»   » 'ಬಿಗ್ ಬಾಸ್' ವಿರುದ್ಧ ದೂರು ದಾಖಲಿಸಲು ಮುಂದಾದ ಕಾಮನ್ ಮ್ಯಾನ್.!

'ಬಿಗ್ ಬಾಸ್' ವಿರುದ್ಧ ದೂರು ದಾಖಲಿಸಲು ಮುಂದಾದ ಕಾಮನ್ ಮ್ಯಾನ್.!

Posted By: ಯಶಸ್ವಿನಿ ಎಂ.ಕೆ
Subscribe to Filmibeat Kannada
Bigg Boss Kannada Season 5 : ಬಿಗ್ ಬಾಸ್ ವಿರುದ್ಧ ಕಾಮನ್ ಮ್ಯಾನ್ ದೂರು ದಾಖಲು | Filmibeat Kannada

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಬಿಗ್ ಬಾಸ್' ಕನ್ನಡ ರಿಯಾಲಿಟಿ ಶೋ ವಿರುದ್ಧ ಮೈಸೂರು ಮೂಲದ ವ್ಯಕ್ತಿಯೋರ್ವ ದೂರು ನೀಡಲು ಮುಂದಾಗಿದ್ದಾರೆ.

ಬಿಗ್ ಬಾಸ್ ನಲ್ಲಿ ಸಾಮಾನ್ಯರಿಗೆ ಅವಕಾಶ ನೀಡಲಾಗುವುದೆಂದು ಘೋಷಿಸಿತ್ತು. ಆದ್ರೆ, ನನಗೆ ಅವಕಾಶ ನೀಡದೆ ನನಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಟೈಲರ್ ಭಯಾನಕ ನಾಗರಾಜ ಉರುಫ್ ನಾಗರಾಜ್ ದೂರಿದ್ದಾರೆ.

ದೊಡ್ಡ ರಾದ್ಧಾಂತ ಆಗಲು, ಸಮೀರಾಚಾರ್ಯ ಸಿಟ್ಟಾಗಲು ನೇರ ಕಾರಣ ಅನುಪಮಾ.!

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಪ್ರಸ್ತುತ ನಡೆಯುತ್ತಿರುವ ಬಿಗ್ ಬಾಸ್ 5ನೇ ಆವೃತ್ತಿಯಲ್ಲಿ ಜನಸಾಮಾನ್ಯರಿಗೆ ಅವಕಾಶ ನೀಡಲಾಗುತ್ತೆ ಎಂದು ಘೋಷಿಸಿದ್ದರು. ಅನ್ ಲೈನ್ ಮುಖಾಂತರ 40 ಸಾವಿರ ಅಧಿಕ ಅರ್ಜಿಗಳು ಬಂದಿದ್ದು, ಇದರಂತೆ ನಾನು ಅರ್ಜಿ ಹಾಕಿದ್ದೆ. ಅರ್ಜಿ ಅಂಗೀಕೃತವಾಗಿ ರಸೀದಿಯು ಬಂದಿತ್ತು. ಕಾರ್ಯಕ್ರಮ ಆರಂಭವಾಗುವವರೆಗೆ ಕಾದಿದ್ದೆ. ಆದರೆ, ಯಾವುದೇ ಸೂಚನೆ ನೀಡದೆ ಇದ್ದರಿಂದ ನನ್ನ ಸಮಯ ವ್ಯರ್ಥವಾಗಿದೆ. ಈ ಬಗ್ಗೆ ನ್ಯಾಯಾಂಗ ಹೋರಾಟ ಮಾಡಲಾಗುವುದು'' ಎಂದು ಆರೋಪಿಸಿದರು.

A Man decided to file a complaint against Bigg Boss

ಟೈಲರ್ ವೃತ್ತಿ ನಿರ್ವಹಿಸುತ್ತಿರುವ ನಾನು ಒಬ್ಬ ಸಾಮಾನ್ಯ, ನನ್ನ ಸ್ವವಿವರ ಹಾಗೂ ಇತರರಿಗಿಂತ ಭಿನ್ನವೆಂದು ವಿಡಿಯೋವನ್ನು ಅಪ್ ಲೋಡ್ ಮಾಡಿದ್ದೆ. ಈಗ ಸ್ಪರ್ಧೆಯಲ್ಲಿ ಭಾಗಿಯಾಗಿರುವ ಸಾಮಾನ್ಯರು ಹೇಗೆ ಭಿನ್ನವೆಂದು ಎಲ್ಲಿಯೂ ಸ್ಪಷ್ಟನೆ ನೀಡಿಲ್ಲ. ಪ್ರಯೋಜಕರು ಪೂರ್ವ ನಿರ್ಣಯದಂತೆ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಂಡಿದ್ದು, ಕೇವಲ ಟಿ.ಆರ್.ಪಿಗಾಗಿ ಸಾಮಾನ್ಯರಿಗೆ ಅವಕಾಶ ನೀಡಲಾಗುವುದು ಎಂದು ಸುಳ್ಳು ಪ್ರಕಟಣೆ ನೀಡಿದ್ದು ಅಕ್ಷಮ್ಯವೆಂದು ಕಿಡಿಕಾರಿದ್ದಾರೆ.

ಚಂದ್ರುಗ್ಯಾಕೆ ಇಷ್ಟೊಂದು ಅನುಮಾನ .? 'ಬಿಗ್ ಬಾಸ್' ಯಾರಿಗೆ ಯಾಕೆ ಮೋಸ ಮಾಡ್ತಾರೆ.?

A Man decided to file a complaint against Bigg Boss

ಕೊನೆ ಪಕ್ಷ ಸೈನಿಕರ ಮಕ್ಕಳಿಗಾದರೂ ಅವಕಾಶ ನೀಡಿದ್ದರೆ ಅವರ ಕುಟುಂಬಗಳಿಗೆ ಸಹಾಯವಾಗುತ್ತಿತ್ತು, ಪೂರ್ವ ನಿಯೋಜಿತ ಕಾರ್ಯಕ್ರಮದಂತೆ ನಡೆಯುತ್ತಿರುವ ಬಿಗ್ ಬಾಸ್ ನಿಲ್ಲಬೇಕೆಂದು ಇಲ್ಲವೇ ವಾಹಿನಿ ವಿರುದ್ಧ ನ್ಯಾಯಾಂಗ ಹೋರಾಟ ನಡೆಸುವುದಾಗಿ ಹೇಳಿಕೊಂಡಿದ್ದಾರೆ.

ಅಂದು ಹಾಲು ಮುಚ್ಚಿಟ್ಟರು, ಇಂದು ಚಾಕಲೇಟ್ ಕದ್ದು ತಿಂದರು: ಅನುಪಮಾ ಏನಿದೆಲ್ಲಾ.?

English summary
A man from Mysuru is getting ready to file a Judicial action on Big Boss Kannada Season 5 reality show. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 5ರ ರಿಯಾಲಿಟಿ ಶೋ ವಿರುದ್ಧ ದೂರು ದಾಖಲಿಸಲು ಮೈಸೂರು ಮೂಲದ ವ್ಯಕ್ತಿಯೊಬ್ಬ ನಿರ್ಧರಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada