twitter
    For Quick Alerts
    ALLOW NOTIFICATIONS  
    For Daily Alerts

    ಅಂದು 'ಬಂಗಾರದ ಮನುಷ್ಯ', ಈಗ 'ಯಜಮಾನ': ಇದೇ ನಿಜವಾದ ಗೆಲುವು

    |

    Recommended Video

    Yajamana Movie: ಅಂದು 'ಬಂಗಾರದ ಮನುಷ್ಯ', ಈಗ 'ಯಜಮಾನ': ಇದೇ ನಿಜವಾದ ಗೆಲುವು | FILMIBEAT KANNADA

    ಸಿನಿಮಾ ಮಾಧ್ಯಮ ಅನ್ನೋವುದು ಪ್ರೇಕ್ಷಕರಿಗೆ ಬಹುಬೇಗ ಅರ್ಥವಾಗುತ್ತೆ. ಚಿತ್ರಗಳಲ್ಲಿ ನೋಡಿದ ಅನೇಕ ವಿಷ್ಯಗಳನ್ನ ಇಂದಿನ ಯುವಕರು ಅನುಕರಣೆ ಮಾಡ್ತಾರೆ. ಕೆಲಸವು ಪಾಸಿಟೀವ್ ಇರಬಹುದು, ಇನ್ನು ಕೆಲವು ನೆಗಿಟೀವ್ ಇರಬಹುದು.

    ಅಂದು ಡಾ ರಾಜ್ ಕುಮಾರ್ ಅಭಿನಯಿಸಿದ್ದ 'ಬಂಗಾರದ ಮನುಷ್ಯ' ಸಿನಿಮಾ ರಿಲೀಸ್ ಆದಾಗ, ಹಳ್ಳಿಗಳನ್ನ ಬಿಟ್ಟು ನಗರಕ್ಕೆ ಬಂದು ಜೀವನ ಮಾಡ್ತಿದ್ದ ಅನೇಕ ಮಂದಿ ಮತ್ತೆ ಹಳ್ಳಿಗೆ ಹೋಗಿ ವ್ಯವಸಾಯ ಮಾಡಿದ್ರು ಎಂಬುದನ್ನ ಕೇಳಿದ್ದೀವಿ.

    'ಯಾರದ್ದೂ ಕರೆಕ್ಟ್ ಪಿಕ್ಚರ್ ಸಿಗಲ್ಲ': ಕಲೆಕ್ಷನ್ ಬಗ್ಗೆ 'ಯಜಮಾನ' ನೇರ ಮಾತು 'ಯಾರದ್ದೂ ಕರೆಕ್ಟ್ ಪಿಕ್ಚರ್ ಸಿಗಲ್ಲ': ಕಲೆಕ್ಷನ್ ಬಗ್ಗೆ 'ಯಜಮಾನ' ನೇರ ಮಾತು

    ಇದೀಗ, ದರ್ಶನ್ ಅಭಿನಯದ ಯಜಮಾನ ಸಿನಿಮಾ ನೋಡಿದ ಕೆಲವು ಅಭಿಮಾನಿ ಅಥವಾ ಸಾಮಾನ್ಯ ಜನರು ಹಳ್ಳಿಗೆ ಹೋಗಿ ತಮ್ಮದೇ ಬ್ರ್ಯಾಂಡ್ ಹುಟ್ಟುಹಾಕಲು ಮುಂದಾಗಿದ್ದಾರೆ. ಅಷ್ಟಕ್ಕೂ, ಯಾರದು ಆ ಅಭಿಮಾನಿ? ಮುಂದೆ ಓದಿ......

    ಯಜಮಾನ ರೈತರ ಮಕ್ಕಳಿಗೆ ಒಳ್ಳೆಯ ಸಿನಿಮಾ

    ಯಜಮಾನ ರೈತರ ಮಕ್ಕಳಿಗೆ ಒಳ್ಳೆಯ ಸಿನಿಮಾ

    ಯಜಮಾನ ಚಿತ್ರವನ್ನ ಮೆಚ್ಚಿಕೊಂಡವರು ಇದ್ದಾರೆ, ಇಷ್ಟ ಪಡದೆ ಇರೋರು ಇದ್ದಾರೆ. ಆದ್ರೆ, ಇಲ್ಲೊಬ್ಬ ಅಭಿಮಾನಿ ತನಗೆ ಯಾಕೆ ಇಷ್ಟ ಆಗಿದೆ ಎಂಬುದನ್ನ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. '' ರೈತರ ಮಕ್ಕಳಿಗೆ ಒಳ್ಳೆ ಸಿನಿಮಾ. ತಿನ್ನೋಕೆ ಅನ್ನ ಎಷ್ಟು ಮುಖ್ಯಾನೋ ಹಾಗೆ ಅಡುಗೆ ಮಾಡೋ ಎಣ್ಣೆನು ಅಷ್ಟೇ ಮುಖ್ಯ. ಪಿಜಾ ಬರ್ಗರ್ ತಿನ್ನೋರಿಗೆ ಅದರ ಬೆಲೆ ಗೊತ್ತಿಲ್ಲ''

