»   » ಕಿಚ್ಚ ಸುದೀಪ್ ಗಾಗಿ ಉಪವಾಸ ಕುಳಿತ ಅಭಿಮಾನಿ

ಕಿಚ್ಚ ಸುದೀಪ್ ಗಾಗಿ ಉಪವಾಸ ಕುಳಿತ ಅಭಿಮಾನಿ

Posted By:
Subscribe to Filmibeat Kannada
ಕಿಚ್ಚ ಸುದೀಪ್ ಗಾಗಿ ಉಪವಾಸ ಕುಳಿತ ಅಭಿಮಾನಿ | Oneindia Kannada

ನಾನು ಅಭಿಮಾನಿಗಳ ಅಭಿಮಾನಿ ಎನ್ನುವ ಮಾತನ್ನ ಹೇಳಿದ್ದ ನಟ ಕಿಚ್ಚ ಸುದೀಪ್. ಸ್ಟಾರ್ ನಟರಿಗೆ ಕೆಲವೊಮ್ಮೆ ಅಭಿಮಾನಿಗಳನ್ನ ನಿಭಾಯಿಸುವುದೇ ತಲೆ ನೋವಾಗಿ ಪರಿಣಮಿಸಿ ಬಿಡುತ್ತೆ. ಅತಿಯಾದರೆ ಅಮೃತನೂ ವಿಷ ಅನ್ನುವುದು ಸಾಕಷ್ಟು ಭಾರಿ ಸಾಭೀತಾಗುತ್ತದೆ.

ಸದ್ಯ ಈಗ ಕಿಚ್ಚ ಸುದೀಪ್ ಅವರಿಗೆ ಅಭಿಮಾನಿಯ ಅಭಿಮಾನ ಅತಿರೇಕದ ನಡವಳಿಕೆ ತಲೆನೋವಾಗಿದೆ. ಈ ರೀತಿ ಸುದೀಪ್ ಅವರಿಗೆ ಆಗುತ್ತಿರುವುದು ಮೊದಲೇನಲ್ಲಾ. ಇಂತಹ ಸಂದರ್ಭವನ್ನ ಈಗಾಗಲೇ ಸಾಕಷ್ಟು ಭಾರಿ ನಿಭಾಯಿಸಿದ್ದಾರೆ ಅಭಿನಯ ಚಕ್ರವರ್ತಿ.

ತವರು ಮನೆಯಲ್ಲಿ ಫ್ಯಾನ್ಸ್ ಜೊತೆಗೆ ಹುಟ್ಟುಹಬ್ಬ ಆಚರಿಸಿದ ರಾಧಿಕಾ ಪಂಡಿತ್

ಸದ್ಯ ಕಿಚ್ಚನಿಗಾಗಿ ಉಪವಾಸ ಮಾಡುತ್ತೇನೆ ಎಂದು ಅಭಿಮಾನಿಯೊಬ್ಬ ನಿರ್ಧಾರ ಮಾಡಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಯಾಕೆ ಉಪವಾಸ ಮಾಡುತ್ತಿದ್ದಾನೆ? ಯಾರು ಈತ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

ಕಿಚ್ಚನಿಗಾಗಿ ಅಭಿಮಾನಿಯ ಉಪವಾಸ

ಕಿಚ್ಚ ಸುದೀಪ್ ಅವರನ್ನ ಭೇಟಿ ಮಾಡಬೇಕು ಎನ್ನುವ ಉದ್ದೇಶದಿಂದ ಅಭಿಮಾನಿಯೊಬ್ಬ ಉಪವಾಸ ಮಾಡಲು ಮುಂದಾಗಿದ್ದಾನೆ. ಕಿಚ್ಚನ ಭೇಟಿಯೊಂದೇ ಇದರ ಉದ್ದೇಶವಾಗಿದ್ಯಂತೆ.

