»   » ರಶ್ಮಿಕಾ ಮಂದಣ್ಣಗೆ ಚಾಟಿ ಏಟು ಕೊಟ್ಟಿರುವ ಯಶ್ ಅಪ್ಪಟ ಅಭಿಮಾನಿ

ರಶ್ಮಿಕಾ ಮಂದಣ್ಣಗೆ ಚಾಟಿ ಏಟು ಕೊಟ್ಟಿರುವ ಯಶ್ ಅಪ್ಪಟ ಅಭಿಮಾನಿ

Posted By:
Subscribe to Filmibeat Kannada

ಖಾಸಗಿ ವಾಹಿನಿಯ ಟಾಕ್ ಶೋ ಒಂದರಲ್ಲಿ 'ಮಿಸ್ಟರ್ ಶೋ ಆಫ್.. ಯಶ್' ಎಂದು ರಶ್ಮಿಕಾ ಮಂದಣ್ಣ ನೀಡಿದ್ದ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಸಮಾಜಕ್ಕೆ ಒಳಿತು ಮಾಡಲು ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದ್ದ ಯಶ್, 'ಶೋ ಮ್ಯಾನ್' ಹೊರತು 'ಶೋ ಆಫ್' ಅಲ್ಲ ಎಂಬುದು ಯಶ್ ಅಭಿಮಾನಿಗಳ ವಾದ.

'ಡವ್ ರಾಣಿ' ರಶ್ಮಿಕಾ ವಿರುದ್ಧ ಸಿಟ್ಟಿಗೆದ್ದ ಟ್ರೋಲ್ ಹುಡುಗರು

ಫೇಸ್ ಬುಕ್ ನಲ್ಲಿ ವಾದ-ವಿವಾದ-ವಾಕ್ಸಮರ ನಡೆಯುತ್ತಿರುವಾಗಲೇ, ಯಶ್ ರವರ ಅಪ್ಪಟ ಅಭಿಮಾನಿಯೊಬ್ಬ ರಶ್ಮಿಕಾ ರವರಿಗೆ ಮಾತಿನಲ್ಲಿಯೇ ಚಾಟಿ ಏಟು ಕೊಟ್ಟಿದ್ದಾರೆ. ಕೆಲ ಸಂಗತಿಗಳನ್ನು ಉಲ್ಲೇಖಿಸಿ, ''ಯಶ್ ರವರನ್ನ ರಶ್ಮಿಕಾ ಬಹಿರಂಗವಾಗಿ ಕ್ಷಮೆ ಕೇಳಬೇಕು'' ಎಂದು ಒತ್ತಾಯಿಸಿದ್ದಾರೆ. ಅಭಿಮಾನಿ ಬರೆದಿರುವ ವಿಸ್ತೃತ ಪತ್ರ ಇಲ್ಲಿ ಯಥಾವತ್ತಾಗಿ ಪ್ರಕಟಿಸಲಾಗಿದೆ. ಓದಿಕೊಳ್ಳಿ - ಸಂಪಾದಕ.

A letter written by Yash's fan to Rashmika Mandanna

''ಖಾಸಗಿ ಸಂಸ್ಥೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್ ರವರನ್ನು "ಶೋ ಆಫ್" ಮ್ಯಾನ್ ಎಂದು ಹೇಳಿಕೆ ನೀಡಿ ವಿವಾದದ ಕೇಂದ್ರ ಬಿಂದು ಆಗಿರುವ 'ಕಿರಿಕ್ ಪಾರ್ಟಿ' ಚಿತ್ರದ ಹಾಫ್(ಅರ್ಧ ಚಿತ್ರದ) ಹೀರೋಯಿನ್ ರಶ್ಮಿಕಾ ಮಂದಣ್ಣ ಇವರ ಗಮನಕ್ಕೆ ಕೆಲ ಸಂಗತಿಗಳು...

1) ರಾಕಿಂಗ್ ಸ್ಟಾರ್ ಯಶ್ ರವರು ನಿಮ್ಮ ಹಾಗೇ ಏಕಾಏಕಿ ಯಾವುದೋ ಅದೃಷ್ಟದ ಮೇಲೆ ರಾತ್ರೋರಾತ್ರಿ ಸ್ಟಾರ್ ಆದವರಲ್ಲ, ಅವರ ಯಶಸ್ಸಿನ ಹಿಂದೆ ಅದೆಷ್ಟೋ ವರ್ಷಗಳ ಶ್ರಮವಿದೆ.