    ದರ್ಶನ್ ಪುತ್ರ ವಿನೀಶ್ ಚಿತ್ರರಂಗಕ್ಕೆ ಬರೋದು ನೂರಕ್ಕೆ ನೂರರಷ್ಟು ನಿಜದರ್ಶನ್ ಪುತ್ರ ವಿನೀಶ್ ಚಿತ್ರರಂಗಕ್ಕೆ ಬರೋದು ನೂರಕ್ಕೆ ನೂರರಷ್ಟು ನಿಜ

    ಬ್ಯಾಕ್ ಟು ಮೈ ವಿಲೇಜ್

    ಬ್ಯಾಕ್ ಟು ಮೈ ವಿಲೇಜ್

    ''ನಮ್ಮ ತಾತ, ನಮ್ಮ ಅಪ್ಪ ಮಾಡುತ್ತಿದ್ದ ಕಸುಬನ್ನ ಇಂದಿನ ಮಕ್ಕಳು ಕೆಲವರು ಮುಂದುವರಿಸುತ್ತಿದ್ದಾರೆ, ಇನ್ನು ಕೆಲವರು ಬಿಟ್ಟಿರ್ತಾರೆ. ಮುಂದಿನ ಪೀಳಿಗೆಗೆ ನಮ್ಮ ಜನಾಂಗ ಇತ್ತು ಅನ್ನೋದೇ ಮರೆತುಹೋಗುತ್ತೆ. ಸೋ, ಹಳ್ಳಿಲಿ ಉಳುಮೆ ಮಾಡಿ ನೇಗಲಿಗೆ ಹೆಗಲು ಕೊಟ್ಟರು ಪರವಾಗಿಲ್ಲ. ಇಲ್ಲಿ ಯಾರದ್ದೋ ಮಾತಿಗೆ ಕೈಕಟ್ಟೋ ಜವಾನ ಆಗಲ್ಲ. ಬ್ಯಾಕ್ ಟು ಮೈ ವಿಲೇಜ್'' ಎಂದು ತಮ್ಮ ಊರಿಗೆ ವಾಪಸ್ ಆಗುತ್ತಿರುವುದಾಗಿ ಹೇಳಿದ್ದಾನೆ.

    ವಿಮರ್ಶಕರ ಲೆಕ್ಕಾಚಾರದಲ್ಲಿ 'ಯಜಮಾನ' ಹೇಗಿದೆ: ಯಾವ ಪತ್ರಿಕೆ ಏನು ಹೇಳಿದೆ?ವಿಮರ್ಶಕರ ಲೆಕ್ಕಾಚಾರದಲ್ಲಿ 'ಯಜಮಾನ' ಹೇಗಿದೆ: ಯಾವ ಪತ್ರಿಕೆ ಏನು ಹೇಳಿದೆ?

    ರಾಜಕುಮಾರ ನೋಡಿ ಬದಲಾಗಿದ್ದ ಜನ

    ರಾಜಕುಮಾರ ನೋಡಿ ಬದಲಾಗಿದ್ದ ಜನ

    ಈ ಹಿಂದೆ ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ 'ರಾಜಕುಮಾರ' ಚಿತ್ರ ನೋಡಿ ಅನೇಕ ಮಂದಿ ವೃದ್ಧಾಶ್ರಾಮದಲ್ಲಿ ಬಿಟ್ಟಿದ್ದ ತಮ್ಮ ತಂದೆ-ತಾಯಿಯನ್ನ ಮನೆಗೆ ಕರೆದುಕೊಂಡು ಬಂದಿದ್ದರು ಎಂಬುದನ್ನ ಕೂಡ ಕೇಳಿದ್ದೀವಿ.

    'ಯಜಮಾನ' ನೋಡಿ ಸಿಂಪಲ್ ಸುನಿ ಬರೆದ ವಿಮರ್ಶೆ ಇದು'ಯಜಮಾನ' ನೋಡಿ ಸಿಂಪಲ್ ಸುನಿ ಬರೆದ ವಿಮರ್ಶೆ ಇದು

    ಜನರ ಮನ ಗೆದ್ದ ಯಜಮಾನ

    ಜನರ ಮನ ಗೆದ್ದ ಯಜಮಾನ

    ಯಜಮಾನ ಸಿನಿಮಾದಲ್ಲಿ ರೈತರ ಬಗ್ಗೆ ಒಳ್ಳೆಯ ಸಂದೇಶವಿದೆ. ನಾವು, ನಮ್ಮ ಕಸುಬು, ನಮ್ಮ ಕೃಷಿ ಎಂಬ ಮನೋಭಾವವನ್ನ ಸಿನಿಮಾದಲ್ಲಿ ತೋರಿಸಲಾಗಿದೆ. ಇದು ಇಂದಿನ ಯುವಕರಿಗೆ ಪ್ರೋತ್ಸಾಹವಾದರೂ ಅಚ್ಚರಿ ಇಲ್ಲ ಎನ್ನುವುದಕ್ಕೆ ಇದೊಂದು ಉದಾಹರಣೆ ಅಷ್ಟೇ.

