»   » 'ನಲ್ಲ' ಸುದೀಪ್ ಅಭಿಮಾನಿಯ ಈ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ.?

'ನಲ್ಲ' ಸುದೀಪ್ ಅಭಿಮಾನಿಯ ಈ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ.?

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅಂದ್ರೆ ಪಂಚ ಪ್ರಾಣ ಎನ್ನುವ ಅಭಿಮಾನಿಗಳು ಲೆಕ್ಕವಿಲ್ಲದಷ್ಟು. ಕಿಚ್ಚ ಸುದೀಪ್ ಗಾಗಿ ಪ್ರೀತಿಯಿಂದ ಕವನ ಬರೆಯುವ, ಹಚ್ಚೆ ಹಾಕಿಸಿಕೊಳ್ಳುವ, ಕಿಚ್ಚ ಸುದೀಪ್ ರಂತೆ ಹೇರ್ ಸ್ಟೈಲ್ ಮಾಡಿಕೊಳ್ಳುವ ಅಭಿಮಾನಿಗಳು ಸಾವಿರಾರು. ಅಂಥವರಲ್ಲಿ ಒಬ್ಬರು ದೀಪ್ತಿ ರಾವ್ ಎಂಬ ಯುವತಿ.

ಈಕೆ ಕಿಚ್ಚ ಸುದೀಪ್ ರವರಿಗೆ ಒಂದು ಕವನ ಬರೆದಿದ್ದಾರೆ. ಸುದೀಪ್ ಅಭಿನಯಿಸಿರುವ ಸಿನಿಮಾಗಳ ಹೆಸರುಗಳನ್ನು ಬಳಸಿ ದೀಪ್ತಿ ರಾವ್ ಬರೆದಿರುವ ಕವನ ಇಲ್ಲಿದೆ ನೋಡಿ...

A Poem on Kiccha Sudeep by his fan Deepthi

'ಸ್ಪರ್ಶ'ದಿಂದ ಕನ್ನಡಿಗರನ್ನು 'ಹುಚ್ಚ'ರನ್ನಾಗಿ ಮಾಡಿದ ಕೆಚ್ಚೆದೆಯ 'ಕಿಚ್ಚ'
'ಗೂಳಿ'ಯಂತೆ ನುಗ್ಗಿ 'ಧಮ್' ಇದ್ರೆ ಹಿಡಿಯಿರಿ ಎಂದು ಮುನ್ನುಗ್ಗಿದ ಬಂಡೆದೆಯ 'ಪಾರ್ಥ'

'ಹುಬ್ಬಳ್ಳಿ'ಯಿಂದ 'ತಿರುಪತಿ'ಯವರೆಗೂ 'ಮೈ ಆಟೋಗ್ರಾಫ್' ಬಿತ್ತರಿಸಿದ 'ಚಂದು'
ಕಂಚಿನ ಕಂಠದಿ 'ಜಸ್ಟ್ ಮಾತ್ ಮಾತಲ್ಲಿ' ಎಲ್ಲರ ಮನಗೆದ್ದ 'ನಲ್ಲ'
'ನಂದಿ'ಯಂತೆ ಹಿರಿದಾಗಿ ತನ್ನ ಪ್ರತಿಭೆಯ 'ತೀರ್ಥ'ವನ್ನು ಎಲ್ಲ ಕ್ಷೇತ್ರದಲ್ಲೂ ಪಸರಿಸಿದ 'ವರದನಾಯಕ'.

'ರಂಗ SSLC'ಯಲ್ಲಿ 'ಸೈ' ಎನಿಸಿಕೊಂಡಿರುವ 'ನಮ್ಮಣ್ಣ'
'ಮುಸ್ಸಂಜೆ ಮಾತು'ವಿನ ದನಿಯಲ್ಲಿ 'ಸ್ವಾತಿಮುತ್ತು'ಗಳ ಮಳೆಯನ್ನೇ ಸುರಿಸಿದ 'ವಾಲಿ'

'ಕಿಚ್ಚ ಹುಚ್ಚ'ನಾಗಿ ಸಾವಿರಾರು ಹುಡುಗಿಯರ ತಲೆಕೆಡಿಸಿ
ಹೃದಯದ 'ಶಾಂತಿನಿವಾಸ'ದಲ್ಲಿ ಬೆಲ್ ಮಾಡಿರೋ 'ಕಾಮಣ್ಣನ ಮಗ'
'ಕಾಶಿ ಫ್ರಮ್ ವಿಲೇಜ್'ನಿಂದ 'ಮಹಾರಾಜ'ನಾಗಿ ಮೆರೆದ 'ರನ್ನ'
ಕನ್ನಡದ 'ವೀರ ಪರಂಪರೆ'ಯನ್ನು ಗಗನದೆತ್ತರಕ್ಕೇರಿಸಿದ 'ಕೆಂಪೇಗೌಡ'
ನಮ್ಮ ನಿಮ್ಮೆಲ್ಲರ ಹೆಮ್ಮೆಯ 'ವಿಷ್ಣುವರ್ಧನ'

ಈ ಆರಡಿ ಬಚ್ಚನ್ ನಮ್ಮ ಕನ್ನಡ ಇಂಡಸ್ಟ್ರಿಯ ಹೆಮ್ಮೆಯ 'ಮಾಣಿಕ್ಯ'
ಶಾಂತಮೂರ್ತಿಯಾಗಿದ್ದರೂ ಸಕಲಕಲಾವಲ್ಲಭ ನಮ್ಮ 'ಮುಕುಂದ ಮುರಾರಿ'
'ಈಗ' ನಮ್ಮೆಲ್ಲರ ಮುಂದೆ 'ಹೆಬ್ಬುಲಿ'ಯಾಗಿ ಆರ್ಭಟಿಸುತ್ತಿರುವ 'ಕೋಟಿಗೊಬ್ಬ'
ನಮ್ಮ ಅಭಿನಯ ಚಕ್ರವರ್ತಿ ಸುದೀಪ

ದೀಪ್ತಿ ರಾವ್ ಬರೆದಿರುವ ಈ ಕವನ ಓದಿ ಕಿಚ್ಚ ಸುದೀಪ್ ಖುಷಿ ಪಟ್ಟಿದ್ದಾರೆ. ಜೊತೆಗೆ ಟ್ವಿಟ್ಟರ್ ನಲ್ಲಿ ದೀಪ್ತಿ ರಾವ್ ರವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಅಭಿಮಾನಿಗಳ ಈ ಬೆಟ್ಟದಷ್ಟು ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ.?!

English summary
Take a look at the Poem on Kannada Actor Kiccha Sudeep written by his hardcore fan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada