»   » 'ಹುಚ್ಚು ಅಭಿಮಾನಿಯ ನೆಚ್ಚಿನ ಅಭಿನಯ ರಾಜ' ಸುದೀಪ್ ಗೊಂದು ನಲ್ಮೆಯ ಕವನ

'ಹುಚ್ಚು ಅಭಿಮಾನಿಯ ನೆಚ್ಚಿನ ಅಭಿನಯ ರಾಜ' ಸುದೀಪ್ ಗೊಂದು ನಲ್ಮೆಯ ಕವನ

Posted By:
Subscribe to Filmibeat Kannada

ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಕಿಚ್ಚ ಸುದೀಪ್ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಅಭಿಮಾನಿಗಳು ಪ್ರೀತಿಯಿಂದ ಕಳುಹಿಸುವ ಟ್ವಿಟ್ಟರ್ ಸಂದೇಶಗಳಿಗೆ ಸುದೀಪ್ ಪ್ರತಿಕ್ರಿಯೆ ನೀಡುತ್ತಲಿರುತ್ತಾರೆ. ಹೀಗಾಗಿ ಫ್ಯಾನ್ಸ್ ಜೊತೆ ಸುದೀಪ್ ರವರ ಒಡನಾಟ ಹಿಂದೆಂದಿಗಿಂತ ಹೆಚ್ಚಾಗಿದೆ.

ಕಿಚ್ಚನಿಗಾಗಿ.. ಕಿಚ್ಚನ ಬಗ್ಗೆ.. 'ಕಿಚ್ಚನ ಹುಡುಗಿ' ಬರೆದಿರುವ ಚೆಂದದ ಸಾಲುಗಳು...

ಸುದೀಪ್ ಜೊತೆ ಮಾತನಾಡಬೇಕು, ಅವರಿಗೊಂದು ಕವನ ಹೇಳಬೇಕು, ಅವರ ಬಗ್ಗೆ ನಮಗಿರುವ ಅಭಿಪ್ರಾಯ ತಿಳಿಸಬೇಕು ಅಂದ್ರೆ 'ಟ್ವಿಟ್ಟರ್' ಪರ್ಫೆಕ್ಟ್ ಮೀಡಿಯಂ. ಇದನ್ನ ಅರಿತಿರುವ ರವಿತೇಜ ಎಂಬ ಸುದೀಪ್ ರವರ ಅಪ್ಪಟ ಅಭಿಮಾನಿ ಟ್ವಿಟ್ಟರ್ ಮೂಲಕವೇ ತಮ್ಮ ಕವನವನ್ನು ಸುದೀಪ್ ರವರಿಗೆ ತಲುಪಿಸಿದ್ದಾರೆ.

A Poem on Kiccha Sudeep by his fan Ravi Teja

'ನಲ್ಲ' ಸುದೀಪ್ ಗಾಗಿ ಅಭಿಮಾನಿ ರವಿತೇಜ ಬರೆದಿರುವ ನಲ್ಮೆಯ ಕವನ ಇದು...

ಕರುನಾಡ ತಾಯಿಯ ಹೆಮ್ಮೆಯ ಕುವರ
ಪ್ರೀತಿಗೆ ಕರಗುವ ಕರ್ಪೂರ, ಕರುನಾಡ ಕೆಚ್ಚೆದೆಯ ಕಿಚ್ಚ
ಹುಚ್ಚು ಅಭಿಮಾನಿಯ ನೆಚ್ಚಿನ ಅಭಿನಯ ರಾಜ
ಸ್ವಚಂದ ಮನಸ್ಸಿನ ಸೌಮ್ಯ ಸ್ವರೂಪ

ನೂರಾರು ದತ್ತು ಮಕ್ಕಳ ಶಿಕ್ಷಣಕ್ಕೆ ನೆರವಾದ ಆಶಾದೀಪ
ನೊಂದವರ ಬಾಳಿಗೆ ನಂದಾದೀಪ, ಅಭಿಮಾನಿಗಳ ಅಭಿಮಾನಿ ಸುದೀಪ

ನಯನದಲ್ಲಿಯೇ ಅಭಿನಯಿಸುವ ಚತುರ
ಅಭಿನಯವ ವರವಾಗಿ ಪಡೆದ ಸರಸ್ವತಿ ಕುವರ
ಮಾತು ನೇರ, ಪ್ರೀತಿಗೆ ಪರ್ವತ, ಕರುಣೆಯಲ್ಲಿ ಕರ್ಣ, ಸ್ನೇಹದಲ್ಲಿ ಸುಧಾಮ

ಪ್ರತಿಭಾವಂತರಿಗೆ ಪ್ರೋತ್ಸಾಹಿಸುವ ಪರಿಯಂತೂ ಶ್ಲಾಘನೀಯ
ಅಭಿನಯ ಸಾಮ್ರಾಜ್ಯದಲ್ಲಿ ಪ್ರತಿಭೆ ಅನಂತ
ನಮ್ಮ ಪ್ರೀತಿ ಕಿಚ್ಚ ಅಭಿಮಾನಿಗಳಿಗೆ ಸ್ವಂತ
- ನಿಮ್ಮ ಪ್ರೀತಿಯ ಅಭಿಮಾನಿ, ರವಿತೇಜ.ಕೆ

ಅಪ್ಪಟ ಅಭಿಮಾನಿ ರವಿತೇಜ ಬರೆದಿರುವ ಈ ಕವನ ಓದಿ ಸುದೀಪ್ ಟ್ವಿಟ್ಟರ್ ಮೂಲಕವೇ ಧನ್ಯವಾದ ಅರ್ಪಿಸಿದ್ದಾರೆ.

ಕಿಚ್ಚನನ್ನ ದೇವರಂತೆ ಪೂಜಿಸುವ ಈ ಅಭಿಮಾನಿಗಳಿರುವಾಗ, ಸುದೀಪ್ ಗೆ ಇನ್ನೇನು ತಾನೆ ಬೇಕು.?!

English summary
Take a look at the Poem on Kannada Actor Kiccha Sudeep written by his hardcore fan Ravi Teja.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada