ದರ್ಶನ್ ಬದುಕಿಗೆ ತಿರುವು ನೀಡಿದ್ದು ಬೆಂಗಳೂರಿನ 2 ಪ್ರಮುಖ ಏರಿಯಾಗಳು ; ಹಬ್ಬಿಸಲಾದ ವದಂತಿ ಏನು..?
ದರ್ಶನ್ ಚಿತ್ರ ಬದುಕಲ್ಲಿ ಮೈಲುಗಲ್ಲಾದ ಎರಡು ಚಿತ್ರಗಳು ಬೆಂಗಳೂರಿನ ಎರಡು ಪ್ರಮುಖ ಏರಿಯಾ ಹೆಸರುಗಳು ಅನ್ನುವುದು ಒಂದು ವಿಶೇಷ. ಮೊದಲನೇ ಏರಿಯಾ ಮೆಜೆಸ್ಟಿಕ್ ದರ್ಶನ್ ವೃತ್ತಿ ಬದುಕಿಗೆ ಭದ್ರ ಬುನಾದಿಯನ್ನ ಹಾಕಿದರೆ, ಎರಡನೇ ಏರಿಯಾದ ಹೆಸರು ಕಲಾಸಿಪಾಳ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ನನ್ನಾಗಿಸಿತು.
ಹೌದು, ಮೆಜೆಸ್ಟಿಕ್ ನಿಂದ ನಾಯಕನಾದ ದರ್ಶನ್ ,ಅಲ್ಲಿಂದ ಉತ್ತಮ ಹಾಗೂ ಸ್ತುರದ್ರೂಪಿ ನಟ ಅಂತ ಗುರುತಿಸಿಕೊಂಡು ಸಾಲು ಸಾಲು ಸಿನಿಮಾ ಮಾಡಿದ್ರು. ಆದರೆ ಯಾವಾಗ ಕಲಾಸಿಪಾಳ್ಯ ಸಿನಿಮಾ ಮಾಡಿದ್ರೋ ಅಲ್ಲಿಂದ ದರ್ಶನ್ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಆದ್ರು..

