For Quick Alerts
  ALLOW NOTIFICATIONS  
  For Daily Alerts

  'ನಲ್ಲ' ಸುದೀಪ್ ಬಗ್ಗೆ ನಲ್ಮೆಯ ಅಭಿಮಾನಿಯ ಅದ್ಭುತ ಪದಪುಂಜ

  By Harshitha
  |

  ಅಪ್ಪಟ ಭಕ್ತರ ಪಾಲಿಗೆ ಕಿಚ್ಚ ಸುದೀಪ್ ದೇವರಂತೆ.! 'ಅಭಿನಯ ಚಕ್ರವರ್ತಿ' ಸುದೀಪ್ ಫೋಟೋ ಇಟ್ಟು ಪೂಜೆ ಮಾಡುವ ಅದೆಷ್ಟೋ ಅಭಿಮಾನಿಗಳಿದ್ದಾರೆ. ಅಂಥವರ ಮಧ್ಯೆ ತಮ್ಮ ಪದಪುಂಜದಿಂದ 'ಆರಾಧ್ಯ ದೈವ' ಸುದೀಪ್ ರವರ ಗಮನ ಸೆಳೆದವರು ಅಮೋಘ ಪ್ರಸನ್ನ ಕುಮಾರ್ ಎಂಬ ಅಭಿಮಾನಿ.

  ಸುದೀಪ್ ಅಭಿನಯಿಸಿರುವ ಸಿನಿಮಾಗಳ ಹೆಸರನ್ನೇ ಇಟ್ಟುಕೊಂಡು ಅಮೋಘ ಪ್ರಸನ್ನ ಕುಮಾರ್ ಎಂಬ ಅಭಿಮಾನಿ ಬರೆದಿರುವ ಸಾಲುಗಳು ಇವು....

  'ನಡತೆಯಲ್ಲಿ ದೈವತ್ವ; ನಡುಗೆಯಲಿ ಗಾಂಭೀರ್ಯ

  ಎತ್ತರದ ವ್ಯಕ್ತಿತ್ವ; ತಂದಿದೆ ಜನತೆಗೆ ಬಹು ಹರ್ಷ

  ಮರೆಯಲಾಗದ ಇವರ ಮೊದಲ ಸ್ಪರ್ಶ

  ಕಿಚ್ಚನಾಗಿ ಆರಂಭಿಸಿ ಹುಚ್ಚನಾಗಿ ಮೆರೆದ

  ಲಲನೆಯರ ಮನದ ನಲ್ಲ; ಮನಸುಗಳ ಮಹಾರಾಜ

  ಕರುನಾಡ ಮಾಣಿಕ್ಯ, ರಾಜ ವಿಷ್ಣುವರ್ಧನನಂತ ಧೀರ

  ಸರಿಸಾಟಿಯಿಲ್ಲದ ಕೋಟಿಗೊಬ್ಬ, ಮದಕರಿಯಂತ ವೀರ

  ಇವರ ಮಾತೇ ತೀರ್ಥ; ಜನರ ಮನದ ದೈವ

  ವರದನಾಯಕನಾದ ವಾಲಿ ಇಂದು ಅಭಿನಯ ಚಕ್ರವರ್ತಿ

  ವೇಗದಲಿ ಹೆಬ್ಬುಲಿ ಮನಸು ಇವರದು ಶಾಂತಿ ನಿವಾಸ

  ಎದುರಿಸಲಾಗದು ಇವರ ಧಮ್; ಸೈ ಎಂದರೆ ನಂದಿಯಂತೆ

  ವೀರಪರಂಪರೆಯ ಕೆಂಪೇಗೌಡ ಎದುರಾದರೆ ಗೂಳಿಯಂತೆ

  ಅತ್ಯಮೂಲ್ಯ ಕಲಾವಿದ ಇವರ ನಟನೆ ಹಲವು ನಾನಾ ರೀತಿ

  ಎಂದೂ ನೀಗದು ನಿಮ್ಮ ಬಗೆಗಿನ ಈ ನಮ್ಮ ಪ್ರೀತಿ

  ಅಭಿಮಾನಿ ಬರೆದಿರುವ ಈ ಕವಿತೆಯನ್ನ ಓದಿ ಖುಷಿ ಪಟ್ಟ ಕಿಚ್ಚ ಸುದೀಪ್ ಟ್ವಿಟ್ಟರ್ ಮೂಲಕ ಅಮೋಘ ಪ್ರಸನ್ನ ಕುಮಾರ್ ಗೆ ಧನ್ಯವಾದ ಅರ್ಪಿಸಿದ್ದಾರೆ.

  English summary
  Take a look at the Poem on Kannada Actor Kiccha Sudeep written by his hardcore fan Amogha Prasanna Kumar

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X