ನಟ ಸುದೀಪ್ ಹೆಸರು ಹೇಳಿ ನೃತ್ಯ ನಿರ್ದೇಶಕನಿಂದ ಲೈಂಗಿಕ ದೌರ್ಜನ್ಯ ಆರೋಪ

ನಟ ಕಿಚ್ಚ ಸುದೀಪ್ ಹೆಸರು ಬಳಸಿ ನೃತ್ಯ ನಿರ್ದೇಶಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಅನ್ನಪೂರ್ಣೆಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಯುವತಿಯೊಬ್ಬರು ದೂರು ನೀಡಿದ್ದಾರೆ.

ಡ್ಯಾನ್ಸ್ ಮಾಸ್ಟರ್ ಪವನ್ ವಿರುದ್ಧ ಯುವತಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಪ್ರಜ್ಞೆ ತಪ್ಪುವ ದ್ರವ ನೀಡಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಯುವತಿ ದೂರು ಕೊಟ್ಟಿದ್ದಾರೆ. ಜನವರಿ 12 ರಂದು ಈ ಘಟನೆ ನಡೆದಿದೆ.

ನಟ ಸುದೀಪ್ ಜೊತೆಗೆ ನಿನಗೆ ನಟಿಸುವ ಅವಕಾಶ ಬಂದಿದೆ. ಒಂದು ಹೊಸ ಸಿನಿಮಾದಲ್ಲಿ ಸುದೀಪ್ ತಂಗಿ ಪಾತ್ರವನ್ನು ನೀನು ಮಾಡಬೇಕು ಎಂದು ಸುಳ್ಳು ಹೇಳಿ ಫೋಟೋ ಶೂಟ್ ಗೆ ಕರೆಸಿದ ಪವನ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಯುವತಿ ಆರೋಪ ಮಾಡಿದ್ದಾರೆ.

A Girl Lodged Complaint Against Dance Master Pawan

ಕಳೆದ ಮೂರು ವರ್ಷಗಳಿಂದ ಯುವತಿ ಪವನ್ ರಿಂದ ಡ್ಯಾನ್ಸ್ ಕಲಿಯುತ್ತಿದ್ದು, ಸಿನಿಮಾ ಅವಕಾಶ ನೀಡುವುದಾಗಿ ವಂಚನೆ ಮಾಡಿ ಈ ರೀತಿಯ ಕೃತ್ಯ ಎಸೆಗಿದ್ದಾನೆ ಎಂದು ಆರೋಪಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಪವನ್ ನನ್ನು ಠಾಣೆಗೆ ಕರೆಸಿ ವಿಚಾರಣೆ ಪ್ರಾರಂಭ ಮಾಡಿದ್ದಾರೆ.

ಪವನ್ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಹಾಗೂ 'ತಕದಿಮಿತ' ರಿಯಾಲಿಟಿ ಶೋದಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದ.

More from Filmibeat

English summary
A girl lodged complaint against dance master Pawan in Annapurneshwari nagar police station.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X