Anchor Anushree Father : ಆಂಕರ್ ಅನುಶ್ರೀ ತಂದೆ ಎಂದು ಹೇಳಿಕೊಂಡು ವ್ಯಕ್ತಿ ಪ್ರತ್ಯಕ್ಷ

ನಿರೂಪಕಿ ಅನುಶ್ರೀ ಕನ್ನಡ ಮನೊರಂಜನಾ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತು ಸಂಪಾದಿಸಿಕೊಂಡಿದ್ದಾರೆ. ಟಿವಿ ರಿಯಾಲಿಟಿ ಶೋ ನಿರೂಪಣೆ, ಸಿನಿಮಾ ಸಂಬಂಧಿ ಕಾರ್ಯಕ್ರಮಗಳ ನಿರೂಪಣೆ, ನೃತ್ಯ, ನಟನೆ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದಾರೆ ಅನುಶ್ರೀ.

ಅನುಶ್ರೀ ತಾಯಿಯ ಆರೈಕೆಯಲ್ಲಿ ಬೆಳೆದ ಮಗಳು, ಅವರಿಗೆ ತಂದೆಯಿಲ್ಲ ಎಂದೇ ಎಲ್ಲರೂ ನಂಬಿಕೊಂಡಿದ್ದರು. ಆದರೆ ಈಗ ತಾನು ನಿರೂಪಕಿ ಅನುಶ್ರೀಯ ತಂದೆ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬರು ಪ್ರತ್ಯಕ್ಷವಾಗಿದ್ದಾರೆ.

ತಮ್ಮ ಹೆಸರು ಸಂಪತ್ ಕುಮಾರ್ ಎಂದು ಹೇಳಿಕೊಂಡಿರುವ ಇವರು, ತಾವು ಅನುಶ್ರೀಯ ತಂದೆ ಎಂದಿದ್ದು, ಅದಕ್ಕೆ ಪೂರಕವಾಗಿ ಅನುಶ್ರೀ ಅವರ ಕೆಲವು ಬಾಲ್ಯದ ಚಿತ್ರಗಳನ್ನು ತೋರಿಸಿದ್ದಾರೆ. ಪಾರ್ಶ್ವವಾಯುವಿಗೆ ತುತ್ತಾಗಿ ಪ್ರಸ್ತುತ ಬೆಂಗಳೂರಿನ ಮಾದನಾಯಕನಹಳ್ಳಿಯ ಅಭಯ ಆಸ್ಪತ್ರೆಯಲ್ಲಿ ದಾಖಲಾಗಿರುವ ಸಂಪತ್‌ಕುಮಾರ್ ನನ್ನ ಕೊನೆಯ ದಿನಗಳಲ್ಲಿ ಆದರೂ ಮಗಳು ಬಂದು ನನ್ನನ್ನು ನೋಡಲಿ ಎಂದಿದ್ದಾರೆ.

Recommended Video

Anushree Father | ನಾನೇ ಅನುಶ್ರೀ ಅಪ್ಪ ಎಂದುಕೊಂಡು ಫೋಟೋ ತೋರಿಸಿದ ವ್ಯಕ್ತಿ | Anchor Anushree

''ಮಗ ನನ್ನ ನೋಡಲು ಬಂದಿದ್ದ, ಮಗಳು ಬಂದಿಲ್ಲ''

''ಮಗ ನನ್ನ ನೋಡಲು ಬಂದಿದ್ದ, ಮಗಳು ಬಂದಿಲ್ಲ''

''ನನಗೆ ಇಬ್ಬರು ಮಕ್ಕಳು, ಅಭಿಜಿತ್ ಹಾಗೂ ಅನುಶ್ರೀ. ನನ್ನ ಮಗಳ ಇಮೇಜ್ ಡ್ಯಾಮೇಜ್ ಆಗಬಾರದು, ಕಷ್ಟಪಟ್ಟು, ಸಿಂಪತಿಗಿಟ್ಟಿಸಿಕೊಂಡು ಆಕೆ ಮೇಲೆ ಬಂದಿದ್ದಾಳೆ. ನನ್ನ ಕುಟುಂಬದವರು ಚೆನ್ನಾಗಿರಲಿ ಎಂದು ನಾನು ನನ್ನ ಇಡೀ ಜೀವನ ಹಾಳು ಮಾಡಿಕೊಂಡಿದ್ದೇನೆ. ಈಗ ಕೊನೆಯ ದಿನಗಳನ್ನು ಎಣಿಸುತ್ತಿದ್ದೇನೆ. ಈಗಲಾದರೂ ನನ್ನ ಮಗಳು ಬಂದು ನನ್ನನ್ನು ನೋಡಲಿ. ನನ್ನ ಮಗ ಕಳೆದ ವರ್ಷ ನನ್ನನ್ನು ನೋಡಲು ಬಂದಿದ್ದ'' ಎಂದಿದ್ದಾರೆ ಸಂಪತ್.

