»   » ಅಸಭ್ಯ ಸಂದೇಶದ ವಿರುದ್ಧ ನಟಿ, ನಿರೂಪಕಿ ಕಾವ್ಯ ಶಾಸ್ತ್ರಿ ಕೆಂಡಾಮಂಡಲ

ಅಸಭ್ಯ ಸಂದೇಶದ ವಿರುದ್ಧ ನಟಿ, ನಿರೂಪಕಿ ಕಾವ್ಯ ಶಾಸ್ತ್ರಿ ಕೆಂಡಾಮಂಡಲ

Posted By:
Subscribe to Filmibeat Kannada

ಕನ್ನಡದ ನಟಿ, ನಿರೂಪಕಿ ಕಾವ್ಯ ಶಾಸ್ತ್ರಿ ಈಗ ಕೋಪಗೊಂಡಿದ್ದಾರೆ. ಅದಕ್ಕೆ ಕಾರಣವಾಗಿರುವುದು ಒಂದು ಅಸಭ್ಯ ಸಂದೇಶ. ಈ ಸಂದೇಶ ಕಳುಹಿಸಿದವನ ವಿರುದ್ಧ ಕಾವ್ಯ ಈಗ ಕಿಡಿಕಾರಿದ್ದಾರೆ.

ನಟಿಯರಿಗೆ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಈಗೀಗಾ ಹೆಚ್ಚಾಗುತ್ತಿದೆ. ಶೀತಲ್ ಶೆಟ್ಟಿ, ನಿತ್ಯಾರಾಮ್, ಶೃತಿ ಹರಿಹರನ್ ಬಳಿಕ ಈಗ ಕಾವ್ಯ ಶಾಸ್ತ್ರಿ ಇದೇ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಫೇಸ್ ಬುಕ್ ನಲ್ಲಿ ಕಾವ್ಯ ಅವರ ಒಂದು ಫೋಟೋ ನೋಡಿ ಕಿಡಿಗೇಡಿಯೊಬ್ಬ ಎಲ್ಲೆ ಮೀರಿ ಕಾಮೆಂಟ್ ಹಾಕಿದ್ದ. ಅದಕ್ಕೆ ಈಗ ಕಾವ್ಯ ಆ ಯುವಕನಿಗೆ ಸರಿಯಾಗಿ ಬೆಂಡ್ ಎತ್ತಿದ್ದಾರೆ ಮುಂದೆ ಓದಿ...

ಅಸಭ್ಯವಾಗಿ ಕಾಮೆಂಟ್ ಹಾಕಿದ್ದರು

''ನಟಿ ಆಗಿರುವ ಮಾತ್ರಕ್ಕೆ ಬಾಯಿಗೆ ಬಂದ ಹಾಗೆ ಮಾತನಾಡುವುದು ಈಗೀಗಾ ಹೆಚ್ಚಾಗುತ್ತಿದೆ. ಆ ಅನುಭವ ಇತ್ತೀಚಿನ ದಿನದಲ್ಲಿ ನನಗೂ ಆಗಿದೆ. ನಾನು ಫೇಸ್ ಬುಕ್ ನಲ್ಲಿ ಹಾಕಿದ ಫೋಟೋವೊಂದಕ್ಕೆ ಒಬ್ಬ ಅಸಭ್ಯವಾಗಿ ಕಾಮೆಂಟ್ ಹಾಕಿದ್ದರು.'' - ಕಾವ್ಯ ಶಾಸ್ತ್ರಿ, ನಟಿ, ನಿರೂಪಕಿ

