For Quick Alerts
  ALLOW NOTIFICATIONS  
  For Daily Alerts

  ನಟ ವಿನೋದ್ ರಾಜ್ ಬಳಿ 1 ಲಕ್ಷ ಕದ್ದಿದ್ದ ಕಳ್ಳನ ಬಂಧನ

  |

  ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ನಟ ವಿನೋದ್ ರಾಜ್ ಅವರನ್ನ ಯಾಮಾರಿಸಿ ಒಂದು ಲಕ್ಷ ಕಳ್ಳತನ ಮಾಡಿದ್ದ ಖದೀಮನನ್ನ ಕೊನೆಗೂ ನೆಲಮಂಗಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

  ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಇಂಡಸ್ ಇಂಡ್ ಬ್ಯಾಂಕ್ ಎದುರುಗಡೆ ನಟ ವಿನೋದ್ ರಾಜ್ ಅವರ ಕಾರು ಪಂಚರ್ ಮಾಡಿ, ಅಭಿಮಾನಿ ಎಂದು ಹೇಳಿಕೊಂಡು ಬಂದು ಅವರ ಗಮನವನ್ನ ಬೇರೆಡೆ ಸೆಳೆದು, ಕಾರಿನಲ್ಲಿದ್ದ ಒಂದು ಲಕ್ಷ ಎಗರಿಸಿ ಪರಾರಿಯಾಗಿದ್ದ ರಾಜು ಅಲಿಯಾಸ್ ಹೈಟೆಕ್ ರಾಜನನ್ನು ಪೊಲೀಸರು ಸೆರೆಹಿಡಿದ್ದಾರೆ.

  ವಿನೋದ್ ರಾಜ್ ಬಳಿ 1 ಲಕ್ಷ ಹಣ ಕದ್ದು ಪರಾರಿಯಾದ ಕಳ್ಳರುವಿನೋದ್ ರಾಜ್ ಬಳಿ 1 ಲಕ್ಷ ಹಣ ಕದ್ದು ಪರಾರಿಯಾದ ಕಳ್ಳರು

  ಬಂಧಿತ ರಾಜು, ಐಷರಾಮಿ ಜೀವನ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಈಗ ವಿಚಾರಣೆಗೆ ಒಳಪಡಿಸಲಾಗಿದ್ದು, ಆತನನ ಗ್ಯಾಂಗ್ ನ್ನ ಪತ್ತೆ ಹಚ್ಚುತ್ತಿದ್ದಾರೆ. ನೆಲಮಂಗಲ ಸಿಪಿಐ ಅನಿಲ್ ಕುಮಾರ್ ನೇತೃತ್ವದ ತಂಡ ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದೆ.

  ಅಂದು ಈ ಘಟನೆ ನಡೆದಾಗ ವಿನೋದ್ ರಾಜ್ ಜೊತೆ ರಾಮಾನುಜ ಎಂಬುವರು ಇದ್ದರು. ಕಾರು ಪಂಚರ್ ಆದಮೇಲೆ ಮತ್ತೊಬ್ಬರನ್ನ ಫೋನ್ ಮಾಡಿ ಕರೆಸಿಕೊಂಡಿದ್ದರು. ಈ ವೇಳೆ ಟೈರ್ ಬದಲಾಯಿಸಲು ಮೂವರು ವಾಹನದಿಂದ ಕೆಳಗೆ ಇಳಿದಾಗ, ಕಳ್ಳರು ಈ ಕೃತ್ಯವೆಸಗಿದ್ದರು.

  English summary
  The police have finally caught the thief who stole Rs. 1 lakh from Sandalwood actor Vinod Raj. As per the reports, the person was caught by Nelamangala police on Thursday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X