ರಶ್ಮಿಕಾ ವಿಚಾರದಲ್ಲಿ ಅಭಿಮಾನಿಗಳಿಗೆ ಯಶ್ ಕೊಟ್ಟ ಸಂದೇಶ

2) ರಾಕಿಂಗ್ ಸ್ಟಾರ್ ಯಶ್ ಅಣ್ಣನವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಸುಮಾರು 10 ವರ್ಷಗಳು ಕಳೆಯುತ್ತಾ ಬಂದಿದೆ ಅವರಿಗೆ ನಿಮ್ಮ ಸರ್ಟಿಫಿಕೇಟ್ ಏನೂ ಬೇಕಾಗಿಲ್ಲ.

3) ರಾಕಿಂಗ್ ಸ್ಟಾರ್ ಯಶ್ ಅಣ್ಣನವರು ಕಿರಾತಕ , ಗೂಗ್ಲಿ , ರಾಜಾಹುಲಿ , ಮಾಸ್ಟರ್ ಪೀಸ್ ಅಂತಹ ಯಶಸ್ವಿ ಚಿತ್ರಗಳಲ್ಲದೆ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಅಂತಹ ಸಾರ್ವಕಾಲಿಕ ದಾಖಲೆ ಚಿತ್ರಗಳನ್ನು ನೀಡಿದ್ದಾರೆ.

4) ಯಶ್ ಅಣ್ಣ ನವರು ಕಳೆದ ವರ್ಷ ಸುಮಾರು 450ಕ್ಕೂ ಹೆಚ್ಚು ಹಳ್ಳಿಗಳಿಗೆ ಸುಮಾರು 3 ತಿಂಗಳುಗಳ ಕಾಲ ನೀರು ಪೂರೈಸಿದ್ದರು. ಅಷ್ಟಲ್ಲದೆ , ತಮ್ಮ ಯಶೋಮಾರ್ಗ ಫೌಂಡೇಶನ್ ಮುಖಾಂತರ ದುರಂತದಲ್ಲಿ ಸಾವನ್ನಪ್ಪಿದ್ದ ಅನಿಲ್
ಮತ್ತು ಉದಯ್ ರವರ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಿದ್ದರು ಮತ್ತು ಸುಮಾರು 4 ಕೋಟಿ ವೆಚ್ಚದ ಕೆರೆ ಹೂಳೆತ್ತುವ ಕಾರ್ಯಕ್ಕೂ ಕೂಡ ಚಾಲನೆ ನೀಡಿದರು, ಇಷ್ಟೇ ಅಲ್ಲದೇ ಕೆಲ ಸಂಘ ಸಂಸ್ಥೆಗಳೊಡನೆ ಸೇರಿ ದನಕರುಗಳಿಗೆ ಮೇವು ಪೂರೈಸಲು ನೆರವಾಗಿದ್ದರು.

5) ಇಷ್ಟಲ್ಲದೆ ತಮ್ಮ ಫೌಂಡೇಶನ್ ಮೂಲಕ ಇನ್ನೂ ಹತ್ತಾರು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ , ಇಷ್ಟೆಲ್ಲ ಜನ ಉಪಯೋಗಿ ಕೆಲಸಗಳನ್ನು ಮಾಡುತ್ತಿರುವ ಯಶ್ ರವರನ್ನು ಹಾಗೇ ಕರೆದ್ದಿದ್ದು ನಿಮ್ಮ "ಯೋಗ್ಯತೆ" ಯನ್ನು
ತಿಳಿಸುತ್ತಿದೆ.

ಒಂದು ಚಿತ್ರ ಹಿಟ್ ಆಗಿರುವುದಕ್ಕೆ ನಿಮಗೆ ತಲೆ ನಿಲುತ್ತಿಲ್ಲ, ನಿಮ್ಮ ಅಹಂಕಾರಕ್ಕೆ ಮುಂದೆ ನೀವೇ ಸರಿಯಾದ ಬೆಲೆ ತೆರಬೇಕಾದಿತು.

ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಮತ್ತು ನಾಡಿನ ಜನತೆಗೆ ಅವರು ಏನೆಂದು ಚೆನ್ನಾಗಿ ತಿಳಿದಿದೆ ಅವರು ನಿಮ್ಮಿಂದ ತಿಳಿಯುವ ಅಗತ್ಯವಿಲ್ಲ , ಹಾಗೆಯೇ ರಾಕಿಂಗ್ ಸ್ಟಾರ್ ಯಶ್ ರವರಿಗೆ ಯಾರ ಸರ್ಟಿಫಿಕೇಟ್ ಕೂಡ ಅಗತ್ಯವಿಲ್ಲ..
ಈ ಕೂಡಲೇ ತಾವು ಯಶ್ ರವರನ್ನು ಸಾರ್ವಜನಿಕವಾಗಿ ಕ್ಷಮೆಯಾಚಿಸಲೇಬೇಕು...!'' - ಯಶ್ ಅಪ್ಪಟ ಅಭಿಮಾನಿ

English summary
Kannada Actor Yash's hardcore fan has written open letter to Kannada Actress Rashmika Mandanna demading her to ask apology for making statement against Yash.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada