»   » ನಟಿ, ನಿರೂಪಕಿ ಕಾವ್ಯ ಶಾಸ್ತ್ರಿಗೆ ಅಸಭ್ಯ ಸಂದೇಶ ಕಳುಹಿಸಿದವನಿಗೆ ತಕ್ಕ ಶಾಸ್ತಿ ಆಯ್ತು.!

ನಟಿ, ನಿರೂಪಕಿ ಕಾವ್ಯ ಶಾಸ್ತ್ರಿಗೆ ಅಸಭ್ಯ ಸಂದೇಶ ಕಳುಹಿಸಿದವನಿಗೆ ತಕ್ಕ ಶಾಸ್ತಿ ಆಯ್ತು.!

Posted By:
Subscribe to Filmibeat Kannada

ಕನ್ನಡದ ನಟಿ, ನಿರೂಪಕಿ ಕಾವ್ಯ ಶಾಸ್ತ್ರಿ ಅವರಿಗೆ ಅಸಭ್ಯ ಸಂದೇಶ ಕಳುಹಿಸಿದವನ ಬಗ್ಗೆ ಸ್ವತಃ ಅವರೇ ಬಯಲು ಮಾಡಿದ್ದಾರೆ.

ಇತ್ತೀಚಿಗಷ್ಟೆ ಫೇಸ್ ಬುಕ್ ನಲ್ಲಿ ಕಾವ್ಯ ಅವರು ಒಂದು ಫೋಟೋ ಹಾಕಿದ್ದರು. ಆ ಫೋಟೋಗಳನ್ನು ನೋಡಿ ಕಿಡಿಗೇಡಿಯೊಬ್ಬ ಎಲ್ಲೆ ಮೀರಿ ಕಾಮೆಂಟ್ ಗಳನ್ನು ಹಾಕಿದ್ದ. ಆ ಬಳಿಕ ಇದರ ವಿರುದ್ಧ ಫೇಸ್ ಬುಕ್ ನಲ್ಲಿ ಕಾವ್ಯ ಕಿಡಿಕಾರಿದ್ದರು. ಆದರೂ ಸಹ ಅಸಭ್ಯ ಸಂದೇಶಗಳು ನಿಂತಿರಲಿಲ್ಲ.

ಅಸಭ್ಯ ಸಂದೇಶದ ವಿರುದ್ಧ ನಟಿ, ನಿರೂಪಕಿ ಕಾವ್ಯ ಶಾಸ್ತ್ರಿ ಕೆಂಡಾಮಂಡಲ

ಈಗ ಅದೇ ಕಿಡಿಗೇಡಿಗೆ ಕಾವ್ಯ ಶಾಸ್ತ್ರಿ ಸರಿಯಾದ ಪಾಠ ಕಲಿಸಿದ್ದಾರೆ. ಮುಂದೆ ಓದಿ...

ಹಿಂದೆಯೇ ಹೇಳಿದ್ದರು.!

''ಈ ರೀತಿಯ ಅಸಭ್ಯ ಸಂದೇಶಗಳು ಇನ್ನು ಮುಂದೆ ನನಗೆ ಕಾಣಿಸಬಾರದು. ಏನಾದರೂ ಮತ್ತೆ ಇದೇ ರೀತಿ ಮಾಡಿದ್ದರೆ, ಆ ಸಂದೇಶವನ್ನು ಸ್ಕ್ರೀನ್ ಶಾಟ್ ತೆಗೆದು ಫೇಸ್ ಬುಕ್ ನಲ್ಲಿ ಹಾಕಿ ಎಲ್ಲರ ಮುಂದೆ ಅವರ ಬಣ್ಣ ಬಯಲು ಮಾಡುತ್ತೇನೆ'' ಎಂದು ಈ ಹಿಂದೆಯೇ ಕಾವ್ಯ ಶಾಸ್ತ್ರಿ ಹೇಳಿದ್ದರು.

ಮತ್ತೆ ಮುಂದುವರೆದಿದೆ

ಕಾವ್ಯ ಶಾಸ್ತ್ರಿ ಅವರು ಈ ರೀತಿ ವಾರ್ನಿಂಗ್ ನೀಡಿದ ಮೇಲೆಯೂ ಅಸಭ್ಯ ಸಂದೇಶಗಳು ನಿಂತಿರಲಿಲ್ಲ. ಆದ್ದರಿಂದ ಈ ರೀತಿ ಸಂದೇಶಗಳನ್ನು ಸ್ಕ್ರೀನ್ ಶಾಟ್ ತೆಗೆದು ಎಲ್ಲರ ಮುಂದೆ ಅಂತಹ ಕೆಟ್ಟ ಮನಸ್ಥಿತಿಯ ವ್ಯಕ್ತಿಯ ನಿಜ ರೂಪವನ್ನು ಬಯಲು ಮಾಡಿದ್ದಾರೆ.

ತಕ್ಕ ಶಾಸ್ತಿ ಆಯ್ತು

ಅಸಭ್ಯ ಸಂದೇಶ ಕಳುಹಿಸಿದವನಿಗೆ ಈಗ ತಕ್ಕ ಶಾಸ್ತಿ ಆಗಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿಯನ್ನು ಆ ಕಂಪನಿ ಕೆಲಸದಿಂದ ತೆಗೆದುಹಾಕಿದೆ. ಈ ವಿಷಯವನ್ನು ಸ್ವತಃ ಕಾವ್ಯ ಶೆಟ್ಟಿ ಸ್ಪಷ್ಟ ಪಡಿಸಿದ್ದಾರೆ.

ಏನು ಮಾಡಬೇಕು..?

''ಹೆಣ್ಣು ಮಕ್ಕಳನ್ನು ಕೆಟ್ಟದಾಗಿ ಕಾಣುವ ಇಂಥವರಿಗೆ ಏನು ಮಾಡಬೇಕು'' ಅಂತ ಕಾವ್ಯ ತಮ್ಮ ಫೇಸ್ ಬುಕ್ ಖಾತೆಯಲ್ಲಿ ನೋವನ್ನು ತೋಡಿಕೊಂಡಿದ್ದರು. ಸಾಕಷ್ಟು ಜನರು ಇದಕ್ಕೆ 'ಪೊಲೀಸ್ ಸ್ಟೇಷನ್ ಗೆ ದೂರು ನೀಡಿ' ಅಂತ ಹೇಳಿದ್ದಾರೆ.

ಕಾವ್ಯ ಶಾಸ್ತ್ರಿ ಬಗ್ಗೆ

ಕಾವ್ಯ ಶಾಸ್ತ್ರಿ ನಟ ದುನಿಯಾ ವಿಜಯ್ ಅವರ 'ಯುವ' ಚಿತ್ರದಲ್ಲಿ ನಟಿಸಿದ್ದರು. 'ಶುಭ ವಿವಾಹ' ಸೇರಿದಂತೆ ಕೆಲ ಧಾರಾವಾಹಿಯಲ್ಲಿ ಅಭಿನಯಿಸಿದ್ದ ಕಾವ್ಯ ನಿರೂಪಕಿಯೂ ಹೌದು. ಇನ್ನು 'ಬಿಗ್ ಬಾಸ್ ಸೀಸನ್ 4' ನಲ್ಲಿ ಕಾವ್ಯ ಶಾಸ್ತ್ರಿ ಸ್ಪರ್ಧಿಯಾಗಿದ್ದರು.

English summary
A man posted vulgar comment on Kannada Actress Kavya Shastry's photo.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada