ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ - ಉಪೇಂದ್ರ

''ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ - ಉಪೇಂದ್ರ'' ಈ ರೀತಿಯ ಟೈಟಲ್ ಕಾರ್ಡ್ ಯಾವಗ ಬರುತ್ತೆ ಅಂತ ಯಾರಿಗೂ ಗೊತ್ತಿಲ್ಲ. ಆದರೆ, ಅದು ಬಂದಾಗ ಮಾತ್ರ ಅದರ ಖದರ್ ಬೇರೆಯದೆ ಮಟ್ಟದಲ್ಲಿ ಇರುತ್ತದೆ.

'ಎ' ಸಿನಿಮಾದ ಒಂದು ದೃಶ್ಯದಲ್ಲಿ ನಟ ಉಪೇಂದ್ರ ಟೋಪಿಯನ್ನು ಎತ್ತಿಕೊಂಡು ಧೂಳು ಕೊಡವಿ ತಲೆ ಮೇಲೆ ಹಾಕಿಕೊಂಡು ಬರುತ್ತಾರೆ. ಆ ದೃಶ್ಯ ಅಭಿಮಾನಿಗಳಲ್ಲಿ ಇಂದಿಗೂ ರೋಮಾಂಚನ ಉಂಟು ಮಾಡುತ್ತದೆ.

'ಎ' ಸಿನಿಮಾದಲ್ಲಿ ಬಂದ ಹಾಗೆ ಈಗಲೂ ಉಪೇಂದ್ರ ಮೈ ಕೊಡವಿ ಎದ್ದು ಬರಬೇಕಿದೆ. ಉಪೇಂದ್ರ ಅಭಿಮಾನಿಗಳಿಗೆ ಮಾತ್ರವಲ್ಲ ಇಡೀ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಇರುವ ಆಸೆ ಉಪೇಂದ್ರ ನಿರ್ದೇಶನ ಮಾಡಬೇಕು. ಹೆಚ್ಚು ಹೆಚ್ಚು ಚಿತ್ರಗಳನ್ನು ನಿರ್ದೇಶಿಸುತ್ತಲೇ ಇರಬೇಕು.

a special article about kannada actor, director upendra

ಉಪೇಂದ್ರ ಅವರ ಪ್ರತಿಭೆ ಬರೀ ಕರ್ನಾಟಕಕ್ಕೆ ಸೀಮಿತ ಆಗುವಂತದ್ದು ಅಲ್ಲ. ಕಾಲಿವುಡ್ ನಲ್ಲಿ ಶಂಕರ್, ಟಾಲಿವುಡ್ ನಲ್ಲಿ ರಾಜಮೌಳಿ ಬೆಳೆದ ರೀತಿ ಉಪೇಂದ್ರ ರಾಷ್ಟ್ರ ಮಟ್ಟದಲ್ಲಿ ನಿರ್ದೇಶಕನಾಗಿ ಹೆಸರು ಮಾಡಬೇಕಿತ್ತು.

a special article about kannada actor, director upendra

ಉಪೇಂದ್ರ ಬರೀ ನಿರ್ದೇಶಕರಾಗಿ ಉಳಿದಿದ್ದರೆ ಇನ್ನೂ ಎತ್ತರಕ್ಕೆ ಬೆಳೆಯಬಹುದಿತ್ತೇನೋ ಗೊತ್ತಿಲ್ಲ. ಆದರೆ, ಉಪೇಂದ್ರ ಹೀರೋ ಆದ ಮೇಲೆ ಅವರ ಒಳಗೆ ಇದ್ದ ನಿರ್ದೇಶಕ ಹೆಚ್ಚು ಹೊರಗೆ ಬರಲಿಲ್ಲ. ಒಬ್ಬ ನಟನಾಗಿ ಬ್ಯುಸಿಯಾದ ಮೇಲೆ ಉಪೇಂದ್ರ ಮಾಡಿದ್ದು, 'ಸೂಪರ್' ಹಾಗೂ 'ಉಪ್ಪಿ 2' ಚಿತ್ರಗಳನ್ನು ಮಾತ್ರ. ಆದರೂ, ಈ ಎರಡು ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಸಿನಿಮಾಗಳಲ್ಲಿ ಪ್ರಮುಖವಾಗಿವೆ.

a special article about kannada actor, director upendra

ಕನ್ನಡ ಮಾತ್ರವಲ್ಲ ಇತರ ಚಿತ್ರರಂಗದಲ್ಲಿಯೂ ಉಪೇಂದ್ರ ಅವರಿಗೆ ಇಂದಿಗೂ ದೊಡ್ಡ ಗೌರವ ನೀಡುತ್ತಾರೆ. ಅದಕ್ಕೆ ಕಾರಣ ಅವರ ಡೈರೆಕ್ಷನ್. ಉಪೇಂದ್ರ ನಿರ್ದೇಶನದಿಂದ ಸ್ಫೂರ್ತಿ ಪಡೆದ ಅದೆಷ್ಟೋ ನಿರ್ದೇಶಕರು ಚಿತ್ರರಂಗದಲ್ಲಿ ಹುಟ್ಟಿಕೊಂಡಿದ್ದಾರೆ. ಆದರೆ, ಅಭಿಮಾನಿಗಳಿಗೆ ಈಗ ನಿಜವಾದ 'ರಿಯಲ್ ಸ್ಟಾರ್' ಬೇಕಿದೆ. ನಿರ್ದೇಶಕ ಸೂರಿ ಇತ್ತೀಚಿನ ತಮ್ಮ ಸಂದರ್ಶನದಲ್ಲಿ ಹೇಳಿದೆ ಹಾಗೆ 'ನಮಗೆ 'ನಿರ್ದೇಶಕ ಉಪೇಂದ್ರ' ಅವರು ಬೇಕಾಗಿದ್ದಾರೆ.

More from Filmibeat

English summary
A special article about kannada actor, director Upendra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X