'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾ ನೋಡುತ್ತಿದ್ದಾಗ ವ್ಯಕ್ತಿ ಸಾವು

Recommended Video

A man died while watching kalidasa kannada mestru movie | FILMIBEAT KANNADA

ನವರಸ ನಾಯಕ ಜಗ್ಗೇಶ್ ನಟನೆಯ 'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಹಿಟ್ ಆಯ್ತು ಎಂಬ ಖುಷಿಯಲ್ಲಿದ್ದ ಜಗ್ಗೇಶ್ ಗೆ ಮತ್ತು ಕನ್ನಡ ಕಲಾಭಿಮಾನಿಗಳಿಗೆ ಬೇಸರ ತರಿಸುವ ಘಟನೆಯೊಂದು ನಡೆದುಹೋಗಿದೆ.

ಹೌದು, ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋಗಿದ್ದ ವ್ಯಕ್ತಿಯೊಬ್ಬ ಚಿತ್ರಮಂದಿರದಲ್ಲಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

A Man Died While Watching Kalidasa Kannada Mestru Movie

ನವೆಂಬರ್ 25 ರಂದು ಮೈಸೂರಿನ ಪ್ರಬಾ ಚಿತ್ರಮಂದಿರಕ್ಕೆ ಮಧ್ಯಾಹ್ನಾ ಮ್ಯಾಟನಿ ಶೋ ನೋಡಲು ಹೋಗಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಸಿನಿಮಾ ಶೋ ಮುಗಿದ ಮೇಲೆ ಚಿತ್ರಮಂದಿರ ಸ್ವಚ್ಛಗೊಳಿಸುವ ಸಿಬ್ಬಂದಿ ಇದನ್ನ ಗಮಿನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸಾವಿಗೀಡಾದ ವ್ಯಕ್ತಿಯ ಬಗ್ಗೆ ನಿಖರವಾದ ಮಾಹಿತಿ ಇಲ್ಲದ ಪೊಲೀಸರು ಮೃತದೇಹವನ್ನು ಮೈಸೂರಿನ ಮೆಡಿಕಲ್ ಕಾಲೇಜು ಮತ್ತು ಸಂಶೋಧನ ಸಂಸ್ಥೆಯ ಶವಾಗಾರಕ್ಕೆ ಸ್ಥಳಾಂತರಿಸಿದ್ದರು. ಸುಮಾರು 40 ರಿಂದ 50 ವರ್ಷ ವಯಸ್ಸು ಆಗಿದ್ದು, ವ್ಯಕ್ತಿಯ ಎಡಗೈ ಮೇಲೆ ಬೋರೆಗೌಡ ಎಂಬ ಹೆಸರು ಅಚ್ಚೆ ಹಾಕಿರುವುದಾಗಿ ತಿಳಿದು ಬಂದಿದೆ.

A Man Died While Watching Kalidasa Kannada Mestru Movie

ಇನ್ನು ಈ ಘಟನೆ ತಿಳಿದು ಸಂತಾಪ ಸೂಚಿಸಿರುವ ನಟ ಜಗ್ಗೇಶ್ 'ದಿಘ್ಬ್ರಾಂತನಾದೆ ಈ ವಿಷಯ ಓದಿ..ನನ್ನ ಅಭಿಮಾನದ ಆತ್ಮವೆ ಒಬ್ಬ ಸಹೋದರನ ಕಳೆದುಕೊಂಡ ದುಃಖವಾಯಿತು.ನಿ ಮ್ಮ ಆತ್ಮಕ್ಕೆ ಶಾಂತಿ ಸಿಗಲಿ.. ದಯಮಾಡಿ ಇವರ ವಿಳಾಸ ಸಿಕ್ಕರೆ ತಿಳಿಸಿ ವೈಯಕ್ತಿಕವಾಗಿ ನಾನು ಅವರ ಕುಟುಂಬಕ್ಕೆ ಸಾಂತ್ವನ ಹೇಳಬೇಕು. ಹರಿಓಂ'' ಎಂದು ಟ್ವೀಟ್ ಮಾಡಿದ್ದಾರೆ.

More from Filmibeat

English summary
A man died while watching kalidasa kannada mestru movie in mysore theater.
Read more about: jaggesh ಜಗ್ಗೇಶ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X