ವಿವಾದದ ಕಿಡಿ ಹೊತ್ತಿಸಿದ ನಿಖಿಲ್-ರೇವತಿ ಮದುವೆಯ ಫೋಟೊ

ನಿಖಿಲ್ ಕುಮಾರಸ್ವಾಮಿ-ರೇವತಿ ಮದುವೆ ಕುರಿತ ಚರ್ಚೆ ಇನ್ನೂ ಮುಗಿದಿಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ಅವರು ಸರಣಿ ಟ್ವೀಟ್‌ಗಳ ಮೂಲಕ ಎಲ್ಲಾ ವಿವಾದಗಳಿಗೆ ತೆರೆ ಎಳೆದರು ಎಂದುಕೊಂಡಾಗಲೇ ಈಗ ಮತ್ತೆ ಸಣ್ಣ ವಿವಾದವೊಂದು ಎದ್ದಿದೆ.

Recommended Video

ತಬ್ಲಿಘಿ ಜಮಾಅತ್ ಬಗ್ಗೆ ಚೇತನ್ ಅವರ ಕೆಲವು ಆಲೋಚನೆಗಳೇನು ಕೇಳಿ | Chethan Kumar | Filmibeat kannada

'ನಿಖಿಲ್-ರೇವತಿ ಮದುವೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿದೆ' ಎಂದು ಕುಮಾರಸ್ವಾಮಿ ಹೇಳಿದ್ದರು. ಸಿಎಂ ಯಡಿಯೂರಪ್ಪ ಸಹ ನಿಖಿಲ್ ಮದುವೆ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದರು.

ಸಿಎಂ ಯಡಿಯೂರಪ್ಪ ಹೇಳಿಕೆ, ಕುಮಾರಸ್ವಾಮಿ ಸರಣಿ ಟ್ವೀಟ್ ಬಳಿಕ ಮದುವೆ ಸಂಬಂಧಿತ ವಿವಾದಗಳು ಮುಗಿದು ಹೋದವು ಎಂದುಕೊಂಡಿದ್ದಾಗಲೇ , ಮತ್ತೊಂದು ವಿವಾದ ಮೇಲೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಚಿತ್ರ ಇದಕ್ಕೆ ಕಾರಣವಾಗಿದೆ.

ನಿಖಿಲ್-ರೇವತಿ ಮದುವೆಯ ಚಿತ್ರ ಹರಿದಾಡುತ್ತಿದೆ

ನಿಖಿಲ್-ರೇವತಿ ಮದುವೆಯ ಚಿತ್ರ ಹರಿದಾಡುತ್ತಿದೆ

ನಿಖಿಲ್-ರೇವತಿ ಮದುವೆಯಲ್ಲಿ ಕುಮಾರಸ್ವಾಮಿ ಅವರ ಇಡೀಯ ಕುಟುಂಬ ಚಿತ್ರವೊಂದನ್ನು ತೆಗೆಸಿಕೊಂಡಿದ್ದು, ಆ ಚಿತ್ರದಲ್ಲಿ ಸಾಮಾಜಿಕ ಅಂತರವೆಂಬುದು ಕಣ್ಮರೆಯಾಗಿದೆ. ಈ ಚಿತ್ರವನ್ನಿಟ್ಟುಕೊಂಡು ನಿಖಿಲ್-ರೇವತಿ ಮದುವೆ ಬಗ್ಗೆ ಹೇಳಿಕೆಗಳು ಹೊರಬೀಳುತ್ತಿವೆ.

ದೇವೆಗೌಡ ಕುಟುಂಬದ ಬಹುತೇಕರು ಚಿತ್ರದಲ್ಲಿದ್ದಾರೆ

ದೇವೆಗೌಡ ಕುಟುಂಬದ ಬಹುತೇಕರು ಚಿತ್ರದಲ್ಲಿದ್ದಾರೆ

ಚಿತ್ರದಲ್ಲಿ ದೇವೇಗೌಡ-ಚನ್ನಮ್ಮ, ಕುಮಾರಸ್ವಾಮಿ-ಅನಿತಾ ಕುಮಾರಸ್ವಾಮಿ, ರೇವಣ್ಣ ದಂಪತಿ ಮತ್ತು ಅವರ ಮಕ್ಕಳು, ದೇವೇಗೌಡ ಅವರ ಇಡೀಯ ಕುಟುಂಬ ಇದೆ. ಈ ಚಿತ್ರವೊಂದರಲ್ಲೇ ಸುಮಾರು 35 ಮಂದಿ ಒತ್ತೊತ್ತಾಗಿ ನಿಂತಿದ್ದಾರೆ. ಈ ಚಿತ್ರವೇ ಈಗ ವಿವಾದದ ಕೇಂದ್ರಬಿಂದು.

ಲಾಕ್‌ಡೌನ್ ನಡುವೆಯೇ ಸರಳವಾಗಿ ಮದುವೆ

ಲಾಕ್‌ಡೌನ್ ನಡುವೆಯೇ ಸರಳವಾಗಿ ಮದುವೆ

ಲಾಕ್‌ಡೌನ್ ನಡುವೆಯೇ ನಿಖಿಲ್-ರೇವತಿ ಮದುವೆ ರಾಮನಗರ ಜಿಲ್ಲೆಯ ಕೇತಿಗಾನಹಳ್ಳಿ ಫಾರಂ ನಲ್ಲಿ ಸರಳವಾಗಿಯೇ ನೆರವೇರಿತು. ಮದುವೆಗೆ ಅನುಮತಿ ನೀಡಿದ್ದರ ಬಗ್ಗೆ ಕೆಲವರು ಪ್ರಶ್ನೆ ಮಾಡಿದರಾದರೂ, ಅಂಥಹವರಿಗೆ ಕುಮಾರಸ್ವಾಮಿ ಟ್ವೀಟ್ ಮೂಲಕ ಉತ್ತರ ನೀಡಿದ್ದರು.

ಸಾಮಾಜಿಕ ಅಂತರ ನಾಪತ್ತೆ!

ಸಾಮಾಜಿಕ ಅಂತರ ನಾಪತ್ತೆ!

ಈಗ ಈ ಫೋಟೊ ಹರಿದಾಡುತ್ತಿದ್ದು, ಮದುವೆಯಲ್ಲಿ ಸಾಮಾಜಿಕ ಅಂತರ ಕಾಪಾಡಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದ್ದರು. ಆದರೆ ಈ ಚಿತ್ರದಲ್ಲಿ ಸಾಮಾಜಿಕ ಅಂತರ ನಾಪತ್ತೆಯಾಗಿದೆ. ಒಬ್ಬರೂ ಸಹ ಮಾಸ್ಕ್ ಧರಿಸಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

More from Filmibeat

English summary
Deve Gowda-Chennamma family took a group photo in Nikhil Kumaraswamy - Revathi Marriage. Photo creating questions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X