twitter
    For Quick Alerts
    ALLOW NOTIFICATIONS  
    For Daily Alerts

    ಅಪರೂಪದ ಫೋಟೋ: ಒಂದೇ ವೇದಿಕೆಯಲ್ಲಿ ಮೂರು ಹಿಟ್ ಚಿತ್ರಗಳ ಸಕ್ಸಸ್ ಕಾರ್ಯಕ್ರಮ

    |

    ಸಿನಿಮಾ ರಿಲೀಸ್ ಆದ ದಿನವೇ ಸಕ್ಸಸ್ ಪ್ರೆಸ್ ಮೀಟ್ ಮಾಡುವ ಟ್ರೆಂಡ್ ಇದು. ಚಿತ್ರಮಂದಿರದಲ್ಲಿ 25 ದಿನ ಪೂರೈಸಿದರೆ ಅದುವೇ ದೊಡ್ಡ ಯಶಸ್ಸು ಎನ್ನುವಂತೆ ಸಂಭ್ರಮಿಸುವ ಸಮಯ ಇದು. ಆದ್ರೆ, ಡಾ ರಾಜ್ ಕುಮಾರ್ ಚಿತ್ರಗಳು ವರ್ಷಗಳ ಕಾಲ ಪ್ರದರ್ಶನ ಕಾಣುತ್ತಿದ್ದವು ಎನ್ನುವುದಕ್ಕೆ ಇಲ್ಲೊಂದು ಅಪರೂಪದ ಫೋಟೋ ಸಾಕ್ಷಿಯಾಗಿದೆ.

    ಅಣ್ಣಾವ್ರು ನಟಿಸಿರುವ ಮೂರು ಚಿತ್ರಗಳು ಭಾರಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಆ ಮೂರು ಮಹಾ ಚಿತ್ರಗಳ ಯಶಸ್ಸಿನ ಕಾರ್ಯಕ್ರಮವನ್ನು ಒಂದೇ ವೇದಿಕೆಯಲ್ಲಿ ಆಚರಿಸಿರುವುದು ಬಹಳ ವಿಶೇಷವಾಗಿದೆ. ಆ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂದೆ ಓದಿ...

    ವೈಭವೋಪೇತ ತ್ರಿವಳಿ ಸಮಾರಂಭ

    ವೈಭವೋಪೇತ ತ್ರಿವಳಿ ಸಮಾರಂಭ

    ಡಾ ರಾಜ್ ಕುಮಾರ್ ನಟಿಸಿದ್ದ ಮೂರು ಸೂಪರ್ ಹಿಟ್ ಚಿತ್ರಗಳ ಸಕ್ಸಸ್ ಕಾರ್ಯಕ್ರಮವನ್ನು ಒಂದೇ ವೇದಿಕೆಯಲ್ಲಿ ಆಯೋಜಿಸಲಾಗಿತ್ತು. ಒಡಹುಟ್ಟಿದವರು (25 ವಾರ), ಜೀವನಚೈತ್ರ (365 ದಿನ) ಹಾಗೂ ಆಕಸ್ಮಿಕ (25 ವಾರ) ಚಿತ್ರಗಳ ಯಶಸ್ಸಿನ ಕಾರ್ಯಕ್ರಮವನ್ನು ಸಂಭ್ರಮಿಸಲಾಗಿತ್ತು.

    ಒಂದೇ ಒಂದು ಚಿತ್ರದ ಬ್ಲಾಕ್ ಟಿಕೆಟ್ ಮಾರುವ ಮೂಲಕವೇ ಸೈಟ್ ತೆಗೆದುಕೊಂಡವರ ಕಥೆ ಗೊತ್ತೇ?ಒಂದೇ ಒಂದು ಚಿತ್ರದ ಬ್ಲಾಕ್ ಟಿಕೆಟ್ ಮಾರುವ ಮೂಲಕವೇ ಸೈಟ್ ತೆಗೆದುಕೊಂಡವರ ಕಥೆ ಗೊತ್ತೇ?