    ''ಯಜಮಾನ' ಚೆನ್ನಾಗಿಲ್ಲ ಅಂತ ಒಬ್ಬರೂ ಹೇಳಿಯೇ ಇಲ್ಲ'' - ಶೈಲಜಾ ನಾಗ್''ಯಜಮಾನ' ಚೆನ್ನಾಗಿಲ್ಲ ಅಂತ ಒಬ್ಬರೂ ಹೇಳಿಯೇ ಇಲ್ಲ'' - ಶೈಲಜಾ ನಾಗ್

    ವಿಡಿಯೋ ಬೈಟ್ ನಲ್ಲೂ ಇದೇ ಮಾತು ಹೇಳಿದ್ರು.!

    ವಿಡಿಯೋ ಬೈಟ್ ನಲ್ಲೂ ಇದೇ ಮಾತು ಹೇಳಿದ್ರು.!

    ಸಿನಿಮಾ ರಿಲೀಸ್ ಆದಾಗಲೂ ವ್ಯಕ್ತಿಯೊಬ್ಬರ ಮಾಧ್ಯಮವೊಂದರಲ್ಲಿ ಮಾತನಾಡುವಾಗ, ಯಜಮಾನ ಸಿನಿಮಾ ತುಂಬಾ ಚೆನ್ನಾಗಿದೆ, ರೈತರಿಗೆ ಅತ್ಯುತ್ತಮವಾದ ಸಂದೇಶವಿದೆ. ನಾನು ನಮ್ಮ ಊರಿಗೆ ಹೋಗಿ ನಮ್ಮ ತಂದೆ-ತಾಯಿಯನ್ನ ನೋಡಬೇಕು ಎಂದು ಹೇಳಿದ್ರು. ಇದು ಜೋಶ್ ನಲ್ಲಿ ಬಂದ ಮಾತಾ ಅಥವಾ ನಿಜ್ಕಕೂ ಪ್ರಭಾವ ಆಗಿದ್ಯಾ? ಗೊತ್ತಿಲ್ಲ. ಆದ್ರೆ, ಸಿನಿಮಾದಿಂದ ಇಂತಹ ಬೆಳವಣಿಗೆ ಸಾಧ್ಯ ಎಂಬುದನ್ನ ಈ ಹಿಂದೆ ಕೂಡ ನೋಡಿರುವುದರಿಂದ ಇದನ್ನ ನಂಬಲೇಬೇಕು.

    ಇದು ಅಪ್ಪು ಅಭಿಮಾನಿ

    ಇದು ಅಪ್ಪು ಅಭಿಮಾನಿ

    ಅಂದ್ಹಾಗೆ, ಈ ಕಾಮೆಂಟ್ ಬಗ್ಗೆ ಕ್ರಾಸ್ ಚೆಕ್ ಮಾಡೋಣ ಅಂತ ಹುಡುಕಿದಾಗ, ಈತನ ಖಾತೆಯಲ್ಲಿ ಪುನೀತ್ ರಾಜ್ ಕುಮಾರ್ ಫೋಟೋ, ಪೋಸ್ಟರ್ ಗಳೇ ಹೆಚ್ಚಿದ್ದವು. ಹೆಸರಿನಲ್ಲೂ ಜೇಮ್ಸ್ ಅಂತ ಇದೆ. ಅಲ್ಲಿಗೆ ಈತ ಪುನೀತ್ ಅಭಿಮಾನಿ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತೆ. ಅದಕ್ಕೂ ಮೇಲೆ ಇದು ಫೇಕ್ ಖಾತೆನಾ ಸದ್ಯಕ್ಕೆ ಗೊತ್ತಿಲ್ಲ. ಆದ್ರೆ, ಆತ ಮಾಡಿರುವ ಕಾಮೆಂಟ್ ನೋಡಿದ್ರೆ ಯಜಮಾನ ಸಿನಿಮಾದ ಪ್ರಭಾವ ಕೆಲಸ ಮಾಡಿದೆ ಎನ್ನಬಹುದು.

    English summary
    Puneeth rajkumar's fan was return back to his village after the watching darshan starrer yajamana movie. its biggest victory of this movie.
    Thursday, March 7, 2019, 16:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X