Run Antony ಮೂಲಕ 'ಸಂಧೀಲ್ ಸಮಾರಾಧನೆ' ಮತ್ತೆ ಶುರು
ಕನ್ನಡ ಸಿನಿಮಾಗಳಿಗೆ ಪ್ರಚಾರ ನೀಡಲು ನಾ ಮುಂದು ತಾ ಮುಂದು ಎಂದು ಫೇಸ್ ಬುಕ್ ಪುಟಗಳ ಅಡ್ಮಿನ್ ಗಳು ಹಾತೊರೆಯುವ ಕಾಲ ಬಹುಶಃ ಬಂದಿದೆ ಎನ್ನಬಹುದು, ವಿಭಿನ್ನ, ವಿಶಿಷ್ಟ ಪ್ರಚಾರದ ವೈಖರಿಯೂ ಕೂಡಾ ಇದಕ್ಕೆ ಕಾರಣ ಎನ್ನಬಹುದು.
ಲೂಸಿಯಾ, ಉಳಿದವರು ಕಂಡಂತೆ, ಗೋಧಿ ಬಣ್ಣ ಸಾಧಾರಾಣ ಮೈಕಟ್ಟು ನಂತರ ವಿನಯ್ ರಾಜ್ ಕುಮಾರ್ ಅಭಿನಯದ ರನ್ Antony ಕೂಡಾ ವಿಭಿನ್ನ ರೀತಿ ಪ್ರಚಾರದ ಮೂಲಕ ಗಮನ ಸೆಳೆದಿದ್ದು ಸುಳ್ಳಲ್ಲ.
#irunawayfrom ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಚಿತ್ರ ತಂಡ ಆರಂಭಿಸಿದ ವಿನೂತನ ಕ್ರೇಜ್ 'ಸಂಧೀಲ್ ಸಮಾರಾಧನೆ' ಕೂಡಾ ಬಳಸಿಕೊಂಡು ತನ್ನದೇ ಆದ ರೀತಿಯಲ್ಲಿ ವಿಡಿಯೋ ಮಾಡಿ, ಚಿತ್ರಕ್ಕೆ ಪ್ರಚಾರ ನೀಡಿದೆ. ವಿಡಿಯೋದಲ್ಲಿ ಏನಿದೆ ನೀವೇ ನೋಡಿ ಆನಂದಿಸಿ

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಸೇರಿದಂತೆ ಹಲವಾರು ನಟರುಗಳ ಮಿಮಿಕ್ರಿ ಮೂಲಕ ಜನಪ್ರಿಯತೆ ಗಳಿಸಿರುವ ಜಯಂತ್ ಪಿ ಬೆಳ್ಳೂರು ಅವರು ಈ ತಂಡಕ್ಕೆ ಕ್ಯಾಪ್ಟನ್. ಉಳಿದಂತೆ ದಿಲೀಪ್ ಭಾರದ್ವಾಜ್, ಅಭಿಜೀತ್ ಲಕ್ಷ್ಮಿನರಸಿಂಹ, ಸುಘೋಶ್ ವೀರಾಂಬುಧಿ, ನಮ್ದುಕೆ ತಂಡದ ಶ್ರವಣ್ ನಾರಾಯಣ್, ಗಾಯಕಿ ಸ್ಪರ್ಶ, ಸುಷ್ಮಾ ಸಂದೀಪ್ ಅವರಿದ್ದಾರೆ.
ಒಂದು ದೊಡ್ಡ ವೇದಿಕೆಯಾಗಲಿ, ಅಥವಾ ಒಂದು ಸಣ್ಣ ಸಂದಿಯಾಗಲಿ, ಎಲ್ಲರೂ ಒಟ್ಟಿಗೆ ಸಮಾರಾಧನೆ ಮಾಡೋಣ, ಹಬ್ಬ ಆಚರಿಸೋಣ ಎಂಬ ತತ್ತ್ವದೊಂದಿಗೆ ಹುಟ್ಟಿಕೊಂಡ ಸಂಧೀಲ್ ಸಮಾರಾಧನೆ ತಂಡ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದೆ.
ಈ ಬಾರಿ ಇರುವೆ.ಇನ್ ಸಹಯೋಗ ಕೂಡಾ ಇದೆ. ಮುಂದೆ ಕೂಡಾ ಇದೇ ರೀತಿ ಹಾಸ್ಯ, ವಿಡಂಬನೆ, ಅಣಕುಗಳನ್ನು ಸಂಧೀಲ್ ಸಮಾರಾಧನೆ ತಂಡ ತನ್ನ ಫೇಸ್ ಬುಕ್ ಪುಟದಲ್ಲಿ ತುಂಬಿಸಲಿ ಎಂಬುದು ಫಿಲ್ಮಿಬೀಟ್ ತಂಡದ ಆಶಯ.


Click it and Unblock the Notifications