ಫ್ರೆಂಡ್ ಲಿಸ್ಟ್ ನಲ್ಲಿ ಇರಬೇಡಿ

''ಯಾರು ಹೆಣ್ಣು ಮಕ್ಕಳಿಗೆ ಗೌರವ ಕೊಡುವುದಿಲ್ಲವೋ ಅವರು ನನ್ನ ಫ್ರೆಂಡ್ ಲಿಸ್ಟ್ ನಲ್ಲಿ ಇರಬೇಡಿ. ಹೆಣ್ಣು ಮಕ್ಕಳಿಗೆ ಮರ್ಯಾದೆ ಕೊಡುವವರಿಗೆ ಮಾತ್ರ ನಾನು ಮರ್ಯಾದೆ ಕೊಡುತ್ತೇನೆ.'' - ಕಾವ್ಯ ಶಾಸ್ತ್ರಿ, ನಟಿ, ನಿರೂಪಕಿ

ಎಲ್ಲರೂ ಆಗಿಲ್ಲ

''ನಾನು ಎಲ್ಲರಿಗೂ ಈ ಮಾತು ಹೇಳುತ್ತಿಲ್ಲ. ನನಗೆ ಬಹಳ ಜನ ಪ್ರೀತಿಯಿಂದ ಅಕ್ಕ ಅಂತ ಕರೆಯುತ್ತಾರೆ. ಅವರೆಲ್ಲರಿಗೂ ನಾನು ಮರ್ಯಾದೆ ಕೊಡುತ್ತೇನೆ. ಯಾವ ವ್ಯಕ್ತಿಗೆ ಏನು ಕಾಮೆಂಟ್ ಮಾಡುತ್ತೀರಿ ಅಂತ ಮೊದಲು ಯೋಚನೆ ಮಾಡಿ.'' - ಕಾವ್ಯ ಶಾಸ್ತ್ರಿ, ನಟಿ, ನಿರೂಪಕಿ

ನೋವಿನಿಂದ ಹೇಳುತ್ತಿದ್ದೇನೆ

''ತುಂಬ ನೋವಿನಿಂದ ಇದನ್ನು ಹೇಳುತ್ತಿದ್ದೇನೆ. ಈ ರೀತಿಯ ಅಸಭ್ಯ ಸಂದೇಶಗಳು ಇನ್ನು ಮುಂದೆ ನನಗೆ ಕಾಣಿಸಬಾರದು. ಏನಾದರೂ ಮತ್ತೆ ಇದೇ ರೀತಿ ಮಾಡಿದ್ದರೆ, ಆ ಸಂದೇಶವನ್ನು ಸ್ಕ್ರೀನ್ ಶಾಟ್ ತೆಗೆದು ಫೇಸ್ ಬುಕ್ ನಲ್ಲಿ ಹಾಕಿ ಎಲ್ಲರ ಮುಂದೆ ಅವರ ಬಣ್ಣ ಬಯಲು ಮಾಡುತ್ತೇನೆ.'' - ಕಾವ್ಯ ಶಾಸ್ತ್ರಿ, ನಟಿ, ನಿರೂಪಕಿ

ಕಾವ್ಯ ಶಾಸ್ತ್ರಿ ಬಗ್ಗೆ

ಕಾವ್ಯ ಶಾಸ್ತ್ರಿ ನಟ ದುನಿಯಾ ವಿಜಯ್ ಅವರ 'ಯುವ' ಚಿತ್ರದಲ್ಲಿ ನಟಿಸಿದ್ದರು. 'ಶುಭ ವಿವಾಹ' ಸೇರಿದಂತೆ ಕೆಲ ಧಾರಾವಾಹಿಯಲ್ಲಿ ಅಭಿನಯಿಸಿದ್ದ ಕಾವ್ಯ ನಿರೂಪಕಿಯೂ ಹೌದು. ಇನ್ನು 'ಬಿಗ್ ಬಾಸ್ ಸೀಸನ್ 4' ನಲ್ಲಿ ಕಾವ್ಯ ಶಾಸ್ತ್ರಿ ಸ್ಪರ್ಧಿಯಾಗಿದ್ದರು.

English summary
A man posted vulgar comment on actress Kavya Shastry's photo.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada