twitter
    For Quick Alerts
    ALLOW NOTIFICATIONS  
    For Daily Alerts

    'ಓಂ' ಹಿಟ್ ಆಗಿದ್ದಕ್ಕೆ ಇಷ್ಟೆಲ್ಲಾ ಸಹಿಸಿಕೊಳ್ಬೇಕಾ? ಶಿವಣ್ಣನಿಗೆ ಅಭಿಮಾನಿಯ ಪತ್ರ

    By ಅನಿಲ್
    |

    ಸರ್ ನಮಸ್ತೆ,

    'ಸಂತೆಯಲ್ಲಿ ನಿಂತ ಕಬೀರ' ಸಿನಿಮಾವನ್ನು ಖುಷಿಯಿಂದ ನೋಡಿದೆ. ಅದಾದ ಮೇಲೆ ಮುಂದಿನ ನಿಮ್ಮ ಸಿನಿಮಾಗಳ ಬಗ್ಗೆ ತುಂಬ ಕುತೂಹಲವಿತ್ತು. ಆದರೆ ಈಗ ಅದು ಹೊರಟುಹೋಯಿತು.

    ನೀವು 'ಟಗರು' ಅನ್ನೋ ಸಿನಿಮಾ ಮಾಡ್ತಿದೀರಿ, ಅದರ ಟೀಸರೋ/ಪೋಸ್ಟರೋ ನೋಡಿದೆ. ಮತ್ತೆ ನಿಮ್ಮ ಕೈಯಲ್ಲಿ ಲಾಂಗ್ ಬಂದಿದೆ. ಜತೆಗೆ ಗನ್ನು.! ರಕ್ತ ರಕ್ತ ಬಣ್ಣದಲ್ಲಿ 'ಟಗರು' ಕಾಣ್ತಿದ್ದರೆ ಅದರಿಂದ ತುಪ್ಪಳ ಹಾರಿಹೋದ ಹಾಗೆ ಬಿಳಿ ಬಿಳಿಯಾಗಿ ಏನೋ ಹಾರಿಹೋಗ್ತಿತ್ತು. ಅಲ್ಲಿಗೆ ಈ ಸಿನಿಮಾದಲ್ಲಿ ನಿಮ್ಮಿಂದ ಅದಿನ್ನೆಷ್ಟೋ ಜನರ ಕೊಲೆಯೋ...!?[ಶಿವಣ್ಣ-ಸೂರಿಯ 'ಟಗರು' ಚಿತ್ರದ ಅದ್ಧೂರಿ ಮುಹೂರ್ತದ ಫೋಟೋ ಆಲ್ಬಂ]

    ನನಗೆ ಸೂರಿ ಅವರ ಸಿನಿಮಾ ಅಂತೇನೂ ವಿಪರೀತ ನಿರೀಕ್ಷೆಯೇನಿಲ್ಲ. ಯಾಕೆಂದರೆ ಅವರ ಸಿನಿಮಾದಲ್ಲಿನ ಪಾತ್ರಗಳು ಹಸಿಹಸಿಯಾಗಿರುತ್ತವೆ. ಮಕ್ಕಳು, ಹೆಣ್ಣುಮಕ್ಕಳ ಜತೆಗೆಲ್ಲ ನೋಡೋಕೆ ಆಗಲ್ಲ. ರಂಗಾಯಣ ರಘುವಂಥ ಪಾತ್ರವೊಂದು ಹೆಂಗೆಂಗೋ ಮೈ ಕೆರೆದುಕೊಳ್ತಾ, ಕೆಟ್ಟಾ-ಕೊಳಕ ಸಂಭಾಷಣೆ ಹೇಳ್ತಾ ಇರುತ್ತೆ. ಕೆಲ ದೃಶ್ಯಗಳನ್ನಾದರೂ ಛೀ.. ಅನ್ನದೇ ಥಿಯೇಟರ್ ನಿಂದ ಆಚೆ ಬರೋದಿಕ್ಕೆ ಆಗಲ್ಲ.

    A letter to Shivarajkumar by his fan

    ಆದರೆ, ನಿಮಗೇನಾಗಿದೆ? ಹಾಗೇ ಲೆಕ್ಕ ಹಾಕಿ ನೋಡಿ. 'ಓಂ' ಸಿನಿಮಾ ಬಂದ ನಂತರ ಅದೆಷ್ಟು ಸಿನಿಮಾಗಳಲ್ಲಿ ನಿಮ್ಮದು ರೌಡಿ ಪಾತ್ರ? ನಿಮ್ಮಿಂದ ತೆರೆ ಮೇಲೆ ಆಗುವ ಕೊಲೆಗಳೆಷ್ಟು? ವಿಲನ್ ಗಳಿಗಿಂತ ಭೀಕರವಾಗಿ ನೀವೇ ಕೊಲೆ ಮಾಡ್ತೀರಿ.[ಪೊಗರು ತುಂಬಿದ 'ಟಗರು' ಶಿವಣ್ಣನ ಜೊತೆ ಸುಹಾಸಿನಿ.?]

