ಹಾರಲಿದ್ದ ಹೆಲೆಕಾಪ್ಟರ್ ಬಳಿ ಓಡಿಬಂದು ಆತಂಕ ತಂದ ಸುದೀಪ್ ಅಭಿಮಾನಿ

By ದಾವಣಗೆರೆ ಪ್ರತಿನಿಧಿ

'ವಾಲ್ಮೀಕಿ ಜಾತ್ರೆ' ಸಮಾರಂಭ ಮುಗಿಸಿ ಕಿಚ್ಚ ಸುದೀಪ್ ಬೆಂಗಳೂರಿಗೆ ಹೆಲಿಕ್ಯಾಪ್ಟರ್ ಮೂಲಕ ಮರಳಲು ಸಜ್ಜಾಗಿದ್ದಾಗ ಅಭಿಮಾನಿಯಿಬ್ಬರು ಹೆಲಿಕಾಪ್ಟರ್ ಬಳಿ ಬಂದು ಹುಚ್ಚಾಟ ಮೆರೆದಿದ್ದು, ಕೆಲ ಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಿಸಿತು.

Recommended Video

ಹೆಲಿಕಾಪ್ಟರ್ ಬಳಿ ಓಡಿಬಂದ ಅಭಿಮಾನಿ ಕಂಡು ಗಾಬರಿಯಾದ ಸುದೀಪ್ | Filmibeat Kannada

ಹರಿಹರದ ರಾಜನಹಳ್ಳಿಯ ವಾಲ್ಮೀಕಿ ಮಠದಲ್ಲಿ ಮಂಗಳವಾರ ನಡೆದ 3ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಚಿತ್ರನಟ ಸುದೀಪ್ ಗೆ ವಾಲ್ಮೀಕಿ ರತ್ನ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.

ನಂತರ ಬೆಂಗಳೂರಿಗೆ ಹೆಲಿಕಾಪ್ಟರ್‌ನಲ್ಲಿ ಹಿಂದಿರುಗಲು ಸಜ್ಜಾಗಿದ್ದರು. ಸುದೀಪ್ ಹೆಲಿಕಾಪ್ಟರ್‌ನಲ್ಲಿ ಕೂತು, ಹೆಲಿಕಾಪ್ಟರ್ ಸಹ ಶುರುವಾಗಿ ಇನ್ನೇನು ಹಾರಬೇಕು ಎನ್ನುವಾಗ ಸುತ್ತಲೂ ನೆರೆದಿದ್ದ ಪೊಲೀಸರ ಕಣ್ಣು ತಪ್ಪಿಸಿಕೊಂಡು ಹೆಲಿಪ್ಯಾಡ್ ಯುವಕನೊಬ್ಬ ಓಡಿ ಬಂದು ಹೆಲಿಕಾಪ್ಟರ್ ಅನ್ನು ತಬ್ಬಿ ಹಿಡಿದಿದ್ದಾನೆ.

A Fan Ran Into The Helipad While Sudeeps Choper Ready To Fly


ಇದು ಸ್ವತಃ ಸುದೀಪ್ ಗೆ, ಅಲ್ಲಿದ್ದ ಪೊಲೀಸರಿಗೆ, ಹೆಲಿಕಾಪ್ಟರ್ ಚಾಲಕನಿಗೆ ಆತಂಕ ತಂದಿತು. ಕೂಡಲೇ ಹೆಲಿಕಾಪ್ಟರ್ ಅನ್ನು ಬಂದ್ ಮಾಡಿಸಿ ಹುಚ್ಚು ಅಭಿಮಾನಿಯನ್ನು ಹೆಲಿಕಾಪ್ಟರ್‌ನಿಂದ ದೂರ ಕರೆದೊಯ್ಯಲಾಯಿತು. ಆ ವೇಳೆಗೆ ಮತ್ತೊಬ್ಬ ಅಭಿಮಾನಿ ಹೆಲಿಕಾಪ್ಟರ್ ಬಳಿ ಬಂದು ಹೆಲಿಕಾಪ್ಟರ್‌ನ ಬಾಗಿಲು ತೆಗೆದು ಸುದೀಪ್ ಜೊತೆ ಸೆಲ್ಫಿ ತೆಗೆಯಲು ಮುಂದಾದ ಅವನನ್ನೂ ಪೊಲೀಸರು ಹಿಡಿದು ಒಯ್ದರು.

