'ಓ ಭ್ರಮೆ' ಈ ಡೈಲಾಗ್ ಬರೆದಿದ್ದು ಪ್ರೇಮ್ ಅಲ್ಲ, ಬೇರೆ ಯಾರು?

ಪ್ರೇಮ್ ನಿರ್ದೇಶನದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯದ 'ದಿ ವಿಲನ್' ಸಿನಿಮಾ ಕಳೆದ ವರ್ಷದ ಬಿಗ್ಗೆಸ್ಟ್ ಸಿನಿಮಾ. ದೊಡ್ಡ ಮೊತ್ತದಲ್ಲಿ ತಯಾರಾಗಿದ್ದ 'ದಿ ವಿಲನ್' ಅಷ್ಟೇ ದೊಡ್ಡ ಮೊತ್ತವನ್ನ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು.

ಸುದೀಪ್ ಮತ್ತು ಶಿವಣ್ಣ ಒಟ್ಟಿಗೆ ಅಭಿನಯಿಸಿದ್ದೇ ದೊಡ್ಡ ಉಡುಗೊರೆ ಅಂತಿದ್ದ ಸಮಯದಲ್ಲಿ ಆ ಎರಡು ಡೈಲಾಗ್ ಮಾಡಿದ ಈ ಚಿತ್ರಕ್ಕೆ ಅತಿ ಹೆಚ್ಚು ಮೈಲೇಜ್ ಸಿಕ್ಕುವಂತೆ ಮಾಡಿತ್ತು.

ಒಂದು ಶಿವರಾಜ್ ಕುಮಾರ್ ಹೇಳುವ 'ಬುಟ್ ಬುಡ್ತೀವಾ', ಇನ್ನೊಂದು ಸುದೀಪ್ ಹೇಳುವ 'ಓ ಭ್ರಮೆ'. ಇದೀಗ, ಓ ಭ್ರಮೆ ಡೈಲಾಗ್ ಬಗ್ಗೆ ಕಿಚ್ಚ ಸುದೀಪ್ ಎಕ್ಸ್ ಕ್ಲೂಸಿವ್ ವಿಷ್ಯ ಬಿಚ್ಚಿಟ್ಟಿದ್ದಾರೆ. ಏನದು ಮುಂದೆ ಓದಿ.....

'ಓ ಭ್ರಮೆ' ಡೈಲಾಗ್ ಬರೆದಿದ್ದು ಪ್ರೇಮ್ ಅಲ್ಲ

'ಓ ಭ್ರಮೆ' ಡೈಲಾಗ್ ಬರೆದಿದ್ದು ಪ್ರೇಮ್ ಅಲ್ಲ

'ಓ ಭ್ರಮೆ' ಎಂಬ ಎರಡಕ್ಷರದ ಡೈಲಾಗ್ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ವೈರಲ್ ಆಯ್ತು. ಯಾವುದೇ ಕಾರ್ಯಕ್ರಮ ಆದ್ರೂ ಈ ಡೈಲಾಗ್ ಗೆ ಜಾಗ ಇರ್ತಿತ್ತು. ಅದರಲ್ಲೂ ಸುದೀಪ್ ಫ್ಯಾನ್ಸ್ ಅಂತೂ ಈ ಡೈಲಾಗ್ ಇಟ್ಕೊಂಡು ಹಬ್ಬನೇ ಮಾಡ್ಬಿಟ್ರು. ಬಟ್, ಈ ಡೈಲಾಗ್ ಬರೆದಿದ್ದು ನಿರ್ದೇಶಕ ಪ್ರೇಮ್ ಎಂದುಕೊಂಡಿದ್ದರು ಅದು ತಪ್ಪು. ಯಾಕಂದ್ರೆ, ಈ ಡೈಲಾಗ್ ಬರೆದಿದ್ದು ಅವರಲ್ಲ.

ಸಂದರ್ಭಕ್ಕೆ ಸುದೀಪ್ ಹೇಳಿದ ಡೈಲಾಗ್

ಸಂದರ್ಭಕ್ಕೆ ಸುದೀಪ್ ಹೇಳಿದ ಡೈಲಾಗ್

ದಿ ವಿಲನ್ ಸಿನಿಮಾದ ಸಾಹಿತ್ಯ ಮತ್ತು ಸಂಭಾಷಣೆಯಲ್ಲಿ ಪ್ರೇಮ್ ಅವರದ್ದೇ ಸಿಂಹ ಪಾಲು. ಬಟ್, ಓ ಭ್ರಮೆ ಡೈಲಾಗ್ ಬಂದಿದ್ದು ಸುದೀಪ್ ಬಾಯಿಂದ ಎನ್ನುವ ಸತ್ಯ ಈಗ ಬಹಿರಂಗವಾಗಿದೆ. ಹೌದು, ಓ ಭ್ರಮೆ ಡೈಲಾಗ್ ಹೇಳಿದ್ದು ಸುದೀಪ್ ಅವರಂತೆ.

ಸನ್ನಿವೇಶವೊಂದರ ಶೂಟಿಂಗ್ ನಡೆಯುವಾಗ....

ಸನ್ನಿವೇಶವೊಂದರ ಶೂಟಿಂಗ್ ನಡೆಯುವಾಗ....

ಹೀಗೆ, ಸನ್ನಿವೇಶವೊಂದರ ಶೂಟಿಂಗ್ ನಡೆಯುತ್ತಿತ್ತು. ಆ ಕಡೆ ಫೋನ್ ನಲ್ಲಿ ಸಿಕ್ಕಾಪಟ್ಟೆ ಡೈಲಾಗ್ ಹೇಳಿದ ಮೇಲೆ ಸುದೀಪ್ ಅವರು ಸುಮ್ಮನೆ ಓ ಭ್ರಮೆ ಅಂದರಂತೆ. ಇದು ಆ ಸನ್ನಿವೇಶಕ್ಕೆ ಬಂದಿದ್ದಂತೆ. ಇದನ್ನ ಕೇಳಿ ಪ್ರೇಮ್ ಕೂಡ ಖುಷಿಯಾಗಿ ಇದನ್ನ ಬಳಸೋಣ ಅಂತ ಆಮೇಲೆ ಬಳಸಿದ್ದಂತೆ. ಬಟ್, ಅನೀರಿಕ್ಷಿತವಾಗಿ ಬಂದ ಈ ಡೈಲಾಗ್ ಈಗ ಎಲ್ಲರ ಬಾಯೂಲ್ಲೂ ಇದೆ.

'ಓ ಭ್ರಮೆ' ಹೇಳಬೇಡಿ

'ಓ ಭ್ರಮೆ' ಹೇಳಬೇಡಿ

ಸದ್ಯ ವಿಲನ್ ಸಿನಿಮಾ ಮರೆತರೂ, ಓ ಭ್ರಮೆ ಡೈಲಾಗ್ ಅಂತೂ ಮರೆಯೋಕೆ ಆಗಲ್ಲ ಬಿಡಿ. ಇಷ್ಟೊಂದು ನಾವು ಹೇಳಿದ ಈ ಕಥೆಯನ್ನ ಕೇಳಿ ಬಹುಶಃ ನೀವು ಕೂಡ ಓ ಭ್ರಮೆ ಅಂದಿರ್ತೀರಾ. ಯಾಕಂದ್ರೆ, ಈ ಡೈಲಾಗ್ ಗೆ ಇರೋ ಮಜಾನೇ ಅಂತಹದ್ದು. ಬಟ್, ಈ ವಿಷ್ಯವನ್ನ ಕಿಚ್ಚ ಸುದೀಪ್ ಅವರೇ ಟಿವಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

More from Filmibeat

English summary
Kannada actor sudeep has revealed a story behind the dialogue 'o brame' of the villain movie..
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X