ಅನುಶ್ರೀ ಡ್ಯಾನ್ಸ್ ಕಲಿಯೋದು ನನಗೆ ಇಷ್ಟವಿರಲಿಲ್ಲ: ಸಂಪತ್

ಅನುಶ್ರೀ ಡ್ಯಾನ್ಸ್ ಕಲಿಯೋದು ನನಗೆ ಇಷ್ಟವಿರಲಿಲ್ಲ: ಸಂಪತ್

''ನನಗೆ ನನ್ನ ಕುಟುಂಬದವರು ಯಾರೂ ಇಂಪಾರ್ಟೆನ್ಸ್ ಕೊಡಲಿಲ್ಲ. ನನಗೆ ಅನುಶ್ರೀಯನ್ನು ಡ್ಯಾನ್ಸ್‌ಗೆ ಕಳಿಸೋದು ಇಷ್ಟ ಇರಲಿಲ್ಲ. ಆದರೆ ನನ್ನ ಹೆಂಡತಿಗೆ ಅವರ ಮನೆಯವರಿಗೆ ಅನುಶ್ರೀಯನ್ನು ಡ್ಯಾನ್ಸ್‌ಗೆ ಕಳಿಸಲು ಇಂಟ್ರೆಸ್ಟ್ ಇತ್ತು. ನನ್ನ ಮಾತಿಗೆ ಬೆಲೆ ಇರಲಿಲ್ಲ. ಹಾಗಾಗಿ ಒತ್ತಡದ ಪರಿಸ್ಥಿತಿಯಲ್ಲಿ ನಾನು ಮನೆ ಬಿಟ್ಟು ಹೋದೆ'' ಎಂದಿದ್ದಾರೆ ಸಂಪತ್ ಕುಮಾರ್.

ಭೂಗತ ಜಗತ್ತು ಸೇರಿಕೊಂಡು ಬಿಟ್ಟೆ: ಸಂಪತ್

ಭೂಗತ ಜಗತ್ತು ಸೇರಿಕೊಂಡು ಬಿಟ್ಟೆ: ಸಂಪತ್

''ಮಗಳನ್ನು ಸೇಂಟ್ ಥಾಮಸ್ ಸ್ಕೂಲ್‌ನಲ್ಲಿ 6ನೇ ತರಗತಿ ವರೆಗೆ ಓದಿಸಿದೆವು. ಆ ಮೇಲೆ ಮಂಗಳೂರಿಗೆ ಶಿಫ್ಟ್ ಆದೆವು. 2003-04 ರಲ್ಲಿ ನಾವು ಬೇರೆ ಆದೆವು. ನ್ಯೂಜಿಲೆಂಡ್, ದುಬೈ, ಮುಂಬೈಗಳಲ್ಲಿ ಕೆಲಸ ಮಾಡುತ್ತಿದ್ದೆ. ಚೆನ್ನಾಗಿ ಇದ್ದೆ. ಬಾಂಬೆಯಲ್ಲಿ ಅಂಡರ್ವಲ್ಡ್‌ ಗುಂಪೊಂದಕ್ಕೆ ಸೇರಿಕೊಂಡುಬಿಟ್ಟೆ. ನಾನು ಇದ್ದ ಫೀಲ್ಡ್ ಹೇಗಿತ್ತೆಂದರೆ ಇವರ ಹೆಸರನ್ನು ಹೇಳಿದರೂ ಇವರನ್ನು ಮುಗಿಸಿಬಿಡುತ್ತಿದ್ದರು. ಹಾಗಾಗಿ ನಾನು ಇವರನ್ನು ಮತ್ತೆ ಸಂಪರ್ಕ ಮಾಡಲಿಲ್ಲ'' ಎಂದಿದ್ದಾರೆ ಸಂಪತ್.

ಮಗಳು ನನ್ನನ್ನು ನೋಡಲಿ: ಸಂಪತ್

ಮಗಳು ನನ್ನನ್ನು ನೋಡಲಿ: ಸಂಪತ್

''ಐದು ದಿನದ ಹಿಂದೆ ನನ್ನ ಭಾವಮೈದುನನಿಗೆ ಕಾಲ್ ಮಾಡಿದ್ದೆ. ಒಂದು ಬಾರಿ ಆದ್ರೂ ನನ್ನ ಮಗಳು, ಕುಟುಂಬ ನನ್ನನ್ನು ಬಂದು ನೋಡಿಕೊಂಡು ಹೋಗಲಿ. ಅಥವಾ ನಾನು ಸತ್ತ ಮೇಲೆ ಒಂದು ಹಿಡಿ ಮಣ್ಣಾದರೂ ಹಾಕಲಿ'' ಎಂದಿದ್ದಾರೆ ಸಂಪತ್. ಆಸ್ಪತ್ರೆಯವರು ನೀಡಿರುವ ಮಾಹಿತಿಯಂತೆ ಸಂಪತ್ ಅವರಿಗೆ ಪಾರ್ಶ್ವವಾಯುವಾಗಿದ್ದು, ಅವರಿಗೆ ಆರೈಕೆಯ ಅವಶ್ಯಕತೆ ಇದೆ. ಅವರ ಕುಟುಂಬಸ್ಥರು ಬಂದು ನೋಡಿಕೊಳ್ಳುವುದು ಉತ್ತಮ ಎಂದಿದ್ದಾರೆ.

More from Filmibeat

English summary
A man named Sampath Kumar claimed he is father of Tv anchor Anushree. He is admitted to hospital he said I want my daughter to come here and see me.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X