    ಸಿನಿಮಾ ಅಂದರೆ ವ್ಯವಹಾರ ಲಾಭ-ನಷ್ಟ ಎಲ್ಲ ನೋಡಬೇಕು, ನಿಜ. ಹಾಗಂತ ಸೆಟ್ ನಲ್ಲಿ ಲಾಂಗಿರಲೇ ಬೇಕು ಅನ್ನೋ ಮಟ್ಟದ ಸಿನಿಮಾಗಳನ್ನು ಹೇಗೆ ನೋಡೋದಿಕ್ಕೆ ಸಾಧ್ಯ?

    ಇದೇ ವಿಷಯಗಳಿಗಾಗಿ ನಾನು, ನನ್ನಂಥವರು ಖಂಡಿತಾ ಬೇರೆ ಹೀರೋಗಳಿಗೆ ಈ ರೀತಿ ಪತ್ರ ಬರೆಯಲ್ಲವೇನೋ? ಆದರೆ ನೀವು ಮಾಡಿದ ಅದೆಷ್ಟೋ ಅದ್ಭುತ ಚಿತ್ರಗಳನ್ನು ಇಷ್ಟಪಟ್ಟು ನೋಡಿದ್ದ ಕಾರಣಕ್ಕೆ ಇತ್ತೀಚಿನ ನಿಮ್ಮ ಸಿನಿಮಾಗಳ ಬಗ್ಗೆ ಹೀಗೆ ಬೇಸರವಾಗ್ತಿದೆ.[ಹುಶಾರು..ಇದು ಪೊಗರು ತುಂಬಿರೋ 'ಟಗರು']

    'ಚಿಗುರಿದ ಕನಸು', 'ಹೃದಯಾ ಹೃದಯಾ', 'ಜನುಮದ ಜೋಡಿ', 'ನಮ್ಮೂರ ಮಂದಾರ ಹೂವೇ'..ಹೀಗೆ ಮನೆ ಮಂದಿಯೆಲ್ಲ ಕೂತು ನೋಡಬಹುದು ಎಂದು ಹೇಳಿಕೊಳ್ಳುವುದಕ್ಕೆ ಸಾಕಷ್ಟು ಸಿನಿಮಾಗಳು ಇವೆ. ಆದರೆ ಅದೇ ರೀತಿ ರೌಡಿಸಂ, ಲಾಂಗು-ಮಚ್ಚು, ಕೊಲೆಯಂಥದೇ ಸಿನಿಮಾಗಳು ಅದೆಷ್ಟು ಆಗಿಬಿಟ್ಟವು?

    ಹೋಲಿಕೆ ಮಾಡಬಾರದು, ಆದರೆ ಬೇರೆ ದಾರಿ ಇಲ್ಲ. ಆಮಿರ್ ಖಾನ್, ಮೋಹನ್ ಲಾಲ್, ಕಮಲ್ ಹಾಸನ್ ಅವರಂತೆ ಅದ್ಭುತವಾದಂಥ ಪಾತ್ರ-ಕಥೆಗಳನ್ನೇ ಆರಿಸಿಕೊಂಡು ಸಿನಿಮಾ ಮಾಡುವುದು ನಿಮಗೇನೂ ಕಷ್ಟದ ವಿಷಯವಲ್ಲ. ನೀವು ಅಂಥ ಪ್ರಯತ್ನವೇ ಮಾಡುವಂತೆ ಕಾಣುವುದಿಲ್ಲ.

    ನಾನೊಬ್ಬ ಸಾಮಾನ್ಯ ಪ್ರೇಕ್ಷಕ. 50 ರೂಪಾಯಿ ಕೊಟ್ಟು ಯಾವುದೋ ಒಂದು ಥಿಯೇಟರ್ ನಲ್ಲಿ ನಿಮ್ಮ ಸಿನಿಮಾ ಅನ್ನೋ ಕಾರಣಕ್ಕೇ ನೋಡ್ತೀನಿ. ತುಂಬಾ ಚೆನ್ನಾಗಿದ್ದರೆ ಇನ್ನೊಂದು ಸಲ ಕುಟುಂಬದವರೆಲ್ಲ ಹೋಗಿ ನೋಡ್ತೀವಿ. ನನ್ನ ಮನೆಯವರನ್ನು ಕರೆದುಕೊಂಡು ಹೋಗಿ ಮುಜುಗರ, ಬೇಜಾರು, ಹಿಂಸೆ ಪಡದಂಥ ಸಿನಿಮಾಗಳಲ್ಲಿ ನೀವು ಅಭಿನಯಿಸಲಿ ಅನ್ನೋದು ನನ್ನ ನಿರೀಕ್ಷೆ.['ಸಂತೆಯಲ್ಲಿ ನಿಂತ ಕಬೀರ'ನ ಸಂದೇಶ ಕೇಳಿ ಕೃತಾರ್ಥರಾದ ವಿಮರ್ಶಕರು.!]

