ನಮ್ಮ ಮುದ್ದು ದೇವತೆ ; ಕಾಂತಾರದ ರಾಣಿ ಕನಕನವತಿ ರುಕ್ಮಿಣಿ ವಸಂತ್‌ಗೆ ಮನಸೋತ ಚಿತ್ರ ರಸಿಕರು
ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ನಾಯಕಿಯರ ಕೊರತೆ ಎದ್ದು ಕಾಣುತ್ತಿದೆ. ಅನೇಕ ನಾಯಕಿಯರು ನಿವೃತ್ತಿಯಾಗಿದ್ದಾರೆ. ಇನ್ನು ಕೆಲವರು ಗಂಡ ಮನೆ ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದಾರೆ. ಇನ್ನೂ ಕೆಲವರು ಕನ್ನಡ ಚಿತ್ರರಂಗಕ್ಕೆ ದೀರ್ಘ ದಂಡ ನಮಸ್ಕಾರ ಹಾಕಿ ಪರಭಾಷೆಯ ಪಾಲಾಗಿದ್ದಾರೆ. ಅಂದ ಚೆಂದ ಇದ್ದರೆ ಪ್ರತಿಭೆ ಇರಲ್ಲ.ಪ್ರತಿಭೆ ಇದ್ದವರಲ್ಲಿ ಗ್ಲಾಮರ್ ಇಲ್ಲ ಎನ್ನುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂತಹ ಸಮಯದಲ್ಲಿ ಕನ್ನಡ ಚಿತ್ರರಂಗದ ಗಮನ ಸೆಳೆಯುವದರ ಜೊತೆಯಲ್ಲಿ ಕನ್ನಡ ಕಲಾರಸಿಕರ ಹೃದಯದಲ್ಲಿ ರುಕ್ಮಿಣಿ ವಸಂತ್ ಸ್ಥಾನ ಪಡೆದಿದ್ದಾರೆ. ''ಸಪ್ತಸಾಗರದಾಚೆ ಎಲ್ಲೋ'' ಚಿತ್ರದ ನಂತರ ಅನೇಕರ ಪಾಲಿನ ಡ್ರೀಮ್ ಗರ್ಲ್ ಆಗಿ ಕೂಡ ರುಕ್ಮಿಣಿ ವಸಂತ್ ಹೊರ ಹೊಮ್ಮಿದ್ದಾರೆ.ಪರಭಾಷೆಗಳಲ್ಲಿ ಈಗಾಗಲೇ ಮಿಂಚಿದ್ದಾರೆ.

ಆದರೆ. ರುಕ್ಮಿಣಿ ವಸಂತ್ ಕೂಡ ಮಿಕ್ಕವರಂತೆ ಎಲ್ಲಿ ಶಾಶ್ವತವಾಗಿ ಪರಭಾಷೆಯ ಪಾಲಾಗುತ್ತಾರೆ ಎನ್ನುವ ಭಯ ಕೂಡ ಇದೇ ಸಮಯದಲ್ಲಿ ಇವರ ಸಮಸ್ತ ಕನ್ನಡ ಕಲಾಭಿಮಾನಿಗಳಲ್ಲಿದೆ. ಈ ಭಯ ಈಗ ಇನ್ನೂ ಹೆಚ್ಚಾಗಿದೆ. ಇದಕ್ಕೆ ಕಾರಣ ಓನ್ & ಓನ್ಲೀ ''ಕಾಂತಾರ''.
ಹೌದು.. ಇಂದು ''ಕಾಂತಾರ'' ಚಿತ್ರದ ಪ್ರಿಕ್ವೆಲ್‌ನ ಟ್ರೇಲರ್ ಬಿಡುಗಡೆಯಾಗಿದೆ. ಕನ್ನಡ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗದ ಚಿತ್ರಪ್ರೇಮಿಗಳು ಈ ಚಿತ್ರದ ಟ್ರೇಲರ್‌ಗೆ ಮನ ಸೋತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ತಮ್ಮ ಮನದ ಮಾತುಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಆದರೆ ಇದೇ ಸಮಯದಲ್ಲಿ ''ಕಾಂತಾರ''ದ ರಾಣಿ ಕನಕವತಿ ರುಕ್ಮಿಣಿ ವಸಂತ್ ಅವರ ಸೌಂದರ್ಯಕ್ಕೆ ಹಲವರು ಮಾರು ಹೋಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರುಕ್ಮಿಣಿ ವಸಂತ್ ಅವರ ಅಂದ ಚೆಂದದ ಗುಣಗಾನವನ್ನು ಮಾಡುತ್ತಿದ್ದಾರೆ.
