ಕನ್ನಡದ ಈ ಸಂಗೀತ ನಿರ್ದೇಶಕನ ಹಾಡನ್ನು ರಿಲೀಸ್ ಮಾಡ್ತಾರೆ ಎ.ಆರ್.ರೆಹಮಾನ್!

By Naveen

ಕನ್ನಡ ಪ್ರತಿಭಾವಂತ ಸಂಗೀತ ನಿರ್ದೇಶಕರಲ್ಲಿ ಅಜನೀಶ್ ಲೋಕನಾಥ್ ಕೂಡ ಒಬ್ಬರು. ಸದ್ಯ ಅಜನೀಶ್ ಲೋಕನಾಥ್ ಸ್ಯಾಂಡಲ್ ವುಡ್ ನಲ್ಲಿ ದಿನೇ ದಿನೇ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲುತ್ತಿದ್ದಾರೆ. ಕನ್ನಡದ ಜೊತೆ ಪರಭಾಷೆಯಲ್ಲಿಯೂ ತಮ್ಮ ಸಂಗೀತದ ಮೂಲಕ ಅಜನೀಶ್ ಸದ್ದು ಮಾಡುತ್ತಿದ್ದಾರೆ.

ಈಗ ಅಜನೀಶ್ ಸಂಗೀತ ನೀಡಿರುವ ಒಂದು ಚಿತ್ರದ ಹಾಡನ್ನು ಎ.ಆರ್.ರೆಹಮಾನ್ ಬಿಡುಗಡೆ ಮಾಡಲಿದ್ದಾರೆ. 'ನಿಮಿರ್' ಎಂಬ ತಮಿಳು ಚಿತ್ರಕ್ಕೆ ಅಜನೀಶ್ ಮ್ಯೂಸಿಕ್ ನೀಡಿದ್ದಾರೆ. ಈ ಚಿತ್ರದ ಹಾಡನ್ನು ಇಂದು ಸಂಜೆ ರೆಹಮಾನ್ ರಿಲೀಸ್ ಮಾಡಲಿದ್ದಾರೆ. 'ನಿಮಿರ್' ಸಿನಿಮಾದ ಮೊದಲ ಹಾಡು ಇದಾಗಿದೆ. 'ನಿಮಿರ್' ಒಂದು ಕಾಮಿಡಿ ಸಿನಿಮಾವಾಗಿದ್ದು, ಚಿತ್ರದಲ್ಲಿ ನಟ ಉದಯನಿಧಿ ಸ್ಟಾಲಿನ್ ಹೀರೋ ಆಗಿದ್ದಾರೆ.

A.R.Rahman releases song composed by Ajaneesh Loknath

ಅಂದಹಾಗೆ, ಅಜನೀಶ್ ಸಂಗೀತದ ಮೂರನೇ ತಮಿಳು ಸಿನಿಮಾ 'ನಿಮಿರ್' ಆಗಿದೆ. ಇತ್ತೀಚಿಗಷ್ಟೆ 'ಉಳಿದವರು ಕಂಡತೆ' ಚಿತ್ರದ ತಮಿಳು ರಿಮೇಕ್ ಚಿತ್ರಕ್ಕೆ ಅಜನೀಶ್ ಸಂಗೀತ ನೀಡಿದ್ದರು. 'ಕುರಂಗು ಬೊಂಮಾಯ್' ಅಜನೀಶ್ ಅವರ ಮೊದಲ ತಮಿಳು ಸಿನಿಮಾ ಆಗಿತ್ತು. ಇದರೊಂದಿಗೆ ತೆಲುಗು 'ಕಿರಿಕ್ ಪಾರ್ಟಿ' ಚಿತ್ರಕ್ಕೂ ಅಜನೀಶ್ ಮ್ಯೂಸಿಕ್ ನೀಡಲಿದ್ದಾರೆ.

More from Filmibeat

English summary
Music director A.R.Rahman releases song composed by sandalwood music director Ajaneesh Loknath for the tamil movie 'Nimir'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X