ವಯಸ್ಸಾಗಿರೋ ಅಂಬಿ ಪ್ರೇಕ್ಷಕರಿಗೆ ಬರೆದ ಪತ್ರದಲ್ಲೇನಿದೆ ?
Recommended Video

ಅಂಬಿಗೆ ವಯಸ್ಸಾಗಿದೆ. ಈ ಮಾತನ್ನ ನಾವು ಹೇಳ್ತಿಲ್ಲ, ಖುದ್ದು ಕಿಚ್ಚ ಸುದೀಪ್ ಅವರೇ ಹೇಳಿದ್ದಾರೆ. ಹೌದು ಕಿಚ್ಚ ಸುದೀಪ್ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಅಭಿನಯದ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದ ಮೊದಲ ಟೀಸರ್ ರಿಲೀಸ್ ಆಗಿದೆ. ಟೈಟಲ್ ನಿಂದಲೇ ಬಾರಿ ಕುತೂಹಲ ಮೂಡಿಸಿದ್ದ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಹಲವಾರು ವಿಶೇಷತೆಗಳಿಂದ ಕೂಡಿದೆ.
ಇಷ್ಟು ದಿನಗಳ ಕಾಲ ಅಂಬಿಯನ್ನ ತೆರೆ ಮೇಲೆ ನೋಡಿರುವುದಕಿಂತ ಭಿನ್ನವಾಗಿ ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ. ಈ ಸುದ್ದಿಯನ್ನ ಅಂಬಿಯವರೇ ಅಭಿಮಾನಿಗಳಿಗೆ ಪತ್ರ ಬರೆಯುವ ಮೂಲಕ ತಿಳಿಸಿದ್ದಾರೆ. ಅಂಬಿ ಬರೆದಿರುವ ಪತ್ರದಲ್ಲಿ ಏನಿದೆ? ಟೀಸರ್ ಮೂಲಕ ಏನನ್ನ ಹೇಳಲು ಹೊರಟಿದೆ ಸಿನಿಮಾತಂಡ ಇವೆಲ್ಲವನ್ನೂ ಡಿಟೇಲ್ ಆಗಿ ಹೇಳ್ತಿವಿ ಮುಂದೆ ಓದಿ..

ಅಂಬರೀಶ್ ಬರೆದರು ಪತ್ರ
ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾತಂಡ ಚಿತ್ರದ ಟೀಸರ್ ರಿಲೀಸ್ ಮಾಡಿದೆ. ವಿಭಿನ್ನವಾಗಿರೋ ಪ್ರಯತ್ನ ಮಾಡಬೇಕು ಅನ್ನೋ ನಿಟ್ಟಿನಲ್ಲಿ ಅಂಬಿ ಅವರಿಂದ ಅಭಿಮಾನಿಗಳಿಗಾಗಿ ಪತ್ರ ಬರೆಸಿದ್ದಾರೆ. ತಮ್ಮ ಜೀವನದ ಸಣ್ಣ ಜರ್ನಿಯನ್ನ ಈ ಮೂಲಕ ತಿಳಿಸಿದ್ದಾರೆ ಅಂಬಿ.

ಅಂಬಿ ಜರ್ನಿಯನ್ನ ಕಟ್ಟಿಕೊಡೋ ಪತ್ರ
ಮೂರು ನಿಮಿಷಗಳಿರೋ ಈ ಟೀಸರ್ ನಲ್ಲಿ ಅಂಬರೀಶ್ ಅವರ ಸಂಪೂರ್ಣ ಜರ್ನಿಯನ್ನ ಕಟ್ಟುಕೊಡಲಾಗಿದೆ. ಸಿನಿಮಾ ಪ್ರಾರಂಭ, ರಾಜಕೀಯ ಎಂಟ್ರಿ, ರಾಜಕೀಯದ ನಂತರದ ಸಿನಿಮಾಗಳು ಇವೆಲ್ಲವನ್ನೂ ಚಿಕ್ಕದಾಗಿ ಚೊಕ್ಕವಾಗಿ ತಿಳಿಸಿದ್ದಾರೆ ಅಂಬರೀಶ್ .

ಕಿಚ್ಚ ಗೆಳೆಯನಂತಹ ಮಗ ಎಂದ ಅಂಬಿ
ಪತ್ರದಲ್ಲಿ ಸುದೀಪ್ ಬಗ್ಗೆಯೂ ಅಂಬರೀಶ್ ಹೇಳಿಕೊಂಡಿದ್ದಾರೆ. ಸುದೀಪ್ ಒಳ್ಳೆ ಗೆಳೆಯನಂತಹ ಮಗ ಅವನ ಜೊತೆಯಲ್ಲಿ ಸಿನಿಮಾ ಮಾಡೋದಕ್ಕೆ ತುಂಬಾ ಖುಷಿ ಆಗುತ್ತೆ ಅನ್ನೋದನ್ನ ತಿಳಿಸಿದ್ದಾರೆ.

ಅಂಬಿ ಅಭಿಮಾನಿಗಳಿಗೆ ವಾರ್ನಿಂಗ್
ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಟೀಸರ್ ಮೂಲಕ ಜರ್ನಿಯ ಜೊತೆಯಲ್ಲಿ ಪಾತ್ರದ ಬಗ್ಗೆ ತಿಳಿಸಿದ್ದಾರೆ ಅಂಬರೀಶ್. ಪತ್ರದ ಕೊನೆಯಲ್ಲಿ ಪಕ್ಕಾ ರೆಬಲ್ ಸ್ಟಾರ್ ಸ್ಟೈಲ್ ನಲ್ಲಿ ಸಿನಿಮಾ ನೊಡಲೇ ಬೇಕು ಎಂದು ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.

ಚಿತ್ರೀಕರಣ ಶುರು ಮಾಡಿರೋ ಟೀಂ
ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾವನ್ನ ಗುರುದತ್ ಗಾಣಿಗ ನಿರ್ದೇಶನ ಮಾಡುತ್ತಿದ್ದಾರೆ. ಜಾಕ್ ಮಂಜು ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದು ಕಿಚ್ಚ ಕ್ರಿಯೇಷನ್ಸ್ ನಲ್ಲಿ ಚಿತ್ರ ತೆರೆಗೆ ಬರಲಿದೆ. ಸುದೀಪ್ ಜೊತೆಯಲ್ಲಿ ಶೃತಿ ಹರಿಹರನ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಅಂಬರೀಶ್ ಜೋಡಿಯಾಗಿ ಸುಹಾಸಿನಿ ಕಾಣಿಸಿಕೊಳ್ತಿದ್ದಾರೆ.


Click it and Unblock the Notifications