ಸುದೀಪ್ ವಿಚಿತ್ರ ಅಭಿಮಾನಿ

ಕನಕಪುರ ಬಳಿ ಇರುವ ಸಾತನೂರಿನ ನಾಗಸೊಂಡೆ ಗ್ರಾಮದಲ್ಲಿ ವಾಸವಾಗಿರುವ ಕಿಚ್ಚ ಶಿವು ಉಪವಾಸ ಮಾಡುತ್ತೇನೆ ಎಂದು ಮುಂದಾಗಿದ್ದಾನೆ. ಸುದೀಪ್ ಅವರನ್ನ ನೋಡಬೇಕು ಎಂದು ಈ ರೀತಿ ಮಾಡುತ್ತಿದ್ದಾನೆ. ಈ ವಿಚಾರವನ್ನ ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾನೆ.

ಅಭಿಮಾನಿಗಳ ಆಕ್ರೋಶ

ಸುದೀಪ್ ಗಾಗಿ ಉಪವಾಸ ಮಾಡುತ್ತೇನೆ ಎಂದು ವಿಡಿಯೋ ಅಪ್ಲೋಡ್ ಮಾಡಿದ ತಕ್ಷಣ ಮಿಕ್ಕ ಅಭಿಮಾನಿಗಳು ಶಿವು ನಿಲುವಿಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸುದೀಪ್ ಅವರನ್ನ ಭೇಟಿ ಮಾಡಲು ಸಾವಿರ ದಾರಿಯಿದೆ ಅದನ್ನ ಬಿಟ್ಟು ಈ ರೀತಿ ಮಾಡುವುದು ತಪ್ಪು ಎಂದಿದ್ದಾರೆ.

ನೋವಿನಲ್ಲಿರುವ ಜಾಹ್ನವಿಗೆ ಸಂತಸ ತಂದ ಕಪೂರ್ ಸಹೋದರಿಯರು

ಪದೆ ಪದೆ ಮರುಕಳಿಸುತ್ತಿದೆ ಅತಿರೇಕದ ಅಭಿಮಾನ

ಕಳೆದ ವರ್ಷದಲ್ಲಿ ಹೆಬ್ಬುಲಿ ಸಿನಿಮಾ ಬಿಡುಗಡೆ ಆದ ನಂತರ ಸುದೀಪ್ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಕೆಲ ಊರಿಗಳಿಗೆ ಭೇಟಿ ಕೊಟ್ಟಿದ್ದರು. ಆ ಸಮಯದಲ್ಲಿ ನಮ್ಮ ಊರಿಗೆ ಬರಲಿಲ್ಲ ಎನ್ನುವ ಉದ್ದೇಶದಿಂದ ಅಭಿಮಾನಿಗಳಿಬ್ಬರು ಪೆಟ್ರೋಲ್ ಸುರಿದುಕೊಂಡು ಸಾಯಲು ಮುಂದಾಗಿದ್ದರು. ಆಗ ಕಿಚ್ಚ ಅವರನ್ನ ಮನೆ ಬಳಿ ಕರೆಸಿಕೊಂಡು ಬುದ್ದಿವಾದ ಹೇಳಿದ್ದರು.

ಅತಿಯಾಗದಿರಲಿ ಅಭಿಮಾನ

ಸ್ಟಾರ್ ಗಳು ಅಂದಾಗ ಅವರಿಗೆ ಅಭಿಮಾನಿಗಳು ಇರುತ್ತಾರೆ. ಅದಕ್ಕಾಗಿ ಅತಿರೇಕವಾಗಿ ವರ್ತಿಸುವುದು ಯಾರಿಗೂ ಇಷ್ಟವಾಗುವುದಿಲ್ಲ. ಕಲಾವಿದರು ಇರುವುದು ಜನರನ್ನ ರಂಜಿಸಲು ಅವರಿಗೆ ಅವರ ಕೆಲಸವನ್ನ ಮಾಡಲು ಫ್ಯಾನ್ಸ್ ಅವಕಾಶ ಮಾಡಿಕೊಡಬೇಕೆ ಹೊರತು. ತಲೆನೋವು ಮಾಡಬಾರದು.

ಸದ್ದಿಲ್ಲದೇ ಮದುವೆ ದಿನಾಂಕ ನಿಗದಿ ಮಾಡಿದ ದೀಪಿಕಾ-ರಣ್ವೀರ್ ಕುಟುಂಬ.!

English summary
A fan start fasting for Kannada actor Sudeep, a fan of Kanakapura, has begun fasting to meet Sudeep, Sudeep's fan has been uploaded by video about it on FaceBook.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada