'ಐರಾವತ' ವೇಳೆ ದರ್ಶನ್-ಎಪಿ ಅರ್ಜುನ್ ಜಗಳಕ್ಕೆ ಹುಳಿ ಹಿಂಡಿದ್ಯಾರು?

ಸಿನಿಮಾ ಎಂದ ಮೇಲೆ ವಿವಾದಗಳು ಇದ್ದೇ ಇರುತ್ತದೆ. ಸಿನಿಮಾದ ಜೊತೆ ಜೊತೆಗೆ ವಿವಾದ, ಜಗಳ, ಗಲಾಟೆ ಅಂಟಿಕೊಂಡೆ ಇರುತ್ತದೆ. ಅದೇ ರೀತಿ 'ಐರಾವತ' ಸಿನಿಮಾದ ಬಗ್ಗೆ ಕೂಡ ಒಂದು ವಿವಾದ ಇತ್ತು.

ಪೊಲೀಸ್ ಅಧಿಕಾರಿಯಾಗಿ ದರ್ಶನ್ ರನ್ನು ನೋಡುವುದೇ ಒಂದು ಚಂದ. ಆ ರೀತಿ ಡಿ ಬಾಸ್ ಗತ್ತು ತೋರಿಸಿದ್ದ ಸಿನಿಮಾ 'ಐರಾವತ'. ಅದೇನೇ ಇದ್ದರೂ, ಈ ಸಿನಿಮಾದ ಬಗ್ಗೆಯೂ ಒಂದು ಗಾಸಿಪ್ ವರ್ಷಗಳಿಂದ ಓಡಾಡುತ್ತಿತ್ತು. ನಿರ್ದೇಶಕ ಎ ಪಿ ಅರ್ಜುನ್ ಹಾಗೂ ದರ್ಶನ್ ರಿಗೆ ಈ ಸಿನಿಮಾದ ವೇಳೆ ಜಗಳ ಆಗಿದೆ ಎನ್ನುವ ಗುಸು ಗುಸು ಇತ್ತು.

ಗಾಸಿಪ್ ಎಷ್ಟೇ ಇದ್ದರೂ ಈ ಬಗ್ಗೆ ಎಲ್ಲಿಯೂ ದರ್ಶನ್ ಆಗಲಿ, ನಿರ್ದೇಶಕ ಎಪಿ ಅರ್ಜುನ್ ಆಗಲಿ ಮಾತನಾಡಿರಲಿಲ್ಲ. ಆದರೆ, ಇದೀಗ ಎ ಪಿ ಅರ್ಜುನ್ ಆ ಬಗ್ಗೆ ಹೇಳಿಕೊಂಡಿದ್ದಾರೆ. ಸುದ್ದಿ ವಾಹಿನಿಯೊಂದರ ಇತ್ತೀಚಿಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿರವ ಅರ್ಜುನ್ 'ಐರಾವತ'ದ ವಿವಾದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ...

'ಐರಾವತ' ಆಫರ್ ನೀಡಿದ್ದ ದರ್ಶನ್

'ಐರಾವತ' ಆಫರ್ ನೀಡಿದ್ದ ದರ್ಶನ್

ಎ ಪಿ ಅರ್ಜುನ್ ಹಾಗೂ ದರ್ಶನ್ ಬಹಳ ವರ್ಷಗಳಿಂದ ಒಳ್ಳೆಯ ನಂಟು ಹೊಂದಿದ್ದರು. ನಿರ್ದೇಶಕ ಆಗುವ ಮೊದಲು ಗೀತರಚನೆ ಮಾಡುವ ಸಮಯದಿಂದ ಅರ್ಜುನ್ ಕೆಲಸವನ್ನು ದರ್ಶನ್ ಮೆಚ್ಚಿಕೊಂಡಿದ್ದರು. ಹೀಗಿರುವಾಗ, ದರ್ಶನ್ ಅವರೇ ಒಂದು ಸಿನಿಮಾ ಮಾಡಲು ಆಫರ್ ನೀಡಿದರು. ಅದೇ 'ಐರಾವತ'.

