ಕಿಡಿಗೇಡಿ ಮಾಡಿದ ಕೆಲಸದಿಂದ ದರ್ಶನ್ ಹೆಸರಿಗೆ ಧಕ್ಕೆ ; ವೈರಲ್ ಆಯಿತು ಹಳೆಯ ವಿಡಿಯೋ..!

By ಫಿಲ್ಮಿಬೀಟ್ ಡೆಸ್ಕ್

ನಿಮಗೆ ನೆನಪಿದೆಯಾ.. 2022ರ ಅಂತ್ಯದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದರು. ಯಾಕೆಂದರೆ ದರ್ಶನ್ ಅಭಿನಯದ ''ಕ್ರಾಂತಿ'' ಸಿನಿಮಾ ಬಿಡುಗಡೆಯ ಬಾಗಿಲಿಗೆ ಬಂದು ನಿಂತಿತ್ತು. ಹೀಗಾಗಿ ಅನೇಕ ''ಸಂದರ್ಶನ''ಗಳನ್ನ ದರ್ಶನ್ ಕೊಡುತ್ತಿದ್ದರು. ಇದೇ ಸಮಯದಲ್ಲಿ ಮಾತನಾಡ್ತಾ..ಮಾತನಾಡ್ತಾ.. ''ಅದೃಷ್ಟ ದೇವತೆ ಬಾಗಿಲು ತಟ್ಟುವುದು ಅತಿ ಅಪರೂಪ, ಅಂತ ಸಮಯದಲ್ಲಿ ಬಾಗಿಲು ತೆಗೆದು, ಆಕೆಯನ್ನು ಹಿಡಿದು ರೂಮ್‌ಗೆ ಕರೆದುಕೊಂಡು ಬಟ್ಟೆ ಬಿಚ್ಚಿ ಕೂರಿಸಿಕೊಂಡುಬಿಡಬೇಕು" ಎಂದು ಹೇಳಿ ಬಿಟ್ಟಿದ್ದರು ದರ್ಶನ್.

ಅವತ್ತು ದರ್ಶನ್ ಅವರು ಆಡಿದ್ದ ಈ ''ಮಾತು''ಗಳಿಗೆ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗಿತ್ತು. ವಾದ- ವಿವಾದ ಚರ್ಚೆ ತಾರಕಕ್ಕೇರಿತ್ತು. ಆ ನಂತರ ಆ ವಿಚಾರ ಹಾಗೇ ತಣ್ಣಗಾಯಿತು. ಈಗ ಇದೆಲ್ಲವೂ ಆಗಿ ಒಂದೂವರೆ ವರ್ಷವಾಗುತ್ತಾ ಬಂದಿದೆ. ಈ ಸಮಯದಲ್ಲಿ ದರ್ಶನ್ ಅವತ್ತು ''ಅದೃಷ್ಟ ದೇವತೆ''ಯ ಬಗ್ಗೆ ಮಾತನಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮುನ್ನಲೆಗೆ ಬಂದಿದೆ. ವೈರಲ್ ಕೂಡ ಆಗ್ತಿದೆ.

A video of Darshan talking about the Adrushta Devathe has gone viral after Ashwini Puneeth Rajkumar was insulted

ಹೌದು, ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ''ಕೀಳು ಮಟ್ಟದ ಕೊಳಕು ಮನಸ್ಥಿತಿ ವ್ಯಕ್ತಿ''ಯೊಬ್ಬ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವ ವಿಚಾರ ನಿಮಗೆ ಗೊತ್ತೇ ಇರಬೇಕು. ಆ ವ್ಯಕ್ತಿ ದರ್ಶನ್ ಅವರ ''ಅಭಿಮಾನಿ'' ಅನ್ನುವ ''ಅನುಮಾನ'' ಅನೇಕರಲ್ಲಿದೆ. ಯಾಕೆಂದರೆ ಸಾಮಾಜಿಕ ಜಾಲತಾಣದಲ್ಲಿ ಹೆಸರು ಬದಲಿಸಿ, ''ಪೇರಿ'' ಕೀಳುವ ಮುನ್ನ ಆ ವ್ಯಕ್ತಿ ''ಗಜಪಡೆ'' ಎಂಬ ಹೆಸರಿನಲ್ಲಿ ಅಕೌಂಟ್ ಹೊಂದಿದ್ದ. ಆ ಅಕೌಂಟ್ ನಿಂದನೇ ಅಭಿಮಾನದ ಸೋಗಿನಲ್ಲಿ ಕೀಳು ಅಭಿರುಚಿಯ ಪ್ರದರ್ಶನವನ್ನೂ ಮಾಡಿದ್ದ. ಹೀಗಾಗಿಯೇ ಬೆಳ್ಳಿಗ್ಗೆಯಿಂದ ದರ್ಶನ್ ಅವರ ವಿರುದ್ಧ, ಅವರ ಅಭಿಮಾನಿಗಳ ವಿರುದ್ಧ ''ಆಕ್ರೋಶದ ಅಲೆ'' ಎದ್ದಿದೆ. ಈ ಅಲೆಯಲ್ಲಿಯೇ ಅವತ್ತು ಅದೃಷ್ಟ ದೇವತೆಯ ಬಗ್ಗೆ ದರ್ಶನ್ ಮಾತನಾಡಿದ್ದ ಮಾತು ಈಗ ತೇಲಿಕೊಂಡು ಮತ್ತೆ ಬಂದಿದೆ. ವಿಡಿಯೋ ಸಾಮಾಜಿಕ ಜಾಲತಾಣಕ್ಕೆ ಅಪ್ಪಳಿಸಿದೆ.

