ಆ ಕಳೆ ಇದೆ ; ಮುಂದೊಂದು ದಿನ ತಂದೆಯಂತೆ ವಿನೀಶ್ ಸೂಪರ್ ಸ್ಟಾರ್ ಆಗ್ತಾನೆ - ಡೆವಿಲ್ ರಾಣಿ ರಚನಾ ರೈ
ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗೋದು ಹೇಗೆ ಕಾಮನ್ನೋ ಅದೇ ತರ ಸಿನಿಮಾರಂಗದಲ್ಲಿ ಸ್ಟಾರ್ ಗಳ ಮಕ್ಕಳು ಸ್ಟಾರ್ ಗಳಾಗೋದು ಕೂಡ ಕಾಮನ್ನೇ. ಇದಕ್ಕೆ ಬಣ್ಣದ ಪ್ರಪಂಚದಲ್ಲಿ ಅನೇಕ ಉದಾಹರಣೆಗಳಿವೆ. ಅದರಲ್ಲಿಯೂ.. ಬಾಲಿವುಡ್‌ನಲ್ಲಿ ಇವತ್ತು ಆಳುತ್ತಿರುವ ಬಹುತೇಕರು, ಒಂದ್ಕಾಲಿನ ಸ್ಟಾರ್ ಕಲಾವಿದರ ಮಕ್ಕಳೇ. ಕೇವಲ ಮಕ್ಕಳು ಮಾತ್ರವಲ್ಲ ಅವರ ಹತ್ತಿರದ ಸಂಬಂಧಿಕರು ದೂರದ ನೆಂಟರು ಎಲ್ಲರೂ ಸಿನಿಮಾ ಕ್ಷೇತ್ರಕ್ಕೆ...
ಧುಮುಕುವ ಪ್ರಯತ್ನ ಮಾಡುತ್ತಾರೆ. ಕೇವಲ ಬಾಲಿವುಡ್ ಮಾತ್ರವಲ್ಲ ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿ ಕೂಡ ಹಲವರು ತಮ್ಮ ತಂದೆ ತಾಯಿಯ ಜಾಡು ಹಿಡಿದು ಚಿತ್ರರಂಗಕ್ಕೆ ಬಂದಿದ್ದಾರೆ. ಆದರೆ, ಹೀಗೆ ಚಿತ್ರರಂಗಕ್ಕೆ ಬರುವ ಎಲ್ಲರಿಗೆ ಇಲ್ಲಿ ಗೆಲುವು ಸಿಗುವುದಿಲ್ಲ. ತೀರಾ ಅಪರೂಪಕ್ಕೆ ಎಂಬಂತೆ ಅಲ್ಲೊಬ್ಬರು.. ಇಲ್ಲೊಬ್ಬರು.. ಮಾತ್ರ ಗೆಲ್ಲುತ್ತಾರೆ. ಮಿಕ್ಕಂತೆ ಕೆಲವರು ಎಡವುತ್ತಾರೆ. ಮತ್ತೆ ಮತ್ತೆ ಪ್ರಯತ್ನ ಮಾಡುತ್ತಾರೆ. ಇನ್ನೂ ಕೆಲವರು ಕೆಲವರು ಬಂದ ದಾರಿಗೆ ಸುಂಕ ಇಲ್ಲ ಎಂದು ಮನೆಗೆ ಮರಳುತ್ತಾರೆ.

ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಗ ವಿನೀಶ್ ಇದರಲ್ಲಿ ಯಾವ ಸಾಲಿಗೆ ಸೇರುತ್ತಾರೆ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ವಿನೀಶ್ ಮುಂದೊಂದು ದಿನ ಬಹುದೊಡ್ಡ ಸ್ಟಾರ್ ಆಗುತ್ತಾನೆ ಎನ್ನುವ ಭವಿಷ್ಯವನ್ನು ಸದ್ಯ ರಚನಾ ರೈ ನುಡಿದಿದ್ದಾರೆ.
ಹೌದು, ರಚನಾ ರೈ .. ಮಂಗಳೂರು ಚೆಲುವೆ. ತುಳು ಚಿತ್ರ ''ಸರ್ಕಸ್'' ಮೂಲಕ ತುಳುನಾಡಿನೆಲ್ಲೆಡೆ ಈಗಾಗಲೇ ಮನೆ ಮಾತಾಗಿರುವ ರಚನಾ ಪತ್ರಿಕೋದ್ಯಮದಲ್ಲಿ ಪದವಿಯನ್ನು ಪಡೆದಿದ್ದಾರೆ. ಮಾಡೆಲ್ ಆಗಿ ಕೂಡ ರ್ಯಾಂಪ್ ಮೇಲೆ ಮಿಂಚಿದ್ದಾರೆ. ಇಷ್ಟೇ ಅಲ್ಲ ರಚನಾ ಉತ್ತಮ ಭರತನಾಟ್ಯ ಕಲಾವಿದೆ ಕೂಡ ಹೌದು. ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪ್ಲೇಯರ್ ಕೂಡ ಹೌದು.