ಹುಕ್ಕಿ ಹರಿದ ಅಭಿಮಾನ: ಬ್ಯಾರಿಕೇಡ್-ಮೀಡಿಯಾ ಗ್ಯಾಲರಿ ಧ್ವಂಸ
ನಿನ್ನೆ ಮಧ್ಯಾಹ್ನ ಕಾರ್ಯಕ್ರಮಕ್ಕೆ ನಟ ಸುದೀಪ್ ಆಗಮನದ ವೇಳೆ ಅಭಿಮಾನಿಗಳು ಹುಚ್ಚೆದ್ದಿದ್ದರಿಂದ ನೂಕುನುಗ್ಗಲು ಉಂಟಾಗಿತ್ತು.

ನಟ ಸುದೀಪ್ ಬರುತ್ತಿದ್ದಂತೆ ನೂಕು ನುಗ್ಗಲು ಉಂಟಾಗಿ, ಖುರ್ಚಿ, ಬ್ಯಾರಿಕೇಡ್ ಗಳನ್ನ ಕಿತ್ತಾಗಿ ಸ್ಟೇಜ್ ಬಳಿ ಓಡಿ ಬಂದರು. ಈ ವೇಳೆ ಪೊಲೀಸರ ಎಷ್ಟೇ ಹರಸಾಹಸ ಪಟ್ಟರು, ಏನು ಪ್ರಯೋಜನವಾಗಲಿಲ್ಲ, ಇನ್ನೂ ಅಭಿಮಾನಿಗಳ ಅತೀ ರೇಖಾದ ವರ್ತನೆಯಿಂದ ನಟ ಸುದೀಪ್ ಸ್ಟೇಜ್ ಮೇಲಿದ್ದ ಜನರನ್ನ ತೆರವು ಗೊಳಿಸಿದರು ಏನು ಪ್ರಯೋಜನವಾಗಲಿಲ್ಲ. ಇಷ್ಟಕ್ಕು ಜನ ಬಗ್ಗದಿದ್ದೀಗ ಕೇವಲ 10 ನಿಮಿಷದಲ್ಲಿ ಸ್ಟೇಜ್ ನಿಂದ ಸುದೀಪ್ ನಿರ್ಗಮಿಸಿದರು. ಈ ವೇಳೆ ನೂರಾರು ಚೇರ್ ಗಳು, ಬ್ಯಾರಿಕೇಡ್ ಗಳನ್ನ ಮುರಿದು ಹೋಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಉಂಟಾಯಿತು.

ಅಭಿಮಾನಿಗಳು ಮತ್ತಷ್ಟು ಹುರುಪೆದ್ದು ವೇದಿಕೆ ಬಳಿ ಬಂದು ಅಭಿಮಾನದ ಹೊಳೆ ಹರಿಸಲು ಮುಂದಾದಾಗ ಬ್ಯಾರಿಕೇಡ್ ಗಳನ್ನೇ ನೆಲಕ್ಕುರಿಳಿಸಿ, ಜಿಗಿದು, ನೆಗೆದು ಮಾಧ್ಯಮದವರ ಗ್ಯಾಲರಿಯಲ್ಲಿದ್ದ ಚೇರ್ ಗಳ ಪುಡಿ ಪುಡಿಗೊಳಿಸಿ ಹುಚ್ಚು ಅಭಿಮಾನ ಪ್ರದರ್ಶಿಸುತ್ತಾ ವೇದಿಕೆಯತ್ತ ನುಗ್ಗಿದರು.

More from Filmibeat

English summary
A fan ran into the helipad while Sudeep's choper is about to fly. Police took that fan away from the helipad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X