ಮದುವೆ ನಂತರ ನಾನು 02 -03 ದಿನ ತುಂಬಾ ನರ್ವಸ್ ಆಗಿದ್ದೆ ಎಂದ ತರುಣ್ ಸುಧೀರ್,ವಿಡಿಯೋ ವೈರಲ್..!
ಎಲ್ಲ ಜಾತಿಯಲ್ಲಿಯೂ ಪ್ರೀತಿ ಇದೆ, ಆದರೆ ಪ್ರೀತಿಗೆ ಜಾತಿ ಧರ್ಮ ಇಲ್ಲ ಎನ್ನುವುದನ್ನು ನಿರೂಪಿಸಿದವರು ತರುಣ್ ಸುಧೀರ್ ಮತ್ತು ಸೋನಾಲ್ ಮಂಥೆರೊ. ಧರ್ಮಕ್ಕಿಂತ ಪ್ರೀತಿ ದೊಡ್ಡದು ಎಂದು ಸಾರಿ ಆಗಸ್ಟ್ ಹನ್ನೊಂದರಂದು ಹಿಂದೂ ಸಂಪ್ರದಾಯದಂತೆ ಮದುವೆಯಾದ ತರುಣ್ ಮತ್ತು ಸೋನಾಲ್, ಕಳೆದ ವಾರ ಸೆಪ್ಟೆಂಬರ್ ಒಂದರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಮತ್ತೊಮ್ಮೆ ಮದುವೆಯ ಬಂಧನಕ್ಕೊಳಗಾದರು. ಈ ವಿಚಾರ ನಿಮಗೆ ಗೊತ್ತಿರುವಂತಹದ್ದೇ. ಸದ್ಯದ ಸಮಾಚಾರ ಏನೆಂದರೆ ಈಗ ಈ ಮದುವೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಎಲ್ಲರನ್ನೂ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಿದೆ.
ಹೌದು, ಅಸಲಿಗೆ ಕ್ರೈಸ್ತ ಸಮುದಾಯದಂತೆ ಮದುವೆಯಾದ ನಂತರ, ಶುಭ ಹಾರೈಸಲು ಬಂದಿದ್ದ ಅತಿಥಿಗಳ ಮುಂದೆ ಇಂಗ್ಲೀಷ್‌ನಲ್ಲಿಯೇ ಭಾಷಣ ಮಾಡುವಂತೆ ತರುಣ್ ಸುಧೀರ್ ಅವರಿಗೆ ಸೋನಾಲ್ ಹೇಳಿದ್ದರು. ಅಷ್ಟೇ ಅಲ್ಲ ಏನೆಲ್ಲ ಮಾತನಾಡಬೇಕು ಎಂದು ಪುಟಗಟ್ಟಲೆ ಬರೆದು ಕೂಡ ಕೊಟ್ಟಿದ್ದರು.

ಆದರೆ, ತರುಣ್ ಸುಧೀರ್ ಮೊದಲಿಂದ ಕನ್ನಡ ಮಾತನಾಡುವ ಅಚ್ಛ ಕನ್ನಡಿಗ. ತರುಣ್ ಗೆ ಇಂಗ್ಲೀಷ್ ಮೊದಲಿಂದ ಕಬ್ಬಿಣದ ಕಡಲೆ. ಈ ಕಾರಣಕ್ಕೆ ನಾನು ಇಷ್ಟೊಂದು ನರ್ವಸ್ ಯಾವತ್ತೂ ಆಗಿರಲಿಲ್ಲ ಎಂದೇ ಎಲ್ಲರನ್ನು ಉದ್ದೇಶಿಸಿ ಮಾತು ಆರಂಭಿಸಿದ ತರುಣ್ ಸುಧೀರ್, ಆ ನಂತರ ಅಲ್ಲಿಯೇ ಇದ್ದ ಪೇಪರ್ ತೆಗೆದು ನನ್ನ ಪತ್ನಿ ಕಳೆದ ಎರಡು ಮೂರು ದಿನಗಳಿಂದ ಈ ಭಾಷಣವನ್ನು ತಯಾರಿಸಿದ್ದಾರೆ ಎಂದು ಹೇಳಿದರು. ಸ್ಪೀಚ್ ನೀನು ಇಂಗ್ಲೀಷ್‌ನಲ್ಲಿಯೇ ಮಾಡಬೇಕು ಎಂದು ಹೇಳಿದ್ದಾರೆ ಎಂದು ಹೇಳಿದರು.