ಇಂಥಾ ರಚನಾ ರೈ ಸದ್ಯ ದರ್ಶನ್ ಗೈರು ಹಾಜರಾತಿಯಲ್ಲಿ ''ಡೆವಿಲ್'' ಚಿತ್ರದ ಪ್ರಚಾರದ ಹೊಣೆ ಹೊತ್ತಿದ್ದಾರೆ. ಬೇಸರ ಮಾಡಿಕೊಳ್ಳದೇ ಹಲವರಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ತಮ್ಮ ಪಾತ್ರದ ಬಗ್ಗೆ, ದರ್ಶನ್ ಬಗ್ಗೆ ಮತ್ತು ಡೆವಿಲ್ ಚಿತ್ರದ ಬಗ್ಗೆ ಅಭಿಮಾನದ ಮಾತುಗಳನ್ನಾಡುತ್ತಿದ್ದಾರೆ.
ಹೀಗೆ ಮಾತನಾಡುತ್ತಾ.. ಮಾತನಾಡುತ್ತಾ.. ರಚನಾ ರೈ ಸದ್ಯ ದರ್ಶನ್ ಮಗನ ಕುರಿತು ಭವಿಷ್ಯವನ್ನು ಹೇಳಿದ್ದಾರೆ. ಈ ಕುರಿತು ''Namma KFI'' ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಚನಾ ರೈ ಥಾಯ್ಲೆಂಡ್‌ಗೆ ನಮ್ಮ ಜೊತೆ ಅಕ್ಕ ವಿಜಯಲಕ್ಷ್ಮಿ ಮತ್ತು ವಿನೀಶ್ ಕೂಡ ಬಂದಿದ್ದರು ಎಂದು ಹೇಳಿದ್ದಾರೆ.

ದರ್ಶನ್ ಸರ್ ಅವರ ಪಡಿಯಚ್ಚು ವಿನೀಶ್ ಎಂದು ಹೇಳಿರುವ ರಚನಾ ರೈ ವಿನೀಶ್ ಫ್ಯೂರ್ ಸ್ಟಾರ್ ಮೆಟೀರಿಯಲ್ ಅದರಲ್ಲಿ ಅನುಮಾನವೇ ಬೇಡ ಎಂದು ಹೇಳಿದ್ದಾರೆ. ವಿನೀಶ್ ಇನ್ನೂ ಚಿಕ್ಕವನು ಅವನ ಮುಖದಲ್ಲಿ ಸ್ಟಾರ್ ಆಗುವ ಕಳೆ ಇದೆ, ಆ ಚಾರ್ಮ್ ಇದೆ, ಹೀರೋ ಆಗಲು ಏನೆಲ್ಲಾ ಅರ್ಹತೆಗಳಿರಬೇಕು ಅವೆಲ್ಲವೂ ವಿನೀಶ್ ಅಲ್ಲಿ ಇವೆ ಎಂದು ಹೇಳಿರುವ ರಚನಾ ರೈ ಸಾಗಬೇಕಿರುವ ದಾರಿ ಇನ್ನೂ ಇದೆ ಆದರೆ ತುಂಬಾನೇ ಚಾರ್ಮಿಂಗ್ ಹುಡುಗ ವಿನೀಶ್ ಎಂದು ಹೇಳಿದ್ದಾರೆ.
ಇನ್ನೂ ಇದೇ ಸಮಯದಲ್ಲಿ ಥಾಯ್ಲೆಂಡ್‌ನಲ್ಲಿ ಬಿಡುವಿನ ಸಮಯದಲ್ಲಿ ನಾನು ಹೆಚ್ಚು ಸಮಯ ಕಳೆದಿದ್ದೇ ವಿನೀಶ್ ಜೊತೆ, ಎಲ್ಲರೂ ಒಂದು ಕಡೆ ಇದ್ದರೆ ನಾನು ಮತ್ತು ವಿನೀಶ್ ಒಂದು ಕಡೆ ಇರುತ್ತಿದ್ದೇವು ಎಂದು ಹೇಳಿದ್ದಾರೆ. ಚಾಕ್ಲೇಟ್ ತಿನ್ನೋಕೆ.. ಐಸ್‌ಕ್ರೀಮ್ ತಿನ್ನೋಕೆ.. ಹೀಗೆ ವಿನೀಶ್ ಜೊತೆಯಲ್ಲಿಯೇ ನಾನು ಇರುತ್ತಿದ್ದೆ ಎಂದು ರಚನಾ ರೈ ''Namma KFI''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಸದ್ಯ ರಚನಾ ರೈ ಅವರ ಈ ಮಾತುಗಳಿಗೆ ದರ್ಶನ್ ಅವರ ಅಭಿಮಾನಿಗಳು ಕೂಡ ತಲೆಯಾಡಿಸುತ್ತಿದ್ದು ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ ತಂದೆಯತೆಯೇ ವಿನೀಶ್ ದೊಡ್ಡ ಸ್ಟಾರ್ ಆಗಿಯೇ ಆಗುತ್ತಾನೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











