ವಿಷ್ಣು ಸಮಾಧಿ ನೆಲಸಮ ; ಅಭಿಮಾನಿಗಳದ್ದೂ ತಪ್ಪಿದೆ ಎಂದ ಕೆ.ಮಂಜು
ಸಾಹಸ ಸಿಂಹ ಅಸಂಖ್ಯಾತ.. ಅಗಣಿತ ಅಭಿಮಾನಿಗಳ ದಾದಾ ದೈಹಿಕವಾಗಿ ನಮ್ಮೆಲ್ಲರನ್ನೂ ಅಗಲಿ ಹದಿನೈದೂವರೆ ವರ್ಷವಾದರೂ ಕೂಡ ಅವರ ಪುಣ್ಯಭೂಮಿಯ ಇವತ್ತು ಕೂಡ ಕಗ್ಗಂಟಾಗಿರುವುದು ದುರಂತ. ಕಿಚ್ಚ ಸುದೀಪ್ ಸ್ಮಾರಕ ನಿರ್ಮಾಣಕ್ಕೆ ಅರ್ಧ ಎಕರೆ ಜಾಗ ಖರೀದಿ ಮಾಡಿದ್ದರೂ ಕೂಡ ಈ ಕ್ಷಣದವರೆಗೆ ಕೂಡ ವಿಷ್ಣು ಅಭಿಮಾನಿಗಳಲ್ಲಿ ಗೊಂದಲ ಮುಂದುವರಿದಿದೆ. ''ಡಾ.ವಿಷ್ಣು ಸೇನಾ ಸಮಿತಿ''ಯ ಅಧ್ಯಕ್ಷ ''ವೀರಕಪುತ್ರ ಶ್ರೀನಿವಾಸ್'' ಅವರನ್ನೊಳಗೊಂಡು...
ಅನೇಕರು ''ಸುದೀಪ್'' ಅವರ ನಿರ್ಧಾರಕ್ಕೆ ಸಮ್ಮತಿಯನ್ನು ಸೂಚಿಸಿದರೆ ಇನ್ನೂ ಕೆಲವರು ಅವರ ಅಂತ್ಯಕ್ರಿಯೆ ಆದ ಜಾಗದಲ್ಲಿಯೇ ಅಂದರೆ ''ಅಭಿಮಾನ್ ಸ್ಟುಡಿಯೋ''ದಲ್ಲಿಯೇ ಪುಣ್ಯಭೂಮಿ ಆಗಬೇಕೆಂದು ಹಠ ಹಿಡಿದು ಕುಂತಿದ್ದಾರೆ. ವಿಷ್ಣುವರ್ಧನ್ ಅವರ ಕುಟುಂಬದ ನಿಲುವು ಮತ್ತು ನಿರ್ಧಾರ ಎಲ್ಲರಿಗೆ ಗೊತ್ತಿರುವಂತಹದ್ದೇ. ಮೈಸೂರಿನಲ್ಲಾದ ಸ್ಮಾರಕ ಅವರಿಗೆ ಸಾಕು.

ಹೀಗಿರುವಾಗ ಇದೀಗ ಡಾ.ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿಯಾಗಿರುವ ನಿರ್ಮಾಪಕ ಕೆ.ಮಂಜು ಮತ್ತೊಮ್ಮೆ ತಮ್ಮ ಆರಾಧ್ಯದೈವ ನ ಸಮಾಧಿಯ ಬಗ್ಗೆ ಮಾತನಾಡಿದ್ದಾರೆ. ವಿಷ್ಣು ಅಭಿಮಾನಿಗಳದ್ದು ಕೂಡ ತಪ್ಪಿದೆ ಎಂದಿದ್ದಾರೆ.ಈ ಕುರಿತು ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿರುವ ಕೆ.ಮಂಜು ಆಗಸ್ಟ್ 8 ವರಮಹಾಲಕ್ಷ್ಮೀ ಹಬ್ಬದ ದಿನ ಹೀಗೀಗೆ ಆಗೋಯ್ತು ಎಂದು ರವಿ ಶ್ರೀವತ್ಸ್ ನನಗೆ ಫೋನ್ ಮಾಡಿ ಕಣ್ಣೀರು ಹಾಕ್ತಿದ್ದರು ಕೂಡಲೇ ನಾನು ಅಲ್ಲಿಗೆ ಹೋದಾಗ ನನಗೆ ಗಾಬರಿಯಾಯ್ತು ಎಂದು ಹೇಳಿದ್ದಾರೆ.
ವಿಷ್ಣು ಸರ್ ಸಮಾಧಿಗೆ ಕೈ ಹಾಕುವಷ್ಟು ದುಸ್ಥಿತಿ ಇವರಿಗೆ ಬಂತಾ ? ಯಾಕೆ ಹೀಗಾಯ್ತು ? ಇದರ ಹಿಂದೆ ಯಾರಿದ್ದಾರೆ ? ಎನ್ನುವ ಪ್ರಶ್ನೆಗಳೆಲ್ಲ ಮೂಡಿ ನಾನು ಯೋಚನೆ ಮಾಡಿ ಅಲ್ಲಿಯೇ ಧರಣಿ ಮಾಡಲು ಮುಂದಾಗಿದ್ದೆ, ಆದರೆ ಹಾಗೇ ಮಾಡಿದರೆ ನ್ಯಾಯಾಲಯಕ್ಕೆ ಅಗೌರವ ತೋರಿದಂತಾಗುತ್ತೆ, ಹೀಗಾಗಿಯೇ ಕಾನೂನು ಚೌಕಟ್ಟಿನಲ್ಲಿಯೇ ಕೆಲಸ ಮಾಡೋಣ ಎಂದುಕೊಂಡು ನಾನು ಅಲ್ಲಿಂದ ಹೋದೆ ಎಂದಿರುವ ಕೆ.ಮಂಜು ಆ ನಂತರ ಇದಕ್ಕೆ ಸಂಬಂಧಿಸಿದಂತೆ ನಾನು ವೀರಕ ಪುತ್ರ ಶ್ರೀನಿವಾಸ್ ಅವರಿಗೆ ಫೋನ್ ಮಾಡಿದೆ, ರಾಜು ಗೌಡ ಅವರಿಗೆ ಫೋನ್ ಮಾಡಿದೆ, ದಯವಿಟ್ಟು ನೀವು ಇಲ್ಲಿಯವರೆಗೆ ಅದೇನು ಮಾಡಿದ್ದೀರಾ ಅದಕ್ಕೆ ಸಂಬಂಧಿಸಿದಂತೆ ನನಗೆ ಮಾಹಿತಿ ಕೊಡಿ ಆ ನಂತರ ನಾವು ಮುಂದುವರೆಯೋಣ ಎಂದು ಹೇಳಿದೆ ಎಂದು ಹೇಳಿದ್ದಾರೆ.