    ನಾನು ಚಿಕ್ಕವನಿದ್ದಾಗ ಮನೆ ಹತ್ತಿರ ಇದ್ದ ಟೆಂಟ್ ಗೆ ರಾಜಕುಮಾರ್ ಅವರ ಯಾವುದೇ ಸಿನಿಮಾ ಬಂದರೂ ಪಕ್ಕದ ಮನೆಯಲ್ಲಿದ್ದವರೊಬ್ಬರು ನನ್ನ ಕರೆದುಕೊಂಡು ಹೋಗೋರು. ನೀವೇ ಹೇಳಿ, ಆ ರೀತಿ ಧೈರ್ಯ ಮಾಡಿ ನಿಮ್ಮ ಸಿನಿಮಾಗೆ ಕರೆದುಕೊಂಡು ಹೋಗೋಕೆ ಸಾಧ್ಯವಾ?

    ನೀವು ತೆರೆ ಮೇಲೆ ಕಾಣಿಸಿಕೊಳ್ಳುವಾಗ ಮಾಡಿಕೊಳ್ಳುವ ಹೇರ್ ಸ್ಟೈಲ್, ಹಾಕಿಕೊಳ್ಳುವ ಪ್ಯಾಂಟ್-ಶರ್ಟ್, ಕನ್ನಡಕ, ಬಳಸುವ ಬೈಕ್, ಕಾರು ಎಲ್ಲವನ್ನೂ ದೊಡ್ಡ ಪ್ರಮಾಣದ ಅಭಿಮಾನಿಗಳು ಅನುಸರಿಸುತ್ತಾರೆ. ನೀವು ರಸ್ತೆ-ರಸ್ತೆಯಲ್ಲಿ ಲಾಂಗು ಹಿಡಿದು ಕತ್ತರಿಸುವ ದೃಶ್ಯಗಳನ್ನು ಅಷ್ಟು ಭೀಕರವಾಗಿ ತೋರಿಸ್ತಿರಲ್ಲ ಆಗ ನಿಮ್ಮ ಅನುಸರಿಸುವ ಚಿಕ್ಕ ವಯಸ್ಸಿನ, ಸ್ವಂತ ಆಲೋಚನೆ ಮಾಡಲಾರದ ಅಭಿಮಾನಿಗಳು ನಿಮಗೆ ನೆನಪಾಗಬೇಕು ಅಲ್ವಾ?['ಕಲಿ' ಹಾಗೆ ಇದು ಕಾಗೆ ಹಾರಿಸೋ ಪ್ರೋಗ್ರಾಂ ಆಗ್ಲಿಲ್ಲಾಂದ್ರೆ ಸಾಕು.!]

    ನಿಮ್ಮ ತಲೆಯ ಮೇಲೊಂದು ಕಿರೀಟ ಇದೆ. ಅದರ ಹೆಸರು ರಾಜಕುಮಾರ್. ಆ ಕಿರೀಟದ ಮೇಲೆ ಚಿನ್ನದ ಗರಿಗಳು: ಅವು ನಿಮ್ಮ ಬ್ಯಾನರ್ ನಲ್ಲಿ ಬಂದ ಸದಭಿರುಚಿಯ ಸಿನಿಮಾಗಳು. ನೀವು ಅಭಿನಯಿಸಿದ್ದೀರಿ ಎಂಬ ಕಾರಣಕ್ಕೆ ಥಿಯೇಟರ್ ಗೆ ಬರುವ ನಮ್ಮಂಥ ಅಭಿಮಾನಿಗಳಿದ್ದಾರೆ.

    ಇನ್ನೆಷ್ಟು ವರ್ಷ, ಇನ್ನೆಷ್ಟು ಸಿನಿಮಾ ಹೀಗೆ ನಿಮ್ಮ ಕೈಯಲ್ಲಿ ಲಾಂಗು, ಮಚ್ಚು? ಒಂದು 'ಓಂ' ಸಿನಿಮಾ ಹಿಟ್ ಆಗಿದ್ದಕ್ಕೆ ನಾವು, ಕನ್ನಡದ ಪ್ರೇಕ್ಷಕರು ಇಷ್ಟೆಲ್ಲ ಸಹಿಸಿಕೊಳ್ಳಬೇಕಾ?

    English summary
    A letter written by a fan of Kannada actor Shivarajkumar. He is unhappy with actors recent movies, Films which have more voilent scenes, vulgar dailogues and can't watch with family.
    Tuesday, August 23, 2016, 16:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X