ಇನ್ನೂ ರುಕ್ಮಿಣಿ ವಸಂತ್ ಅವರ ಪಾತ್ರ ಇಲ್ಲಿ ಕೇವಲ ರಿಷಬ್ ಶೆಟ್ಟಿ ಹೃದಯಕ್ಕೆ ಕನ್ನ ಹಾಕಲು ಮಾತ್ರ ಸೀಮಿತವಾಗಿಲ್ಲ. ಬದಲಿಗೆ ವಾರಿಯರ್ ಆಗಿಯೂ ಕೂಡ ರುಕ್ಮಿಣಿ ಕಾಣಿಸಿಕೊಂಡಿದ್ದಾರೆ. ಯುದ್ಧ ಭೂಮಿಗೆ ಇಳಿದು ಹೋರಾಡಿದ್ದಾರೆ. ಟ್ರೇಲರ್‌ನಲ್ಲಿ ಇರುವ ಇವರ ಈ ಆ್ಯಕ್ಷನ್ ದೃಶ್ಯಗಳು ಕೂಡ ಹಲವರ ಗಮನ ಸೆಳೆದಿವೆ. ಹೃದಯವನ್ನು ಗೆದ್ದಿವೆ.
ಇನ್ನು ರುಕ್ಮಿಣಿ ವಸಂತ್ ಅವರ ಪಾತ್ರಕ್ಕೆ ''ಕಾಂತಾರ''ದಲ್ಲಿ ಹೆಚ್ಚಿನ ಮಹತ್ವ ಇದೆ. ಚಿತ್ರದ ಟ್ರೇಲರ್ ಇಂತಹದ್ದೊಂದು ಸುಳಿವನ್ನು ಕೂಡ ನೀಡಿದೆ. ಟ್ರೇಲರ್ ಉದ್ದಕ್ಕೂ ರುಕ್ಮಿಣಿ ಮಿಂಚಿದ್ದಾರೆ. ಈ ಹಿನ್ನೆಲೆ ಬೆಳ್ಳಿಪರದೆಯ ಮೇಲೆ ರುಕ್ಮಿಣಿ ಅವರನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿರುವ ಹಲವರು ರುಕ್ಮಿಣಿ ವಸಂತ್ ಅವರಿಗೋಸ್ಕರವಾದರು ಮೊದಲ ದಿನವೇ ನಾವು ಈ ಚಿತ್ರವನ್ನು ನೋಡುತ್ತೇವೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇನ್ನುಳಿದಂತೆ ಟ್ರೇಲರ್ ಎಲ್ಲಾ ಭಾಷೆಯಲ್ಲಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ವೀವ್ಸ್ ಪಡೆದು ಮುನ್ನುಗ್ಗುತ್ತಿದೆ. ಇನ್ನು ಈಗಾಗಲೇ ರುಕ್ಮಿಣಿ ವಸಂತ್ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಿಜಾ 2019ರಲ್ಲಿಯೇ ರುಕ್ಮಿಣಿ ''Upstarts'' ಎಂಬ ಹಿಂದಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ.. ಆಗ ಬಾಲಿವುಡ್ ರುಕ್ಮಿಣಿ ಅವರನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇವರ ಅಭಿನಯ ಸಾಮರ್ಥ್ಯದ ಅರಿವು ಕೂಡ ಹಿಂದಿ ಉದ್ಯಮಕ್ಕೆ ಇರಲಿಲ್ಲ.
ಆದರೆ ಈಗ ''ಕಾಂತಾರ'' ಚಿತ್ರದ ಟ್ರೇಲರ್ ಹಿಂದಿ ಅವರ ಕಣ್ಣು ಕುಕ್ಕುತ್ತಿದೆ. ಈ ಹಿನ್ನೆಲೆ ''ಕಾಂತಾರ'' ಬಿಡುಗಡೆಯಾದ ನಂತರ ರಶ್ಮಿಕಾ ಮಂದಣ್ಣ.. ಶ್ರೀಲೀಲಾ.. ಬೆನ್ನಹಿಂದೆಯೇ ರುಕ್ಮಿಣಿ ವಸಂತ್ ಕೂಡ ಬಾಲಿವುಡ್‌ನಲ್ಲಿ ಬಿಡಾರ ಹೂಡಿದರು ಅಚ್ಚರಿ ಇಲ್ಲ ಎಂಬ ಅಭಿಪ್ರಾಯ ಕೂಡ ಸದ್ಯ ವ್ಯಕ್ತವಾಗುತ್ತಿದೆ. ನಿಜಕ್ಕೂ ''ಕಾಂತಾರ'' ಬಿಡುಗಡೆ ನಂತರ ರುಕ್ಮಿಣಿಗೆ ಬಾಲಿವುಡ್‌ನಿಂದ ಬುಲಾವ್ ಬರುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