ದರ್ಶನ್-ರಕ್ಷಿತಾ ಜೋಡಿಯ, ಓಂ ಪ್ರಕಾಶ್ ರಾವ್ ನಿರ್ದೇಶಿಸಿದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆಯನ್ನೇ ಬರೀತು. ಅಲ್ಲಿಂದ ದರ್ಶನ್-ರಕ್ಷಿತಾ ಜೋಡಿ ಸಖತ್ ಫೇಮಸ್ ಆಯ್ತು. ಎಲ್ಲಕ್ಕಿಂತ ಹೆಚ್ಚಾಗಿ ದರ್ಶನ್ ಗೆ ತನ್ನ ಅಭಿಮಾನಿಗಳು ತನ್ನನ್ನ ಹೇಗೆ ನೋಡೋದಕ್ಕೆ ಇಷ್ಟ ಪಡ್ತಾರೆ ಅನ್ನೋದು ಮನದಟ್ಟಾಯ್ತು?
ಕಲಾಸಿಪಾಳ್ಯ ಸಿನಿಮಾ ಯಾವ ಪರಿ ಹಿಟ್ಟಾಯ್ತು ಅಂದ್ರೆ 2005 ರಲ್ಲೇ ದರ್ಶನ್ ತಮ್ಮ ಸಂಭಾವನೆಯನ್ನ ಕೋಟಿಯ ಹತ್ತಿರತ್ತಿರ ಏರಿಸಿಕೊಂಡ್ರು. ಇದನ್ನ ನೋಡಿ ಈ ಸಮಯದಲ್ಲೇ ದರ್ಶನ್ ಬಗ್ಗೆ ಅವರು ಸಿಕ್ಕಾಪಟ್ಟೆ, ಕಾಸ್ಟ್ಲೀ ನಿರ್ಮಾಪಕರ ಪ್ರಾಣ ತಿಂತಾನೆ ಅಂತೆಲ್ಲಾ ಕೆಲವರು ಗಾಸಿಪ್ ಹಬ್ಬಿಸಿದ್ರು ಇಷ್ಟೇ ಅಲ್ಲ ಇನ್ನೂ ಕೆಲ ನಿರ್ಮಾಪಕರು ದರ್ಶನ್ ಬಗ್ಗೆ ಇಲ್ಲ ಸಲ್ಲದ ಪ್ರಚಾರ ಮಾಡಿದ್ರು ಅನ್ನುವ ಮಾತು ಇವತ್ತಿಗೂ ಕೂಡ ಗಾಂಧಿನಗರದಲ್ಲಿ ಕೇಳಿ ಬರುತ್ತೆ. ಆದ್ರೆ ದರ್ಶನ್ ಯಾವ ಟೀಕೆಗೂ ಬಗ್ಗಲಿಲ್ಲ. ಜಗ್ಗಲಿಲ್ಲ.
ಅಸಲಿಗೆ ದರ್ಶನ್ ಸಂಭಾವನೆ ವಿಚಾರದಲ್ಲಿ ಕಟ್ಟುನಿಟ್ಟಾಗಿದ್ದಿದ್ದು ಕೂಡ ಅಷ್ಟೇ ನಿಜ. ಯಾಕಂದ್ರೆ ಬೇಡಿಕೆ ಇದ್ದಾಗ ನಯ ಮಾತಿನಿಂದ ಬಳಸಿಕೊಂಡು, ನಂತರ ಕೈ ಬಿಡೋ ಚಿತ್ರರಂಗದವರ ಚಾಳಿ ಅವರಿಗೆ ಗೊತ್ತಿತ್ತು. ತನ್ನ ತಂದೆಯ ಕೊನೆಯ ದಿನಗಳು ಹೇಗಿದ್ವು ಅನ್ನೋದನ್ನ ಕಣ್ಣಾರೆ ನೋಡಿದ್ದ ದರ್ಶನ್, ಮೊದಲು ಸಂಭಾವನೆ ಇಡಿ ನಂತರ ಬೇರೆ ಮಾತು ಅನ್ನೋ ಪಾಲಿಸಿ ಫಾಲೋ ಮಾಡ್ತಾ ಹೋದ್ರು ಅನ್ನುವ ಮಾತು ದರ್ಶನ್ ಅವರ ಆಪ್ತ ವಲಯದಲ್ಲಿಯೇ ಕೇಳಿ ಬಂದಿತ್ತು.

ಸರ್ದಾರ, ಅಯ್ಯ, ಸ್ವಾಮಿ, ಶಾಸ್ತ್ರೀ, ಮಂಡ್ಯ ಹೀಗೆ ಆವತ್ತು ದರ್ಶನ್ ಮಾಡಿದ್ದೆಲ್ಲಾ ಹಿಟ್, ಮಟ್ಟಿದ್ದೆಲ್ಲಾ ಚಿನ್ನ. ನೋಡ್ ನೋಡ್ತಾನೇ ದರ್ಶನ್ ಸ್ಯಾಂಡಲ್ ವುಡ್ ನ ನಂ 01 ಪಟ್ಟದ ಸನಿಹ ಬಂದುಬಿಟ್ಟಿದ್ರು. ಹೀಗೆ ವೃತ್ತಿ ಜೀವನದಲ್ಲಿ ಒಂದು ಹಂತಕ್ಕೆ ಏರಿದ ಮೇಲೆ ದರ್ಶನ್ ತಮ್ಮ ಸಹೋದರ ದಿನಕರ್ ನನ್ನೂ ಚಿತ್ರರಂಗಕ್ಕೆ ಕರೆತಂದ್ರು. ಜೊತೆ ಜೊತೆಯಲಿ ಅನ್ನೋ ಸಿನಿಮಾ ನಿರ್ಮಾಣ ಮಾಡಿ ತಮ್ಮನನ್ನ ನಿರ್ದೇಶಕ ಮಾಡಿದ್ರು.


Click it and Unblock the Notifications