ಆದರೆ ಶ್ರೀನಿವಾಸ್ ಅವರು ಅವತ್ತು ಬ್ಯುಸಿಯಾಗಿದ್ದರು, ಹೀಗಾಗಿ ನಾನು ರಾಜು ಗೌಡ ಅವರನ್ನು ಕರೆಸಿಕೊಂಡು ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಲಾಯರ್ ಅವರನ್ನು ಕರೆಸಿಕೊಂಡು ಚರ್ಚೆ ಮಾಡಿದೆ ಎಂದಿರುವ ಕೆ.ಮಂಜು ಆಗ ಜನವರಿಯಲ್ಲಿಯೇ ನ್ಯಾಯಾಲಯದಿಂದ ವಿಷ್ಣು ಸರ್ ಸಮಾಧಿ ತೆರವುಗೊಳಿಸುವ ಆದೇಶ ಬಂದಿರುವುದು ನನಗೆ ಗೊತ್ತಾಯ್ತು ಎಂದಿರುವ ಕೆ.ಮಂಜು ಇಷ್ಟು ದಿನ ನೀವೆಲ್ಲಾ ಏನ್ಮಾಡ್ತಿದ್ದೀರಿ ಎಂದು ನಾನು ಕೇಳಿದೆ ? ನ್ಯಾಯಾಲಯದ ಕುರಿತ ಮಾಹಿತಿ ದಿನ ಬರುತ್ತೆ ಯಾಕೆ ನೀವು ನೋಡಿಲ್ಲಾ ? ಮತ್ತೆ ಯಾಕೆ ಇಷ್ಟು ದಿನ ಓಡಾಡುತ್ತಿದ್ರೀ ? ಎಂದು ನಾನು ಕೇಳಿದೆ ಎಂದು ಹೇಳಿದ್ದಾರೆ. ಮೊದಲನೆಯದ್ದು ತಪ್ಪು ನಮ್ಮಲ್ಲಿ ಇದೆ, ನಾನು ಇಲ್ಲಿ ಯಾರನ್ನೂ ಹೊಣೆ ಮಾಡುತ್ತಿಲ್ಲ. ಆದರೆ ನಿರ್ಲಕ್ಷ್ಯದಿಂದ ಇಷ್ಟೆಲ್ಲಾ ಆಯ್ತು ಎಂದು ಹೇಳಿದ್ದಾರೆ.
ಮುಂದುವರೆದು ಬಾಲಕೃಷ್ಣ ಅವರ ಮೊಮ್ಮಗ ಕಾರ್ತಿಕ್ ಬಳಿ ಕೂಡ ನಾನು ಮನವಿಯನ್ನು ಮಾಡಿಕೊಂಡೆ ಎಂದು ಹೇಳಿರುವ ಕೆ.ಮಂಜು, ಹೀಗೆ ಮಾಡಬಾರದಿತ್ತು, ಅಭಿಮಾನಿಗಳಿಂದ ನೋವಾಗಿದ್ದರೆ ನಾನು ಕ್ಷಮೆ ಕೇಳ್ತೀನಿ ಎಂದು ನಾನು ಅವರಿಗೆ ಕ್ಷಮೆಯನ್ನು ಕೂಡ ಕೇಳಿದೆ, ಯಾಕೆಂದರೆ ಅಲ್ಲಿ ಮಲಗಿರುವುದು ನನ್ನ ಗುರುಗಳು ಎಂದಾಗ ನನಗೆ ನಾಲ್ಕೈದು ದಿನ ಟೈಮ್ ಕೊಡಿ ಎಂದು ಹೇಳಿದ ಎಂದು ಹೇಳಿರುವ ಕೆ.ಮಂಜು ಆ ಭೂಮಿ ಸರ್ಕಾರ ಅವರಿಗೆ ನೀಡಿರುವಂತಹದ್ದು ಹೀಗಾಗಿ ದಾಖಲೆ ಇಟ್ಟುಕೊಂಡು ಮಾತನಾಡಬೇಕು ಇಲ್ಲ ಅಂದರೆ ತಪ್ಪಾಗುತ್ತೆ ಎಂದು ಕೂಡ ಹೇಳಿದ್ದಾರೆ.


Click it and Unblock the Notifications