ಮುಂದುವರೆದು ಅಷ್ಟು ಚೆನ್ನಾಗಿ ನನಗೆ ಇಂಗ್ಲೀಷ್ ಮಾತನಾಡಲು ಬರುವ ಹಾಗೇ ಇದ್ದಿದ್ದರೆ ನಾನು ಎಲ್ಲೋ ಯುಎಸ್‌ನಲ್ಲಿ ಕೆಲಸ ಮಾಡಿಕೊಂಡು ಇರುತ್ತಿದ್ದೆ, ಸಿನಿಮಾ ಇಂಡಸ್ಟ್ರೀಗೆ ಯಾಕೆ ಬರುತ್ತಿದೆ ಎಂದು ಕೂಡ ತರುಣ್ ಹೇಳಿದರು. ತರುಣ್ ಅವರ ಈ ಮಾತುಗಳಿಗೆ ಅಲ್ಲಿದ್ದವರು ಬಿದ್ದು ಬಿದ್ದು ನಕ್ಕಿದ್ದಾರೆ. ಸೋನಾಲ್ ಕೂಡ ತಮ್ಮ ಪ್ರೀತಿಯ ಗಂಡನ ಮಾತು ಕೇಳಿ ನಕ್ಕು ನಕ್ಕು ಸುಸ್ತಾಗಿದ್ದಾರೆ.
ಸದ್ಯಕ್ಕೆ ತರುಣ್ ಸುಧೀರ್ ಮತ್ತು ಸೋನಾಲ್ ಅವರ ಕ್ರೈಸ್ತ ಸಮುದಾಯದಂತೆ ನಡೆದ ಮದುವೆಯ ಈ ತುಣುಕು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಹತ್ತು ಹಲವು ಅಭಿಪ್ರಾಯಗಳು ಕೂಡ ವ್ಯಕ್ತವಾಗಿವೆ. ಒಬ್ಬರು ತರುಣ್ ಸುಧೀರ್ ಅವರ ಕನ್ನಡ ಪ್ರೇಮವನ್ನು ಕೊಂಡಾಡಿದ್ದರೆ, ಇನ್ನೂ ಒಬ್ಬರು ಪಾಪ ತರುಣ್ ಸರ್ ಎಂದಿದ್ದಾರೆ.
ಅಂದ್ಹಾಗೇ ಇವರಿಬ್ಬರ ನಡುವೆ ಪ್ರೇಮಾಂಕುರಕ್ಕೆ ಪರೋಕ್ಷವಾಗಿ ಕಾರಣವಾದ ದರ್ಶನ್, ಮೂರು ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಸಹಜವಾಗಿ ಈ ವಿಚಾರದಲ್ಲಿ ತರುಣ್ ಮತ್ತು ಸೋನಾಲ್ ಇಬ್ಬರಿಗೂ ಬೇಸರ ಇದ್ದೇ ಇದೆ. ಉಳಿದಂತೆ ಸೋನಾಲ್ ಮೂಲತಃ ಮಂಗಳೂರು. ತುಳು ಭಾಷೆಯ 'ಎಕ್ಕ ಸಕ್ಕ' ಸಿನಿಮಾದ ಮೂಲಕ ನಟನೆಗೆ ಕಾಲಿಟ್ಟಿದ್ದರು. ತುಳು ಭಾಷೆಯ ಸಿನಿಮಾಗಳಲ್ಲಿ ನಟಿಸಿದ ಬಳಿಕ 2018ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಅಲ್ಲಿಂದ ಇಲ್ಲಿವರೆಗೂ ಸುಮಾರು 12 ಸಿನಿಮಾಗಳಲ್ಲಿ ಸೋನಾಲ್ ಮಾಂತೆರೋ ನಟಿಸಿದ್ದಾರೆ. ಆ ಪೈಕಿ ರಾಬರ್ಟ್ ಕೂಡ ಒಂದು.


Click it and Unblock the Notifications