ದರ್ಶನ್ ಜೊತೆಗೆ ಮನಸ್ತಾಪ ಬಂತು

ದರ್ಶನ್ ಜೊತೆಗೆ ಮನಸ್ತಾಪ ಬಂತು

ಎರಡು ಹಿಟ್ ಚಿತ್ರಗಳ ಬಳಿ ಅರ್ಜುನ್ ರಿಗೆ ಒಂದು ಸಿನಿಮಾ ಮಾಡಿ ಕೊಡಲು ದರ್ಶನ್ ಅವರೇ ಕೇಳಿದರಂತೆ. ದರ್ಶನ್ ಬಗ್ಗೆ ಬಹಳ ಪ್ರೀತಿ, ಗೌರವ ಹೊಂದಿದ್ದ ಅರ್ಜುನ್ ಆ ಸಿನಿಮಾ ಮಾಡಲು ಒಪ್ಪಿಕೊಂಡರು. ಪೊಲೀಸ್ ಪಾತ್ರದ ಸಿನಿಮಾ ಮಾಡಿ ಬಹಳ ದಿನ ಆಗಿದೆ ಎಂದಾಗ ಒಳ್ಳೆಯ ಕಥೆ ಮಾಡಿ ಸಿನಿಮಾ ಮಾಡಿದರು. ಎಲ್ಲ ಸರಿಯಾಗಿಯೇ ಇದೆ ಎನ್ನುವಾಗ ದರ್ಶನ್ ಜೊತೆಗೆ ಮನಸ್ತಾಪ ಬಂತು.

ಜಗಳ ಆಗಿದ್ದು ನಿಜ

ಜಗಳ ಆಗಿದ್ದು ನಿಜ

ಸಿನಿಮಾದ ವೇಳೆ ತಮಗೂ ಹಾಗೂ ದರ್ಶನ್ ರಿಗೆ ಮನಸ್ತಾಪ ಆಗಿದ್ದು ನಿಜ ಎಂದು ಎ ಪಿ ಅರ್ಜುನ್ ಹೇಳಿದ್ದಾರೆ. ಅರ್ಜುನ್ ರನ್ನು ದರ್ಶನ್ ತಮ್ಮನ ರೀತಿ ನೋಡುತ್ತಿದ್ದರಂತೆ. ಆದರೆ, ಅವರ ಸ್ನೇಹಕ್ಕೆ ಮಧ್ಯದಲ್ಲಿ ಇರುವ ಕೆಲವರು ಹುಳಿ ಹಿಂಡಿದರಂತೆ. ಹೀಗಿಗಾ ವರ್ಷಗಳಿಂದ ದರ್ಶನ್ ಜೊತೆಗೆ ಇದ್ದ ಒಳ್ಳೆಯ ಸಂಬಂಧ ಹಾಳಾಗಿ ಹೋಯಿತಂತೆ.

ಹೆಸರು ಹೇಳುವುದು ಬೇಡ

ಹೆಸರು ಹೇಳುವುದು ಬೇಡ

ತಮ್ಮ ಹಾಗೂ ದರ್ಶನ್ ನಡುವೆ ಜಗಳ ಆಗುವಂತೆ ಮಾಡಿದ್ದು ಮಧ್ಯದಲ್ಲಿ ಇರುವ ಕೆಲವು ವ್ಯಕ್ತಿಗಳು ಎಂದು ಹೇಳಿರುವ ಅರ್ಜುನ್ ಅವರ ಹೆಸರನ್ನು ಬಹಿರಂಗ ಪಡಿಸಲು ಇಷ್ಟಪಟ್ಟಿಲ್ಲ. ಕೆಲವು ವ್ಯಕ್ತಿಗಳು ಮಾಡಿದ ಈ ಕೆಲಸದಿಂದ ಅರ್ಜುನ್ ಕಣ್ಣೀರು ಹಾಕುವಂತೆ ಆಗಿತಂತೆ. ಇಷ್ಟು ಹೇಳಿರುವ ಅರ್ಜುನ್ 'ಐರಾವತ' ಗಾಸಿಪ್ ಗೆ ತೆರೆ ಏಳೆದಿದ್ದಾರೆ.

More from Filmibeat

English summary
Director A P Arjun spoke about 'Airavata' kannada movie controversy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X