A video of Darshan talking about the Adrushta Devathe has gone viral after Ashwini Puneeth Rajkumar was insulted

ದರ್ಶನ್ ಅವರ ಈ ಅದೃಷ್ಟ ದೇವತೆಯ ವಿಡಿಯೋ ಬಗ್ಗೆ ಅನೇಕರು ತಮ್ಮ ಅಭಿಪ್ರಾಯಗಳನ್ನ ಈಗ ಮತ್ತೊಮ್ಮೆ ಹಂಚಿಕೊಳ್ಳುತ್ತಿದ್ದಾರೆ. ''ಹೀರೋನೇ ಸರಿ ಇಲ್ದೆ ಇರೋವಾಗ ಅಭಿಮಾನಿಗಳಿಗೆ ಹೇಳಿ ಏನು ಪ್ರಯೋಜನ'' ಅನ್ನುತ್ತಿದ್ದಾರೆ. ಇನ್ನೂ ಕೆಲವರು ''ಯಥಾ ರಾಜಾ ತಥಾ ಪ್ರಜಾ'' ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಂಡವನ್ನೂ ಕಾರುತ್ತಿದ್ದಾರೆ.

A video of Darshan talking about the Adrushta Devathe has gone viral after Ashwini Puneeth Rajkumar was insulted

ಒಟ್ನಲ್ಲಿ ಅಭಿಮಾನ ಇರಬೇಕು. ''ಅಂಧಾಭಿಮಾನ'' ಇರಬಾರದು. ಅಭಿಮಾನದ ಸೋಗಿನಲ್ಲಿ ''ಕಿಡಿಗೇಡಿ''ಗಳು ಮಾಡುವ ಇಂತಹ ''ಮಾನಗೇಡಿ'' ಕೆಲಸಗಳಿಂದ ವರ್ಷಾನು ವರ್ಷಗಳಿಂದ ಶ್ರಮ ಪಟ್ಟು ಮೇಲೆ ಬಂದ ''ಸೂಪರ್ ಸ್ಟಾರ್'' ಗಳಿಗೆ ''ಕಳಂಕ'' ತಪ್ಪಿದ್ದಲ್ಲ. ಸದ್ಯಕ್ಕೆ ''ಮನುವಾದದ ಮನೋ ರೋಗಿ''ಯಂತೆ ಕಂಡು ಬರುತ್ತಿರುವ ಆ ''ಗಜಪಡೆ'' ವಿರುದ್ಧ ''ಪುನೀತ್ ರಾಜ್ ಕುಮಾರ್'' ಅವರ ಅಭಿಮಾನಿಗಳು ''ದೂರನ್ನ ದಾಖಲಿಸಿದ್ದಾರೆ''. ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇಂತಹ ವಿಕೃತಿಗಳಿಗೆ ಕಾನೂನಿನ ಮೂಲಕ ಉತ್ತರ ಸಿಗುತ್ತಾ ಅನ್ನುವುದನ್ನ ಈಗ ಕಾದು ನೋಡಬೇಕಿದೆ.

More from Filmibeat

English summary
A video of Challenging Star Darshan Talking About The Adrushta Devathe Has Gone Once Again Viral After Ashwini Puneeth Rajkumar Was Insulted By a Social Media User Named Gaja Pade, Who Is Said To Be Darshan's Fan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X