»   » 'ಮುಂಗಾರು ಮಳೆ-2' ಚಿತ್ರತಂಡದಿಂದ ಸುವರ್ಣಾವಕಾಶ.! ನಿಮಗಾಗಿ...

'ಮುಂಗಾರು ಮಳೆ-2' ಚಿತ್ರತಂಡದಿಂದ ಸುವರ್ಣಾವಕಾಶ.! ನಿಮಗಾಗಿ...

Posted By:
Subscribe to Filmibeat Kannada

'ಮುಂದೆ ಗುರಿ ಇರಬೇಕು...ಹಿಂದೆ ಗುರು ಇರಬೇಕು' ಎನ್ನುತ್ತಾರೆ. ಆ ಗುರು ನಿಮ್ಮ ತಂದೆ ಆಗಿದ್ದರೆ...ನಿಮ್ಮ ಸಾಧನೆಯ ಪ್ರತಿ ಹೆಜ್ಜೆಗೆ ನಿಮ್ಮ ಡ್ಯಾಡಿ ಬೆನ್ನೆಲುಬಾಗಿ ನಿಂತಿದ್ದರೆ...ನಿಮ್ಮ ನಿಜವಾದ ಹೀರೋ ನಿಮ್ಮ ಅಪ್ಪ ಆಗಿದ್ದರೆ...ಅವರಿಗೆ ಒಂದು ಸಲಾಂ ಹೊಡೆಯಲು 'ಮುಂಗಾರು ಮಳೆ-2' ಚಿತ್ರತಂಡ ನಿಮಗಾಗಿ ವಿಶಿಷ್ಟ ಅವಕಾಶ ಕಲ್ಪಿಸಿದೆ. ನೆನಪಿರಲಿ ಇದು ಗಂಡು ಮಕ್ಕಳಿಗೆ ಮಾತ್ರ.

ನಿಮ್ಮ ಇಂದಿನ ಸಾಧನೆಗೆ ನಿಮ್ಮ ಅಪ್ಪನ ಶ್ರಮ ಕಾರಣ ಎಂತಾಗಿದ್ದರೆ, ಈಗಲೇ ನಿಮ್ಮ ತಂದೆ ಜೊತೆಗೆ ಒಂದು ಫೋಟೋ ಕ್ಲಿಕ್ಕಿಸಿಕೊಳ್ಳಿ...ನಿಮ್ಮ ಸಾಧನೆಯನ್ನ ವಿವರಿಸಿ ಫೋಟೋ ಸಮೇತ 9538149823 ನಂಬರ್ ಗೆ ವಾಟ್ಸ್ ಆಪ್ ಮಾಡಿ. [ಮುಂಗಾರು 'ಮಳೆ' ಆರ್ಭಟ: ಗಣೇಶ್-ರವಿಚಂದ್ರನ್ ಪರದಾಟ]


A new promotional strategy from 'Mungaru Male-2' movie team

ಅಥವಾ mungarumale2.themovie@gmail.com ಗೆ ಈ-ಮೇಲ್ ಮಾಡಿ. ಇಲ್ಲ ಅಂದ್ರೆ, www.facebook.com/mungarumale2 ಫೇಸ್ ಬುಕ್ ಐಡಿಗೆ ಟ್ಯಾಗ್ ಮಾಡಿ.


ಜೂನ್ 18ನೇ ತಾರೀಖಿನ ಒಳಗಾಗಿ ನಿಮ್ಮ ಫೋಟೋ ಮತ್ತು ಮಾಹಿತಿ 'ಮುಂಗಾರು ಮಳೆ-2' ಚಿತ್ರತಂಡವನ್ನು ತಲುಪಬೇಕು. ನಿಮ್ಮ ಅದೃಷ್ಟ ಚೆನ್ನಾಗಿದ್ದರೆ, 'ಮುಂಗಾರು ಮಳೆ-2' ಚಿತ್ರದ ಪ್ರಮೋಷನಲ್ ವಿಡಿಯೋದಲ್ಲಿ 'ನೀವು ಮತ್ತು ನಿಮ್ಮ ಡ್ಯಾಡಿನೇ ಹೀರೋ..!'.


A new promotional strategy from 'Mungaru Male-2' movie team

ಹಾಗಾದ್ರೆ, ತಡ ಯಾಕೆ? ಈಗಲೇ ಫೋಟೋ ಕ್ಲಿಕ್ಕಿಸಿ...ನಿಮ್ಮ ಸಾಧನೆ ವಿವರಿಸಿ....


ಅಂದ್ಹಾಗೆ, 'ಮುಂಗಾರು ಮಳೆ-2' ಸಿನಿಮಾದಲ್ಲಿ ತಂದೆ-ಮಗನ ಸೆಂಟಿಮೆಂಟ್ ಹೈಲೈಟ್. ಗೋಲ್ಡನ್ ಸ್ಟಾರ್ ಗಣೇಶ್ ಗೆ ಮೊದಲ ಬಾರಿ ತಂದೆಯಾಗಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯಿಸಿದ್ದಾರೆ. ಶಶಾಂಕ್ ಈ ಚಿತ್ರದ ನಿರ್ದೇಶಕ. [ಮುಂಗಾರು ಮಳೆ 2 ಯಲ್ಲಿ ಗಣೇಶ್-ರವಿಚಂದ್ರನ್ ಮಿಂಚು]

English summary
Do you want to Thank your Dad for your Achievements? Then, here you have a Golden Chance.! Kannada Movie 'Mungaru Male-2' team has started 'Nanna Daddy-Nanna Hero' (My Daddy-My Hero) contest. Participate and be part of the Film's promotional video.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada