ಮತ್ತು ಆಹ್ವಾನ ಪತ್ರಿಕೆಯನ್ನು ಖುಷಿಯಿಂದ ಸ್ವೀಕರಿಸಿ ನೂತನ ಜೀವನಕ್ಕೆ ಕಾಲಿಡುತ್ತಿರುವ ಅಭಿಮಾನಿಗೆ ಉಪ್ಪಿ ವಿಶ್ ಮಾಡಿದ್ದಾರೆ.


Click it and Unblock the Notifications