    ಯಾರೆಲ್ಲಾ ಭಾಗಿಯಾಗಿದ್ದರು

    ಯಾರೆಲ್ಲಾ ಭಾಗಿಯಾಗಿದ್ದರು

    ವೈಭವೋಪೇತ ತ್ರಿವಳಿ ಸಮಾರಂಭ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅಂದಿನ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ರಾಮಲಿಂಗಂ ಆಗಮಿಸಿದ್ದರು. ವಾರ್ತಾ ಇಲಾಖೆಯ ನಿರ್ದೇಶಕ ಸುಭಾಷ್ ಭರಣಿ ಪಾಲ್ಗೊಂಡಿದ್ದರು. ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ಸಿ.ಎನ್ ಚಂದ್ರಶೇಖರ್ ಇದ್ದರು. ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಸಹ ಭಾಗಿಯಾಗಿದ್ದರು.

    ರೆಬೆಲ್ ಸ್ಟಾರ್ ಅಂಬರೀಶ್ ಸಹ ಇದ್ದರು

    ರೆಬೆಲ್ ಸ್ಟಾರ್ ಅಂಬರೀಶ್ ಸಹ ಇದ್ದರು

    'ಒಡಹುಟ್ಟಿದವರು' ಚಿತ್ರದಲ್ಲಿ ರಾಜ್ ಕುಮಾರ್ ಜೊತೆ ರೆಬೆಲ್ ಸ್ಟಾರ್ ಅಂಬರೀಶ್ ಸಹ ನಟಿಸಿದ್ದರು. ಹಾಗಾಗಿ, ಈ ವೈಭವೋಪೇತ ತ್ರಿವಳಿ ಸಮಾರಂಭದಲ್ಲಿ ಅಂಬರೀಶ್ ಹಾಗೂ ನಟಿ ಮಾಧವಿ ಕೂಡ ಪಾಲ್ಗೊಂಡಿದ್ದರು.

    ಚಿತ್ರರಂಗದ ಬಗ್ಗೆ ಆ ಕಾಲದಲ್ಲಿಯೇ ಬೇಸರ ವ್ಯಕ್ತಪಡಿಸಿದ್ದರು ಡಾ. ರಾಜ್ ಕುಮಾರ್ಚಿತ್ರರಂಗದ ಬಗ್ಗೆ ಆ ಕಾಲದಲ್ಲಿಯೇ ಬೇಸರ ವ್ಯಕ್ತಪಡಿಸಿದ್ದರು ಡಾ. ರಾಜ್ ಕುಮಾರ್

    Recommended Video

    ಸಾಯೋದು ಇದ್ದಿದ್ದೆ ಆದ್ರೆ ಇದ್ದಾಗ ಹೇಗೆ ಬದುಕಿದ್ವಿ ಅನ್ನೋದೇ ಇಲ್ಲಿ ಮುಖ್ಯ | Raami Reddy | Filmibeat Kannada
    204 ಕೆ.ಜಿ ಹಾರ ಹಾಕಲಾಗಿತ್ತು

    204 ಕೆ.ಜಿ ಹಾರ ಹಾಕಲಾಗಿತ್ತು

    ಈ ಸ್ಮರಣೀಯ ಸಮಾರಂಭದಲ್ಲಿ ಅಣ್ಣಾವ್ರು ಅಭಿಮಾನಿಗಳ ಸಂಘ ಡಾ ರಾಜ್ ಕುಮಾರ್‌ ಅವರ 204 ಚಿತ್ರಗಳ ಸಂಕೇತವಾಗಿ 204 ಕೆ.ಜಿ ಹಾರವನ್ನ ಅರ್ಪಿಸಿ ಆನಂದ ಪಟ್ಟಿದ್ದರು. ಇನ್ನು ಮೂರು ಚಿತ್ರಗಳ ತಂತ್ರಜ್ಞರು, ಕಲಾವಿದರು, ನಿರ್ಮಾಣ ಸಹಾಯಕರು, ಕಚೇರಿ ಸಿಬ್ಬಂದಿ ಹಾಗೂ ತಮ್ಮೊಂದಿಗೆ ದುಡಿದ ಎಲ್ಲಾ ಹಂತದ ಕಾರ್ಮಿಕರಿಗೆ ವೇದಿಕೆಯ ಮೇಲೆ ಕರೆದು ಹಾರ ಹಾಕಿ ಸ್ಮರಣ ಫಲಕದ ಜೊತೆಗೆ ಬೆಳ್ಳಿ ಬಟ್ಟಲನ್ನು ನೀಡಿ ಅವರನ್ನು ಗೌರವಿಸಲಾಗಿತ್ತು.

    English summary
    A rare picture of the Triple Ceremony of Dr Rajkumar's 3 Movies Odahuttidavaru, Aakasmika, Jeevana Chaitra.
    Tuesday, September 22, 2020, 15:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X