For Quick Alerts
  ALLOW NOTIFICATIONS  
  For Daily Alerts

  ಕನ್ನಡ ಹಾಡನ್ನು ಮೆಚ್ಚಿಕೊಂಡ ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್

  |

  ಬಾಲಿವುಡ್ ನ ಹೆಸರಾಂತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಕನ್ನಡ ಹಾಡೊಂದನ್ನು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟ ಪ್ರವೀಣ್, ರಾಧಿಕಾ ನಾರಾಯಣ್ ಮತ್ತು ಅನನ್ಯಾ ಕಶ್ಯಪ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ 'ಮುಂದಿನ ನಿಲ್ದಾಣ' ಸಿನಿಮಾದ ಹಾಡು ಕೇಳಿ ಸಂತಸ ವ್ಯಕ್ತಪಡಿಸಿದ್ದಾರೆ.

  'ಮುಂದಿನ ನಿಲ್ದಾಣ' ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಸಿನಿಮಾ. ಇತ್ತೀಚಿಗಷ್ಟೆ ಚಿತ್ರದ 'ನಗುವೆ ಕಲಿಸು...'ಹಾಡು ಬಿಡುಗಡೆಯಾಗಿತ್ತು. ಈ ಹಾಡಿಗೆ ಜಿಮ್ ಸತ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದೆ ಹಾಡನ್ನು ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಕೇಳಿ ಟ್ವೀಟ್ ಮಾಡಿದ್ದಾರೆ. ಹಾಡಿನ ಲಿಂಕ್ ಶೇರ್ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

  ಕನ್ನಡದ ಈ ಸಂಗೀತ ನಿರ್ದೇಶಕನ ಹಾಡನ್ನು ರಿಲೀಸ್ ಮಾಡ್ತಾರೆ ಎ.ಆರ್.ರೆಹಮಾನ್!ಕನ್ನಡದ ಈ ಸಂಗೀತ ನಿರ್ದೇಶಕನ ಹಾಡನ್ನು ರಿಲೀಸ್ ಮಾಡ್ತಾರೆ ಎ.ಆರ್.ರೆಹಮಾನ್!

  ಅಂದ್ಹಾಗೆ ರೆಹಮಾನ್ ಕನ್ನಡ ಹಾಡಿನ ಬಗ್ಗೆ ದಿಢೀರ್ ಮೆಚ್ಚುಗೆ ವ್ಯಕ್ತಪಡಿಸಲು ಕಾರಣವೇನು ಅಂತ ಅಂದ್ಕೋಳ್ಳುತ್ತಿದ್ದೀರಾ? ಈ ಹಾಡಿಗೆ ಸಂಗೀತ ನೀಡಿರುವ ಜಿಮ್ ಸತ್ಯ, ಕಳೆದ ಕೆಲವು ವರ್ಷಗಳಿಂದ ಎ.ಆರ್ ರೆಹಮಾನ್ ಬಳಿ ಕೆಲಸ ಮಾಡುತ್ತಿದ್ದರಂತೆ. ಮೊದಲ ಬಾರಿಗೆ ಕನ್ನಡ ಸಿನಿಮಾಗೆ ಸಂಗೀತ ನೀಡಿದ್ದಾರೆ. ಈ ಹಾಡನ್ನು ರೆಹಮಾನ್ ಕಲುಹಿಸಿದ್ದಾರೆ. ಸತ್ಯ ಕಳುಹಿಸಿದ ಹಾಡನ್ನು ಕೇಳಿ ಇಷ್ಟಪಟ್ಟು ಟ್ವೀಟ್ ಮಾಡಿದ್ದಾರೆ.

  ರೆಹಮಾನ್ ಜೊತೆಗೆ ಬಾಲಿವುಡ್ ನಟಿ ವಿದ್ಯಾ ಬಾಲನ್ ಕೂಡ ಹಾಡನ್ನು ಇಷ್ಟಪಟ್ಟಿದ್ದಾರಂತೆ. ಸಾಕಷ್ಟು ವಿಚಾರಗಳಲ್ಲಿ ಗಮನ ಸೆಳೆಯುತ್ತಿರುವ ಮುಂದಿನ ನಿಲ್ದಾಣ ಚಿತ್ರಕ್ಕೆ ವಿನಯ್ ಆಕ್ಷನ್ ಕಟ್ ಹೇಳಿದ್ದಾರೆ. ಇಂದೇ ತಿಂಗಳು 29ಕ್ಕೆ ಚಿತ್ರ ತೆರೆಗೆ ಬರುತ್ತಿದೆ.

  English summary
  Bollywood famous music director A.R Rahman appreciate to Mundina Nildana Kannada movie song.
  Sunday, November 17, 2019, 17:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X