ದೊಡ್ಡವರ ಸಹವಾಸ ಯಾಕೆ ಬೇಕಿತ್ತು, ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದೇ ಮೊದಲ ತಪ್ಪು- A4 ರಘು ಪತ್ನಿ ಸಹನಾ ..!
ದರ್ಶನ್ ಜೊತೆ ಜೈಲು ಸೇರಿರುವ 17ಜನರಲ್ಲಿ ರಘು ಕೂಡ ಒಬ್ಬ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ A4 ಆರೋಪಿಯಾಗಿರೋ ಇವನೇ ರೇಣುಕಾಸ್ವಾಮಿಯನ್ನ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದು ಅನ್ನುವ ಮಾತು ಇದೆ.
ಚಿತ್ರದುರ್ಗದ ಅಭಿಮಾನಿಗಳ ಸಂಘದ ಅಧ್ಯಕ್ಷ ರಘು, 15 ವರ್ಷಗಳಿಂದ ದರ್ಶನ್ ಅಭಿಮಾನಿ. ಇವರನ್ನು ದರ್ಶನ್ ಆಗಾಗ್ಗ ಭೇಟಿ ಆಗುತ್ತಿದ್ದ ಎಂದು ಹಲವರು ಹೇಳುತ್ತಾರೆ. ಚಿತ್ರದುರ್ಗದ ಮೇಲೆ ದರ್ಶನ್ ಪ್ರಯಾಣ ಬೆಳೆಸಿದಾಗಲೆಲ್ಲಾ ಇವರನ್ನು ಭೇಟಿ ಆಗುತ್ತಿದ್ದರು ಎನ್ನಲಾಗಿದೆ. ದರ್ಶನ್ ಚಿತ್ರಗಳು ಬಿಡುಗಡೆ ಆದಾಗ ಈತ, ಚಿತ್ರ ಮಂದಿರದ ಆವರಣದಲ್ಲಿ ಕಟೌಟ್ ಅಳವಡಿಸುತ್ತಿದ್ದ. ವೃತ್ತಿಯಲ್ಲಿ ಟ್ಯಾಕ್ಸಿ ಚಾಲಕ ಎಂದು ತಿಳಿದು ಬಂದಿದೆ.

ಇಂಥ ರಘು ಪತ್ನಿ ಸಹನಾ ಈಗ ಮಾತನಾಡಿದ್ದಾರೆ.ದರ್ಶನ್ ಅವರು ಈ ಕೃತ್ಯ ಎಸಗಿದ್ದು, ನಿಜಕ್ಕೂ ತಪ್ಪು ಎಂದಿದ್ದಾರೆ. ಹೌದು, ನ್ಯೂಸ್ ಫಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಹನಾ ನನಗೆ ಏನೂ ಹೇಳದೇ ಅವತ್ತು ಬೆಳಗಿನ ಜಾವ ಮನೆಯಿಂದ ಹೋದರು. ರಾತ್ರಿ ಮನೆಗೆ ಬರುವುದು ತಡವಾದರೂ ಅವರು ಯಾವತ್ತು ಹೇಳುತ್ತಿರಲಿಲ್ಲ ಎಂದಿರುವ ಸಹನಾ, ಅವತ್ತು ಮಾತ್ರ ರಾತ್ರಿ ನಾನು ಮನೆಗೆ ಬರಲ್ಲ ಎಂದು ಫೋನ್ ಮಾಡಿದ್ದರು ಎಂದಿದ್ದಾರೆ. ಕೆಲಸದ ಮೇಲೆ ಬಂದಿದ್ದೇನೆ ಎಂದು ಹೇಳಿದ್ದರು ಎಂದು ಸಹನಾ ಹೇಳಿದ್ದಾರೆ. ಇನ್ನೂ ಈ ಪ್ರಕರಣದಲ್ಲಿ ರಘು ಜೊತೆ ಜೈಲು ಪಾಲಾದ ಅನು ಮತ್ತು ಜಗ್ಗ ಇಬ್ಬರೂ ನನ್ನ ಗಂಡನ ಸ್ನೇಹಿತರು ಎಂದಿರುವ ಸಹನಾ, ಜಗ್ಗನ ಮನೆಯಲ್ಲಿ ಅವನ ಪರ ಹೇಳ್ತಾರೆ, ನಾನು ನನ್ನ ಗಂಡನ ಪರ ಹೇಳ್ತೇನೆ. ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದು ಮೊದಲ ತಪ್ಪು. ಹೆಂಡ್ತಿ ಗರ್ಭಿಣಿ ಇದ್ದಾಳೆ, ದೊಡ್ಡವರ ಸಹವಾಸ ಯಾಕೆ ಬೇಕಿತ್ತು. ಅವರು ಮಾಡಿದ್ದು ಮೊದಲ ತಪ್ಪು, ದರ್ಶನ್ ಮಾಡಿದ್ದು ದೊಡ್ಡ ತಪ್ಪು ಅಂದಿದ್ದಾರೆ. ಜೈಲಿಗೆ ಭೇಟಿ ಮಾಡಲು ಹೋದಾಗ ನಾನು ಈ ವಿಚಾರ ಕೇಳುತ್ತೇನೆ ಎಂದಿದ್ದಾರೆ.
ಇನ್ನೂ ಅವರೇನು ಮಾಡಿದ್ದಾರೆ ಎಂದು ನನಗೆ ಏನೂ ಗೊತ್ತಿಲ್ಲ ಎಂದಿರುವ ಸಹನಾ, ಇದೇ ವೇಳೆ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ, ಅಭಿಮಾನಕ್ಕೆ ಹೋಗಿರಬಹುದು, ಕೊಲೆ ಮಾಡ್ತಿನಿ ಅಂದಾಗ ಯಾರು ಕರ್ಕೊಂಡ್ ಹೋಗ್ತಾರೆ. ದರ್ಶನ್ ಅವರು ಈ ಕೃತ್ಯ ಎಸಗಿದ್ದು, ನಿಜಕ್ಕೂ ತಪ್ಪು ಎಂದು ಪುನರುಚ್ಚಿಸಿದ್ದಾರೆ. ಮುಂದುವರೆದು ಮಾತನಾಡಿರುವ ಸಹನಾ, ನಾನು ನನ್ನ ಗಂಡನ ಪರವಾಗಿ ನಿಲ್ಲುವೆ. ಒಬ್ಬ ಮಗಳಿದ್ದಾಳೆ. ಯಾವುದೇ ಹೀರೋಗಳು ಈತರ ಮಾಡಬಾರದು. ನನ್ನ ಗಂಡನ ಸಂಬಳ ನಂಬಿಕೊಂಡು ನಾನಿಲ್ಲ ಎಂದಿದ್ಧಾರೆ. ನನ್ನದು ಪಾರ್ಲರ್ ಇದೆ ನನ್ನ ಮಗಳಿಗಾಗಿ ಮಾತ್ರ ಗಂಡ ಬೇಕು ಎಂದು ಬಯಸಿರುವೆ. ನನ್ನ ಮದುವೆಗೂ ಮುಂಚೆಯೇ ರಘುಗೆ ದರ್ಶನ್ ಪರಿಚಯ ಇತ್ತು ಎಂದು ಕೂಡ ಸಹನಾ ಹೇಳಿದ್ದಾರೆ.

ಅಂದ್ಹಾಗೇ ರಘು ಪತ್ನಿ ಸಾಮಾನ್ಯದವರೇನಲ್ಲ. ಇವರ ಬಳಿ ಇರುವ ಸಿಮ್ ಕಲೆಕ್ಷನ್ ಕಂಡೇ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ ಎಂಬ ಸುದ್ದಿ ಇದೆ. ಇನ್ನೂ ರಘು ದಂಪತಿಯ ಮೇಲೆ ಸ್ಥಳೀಯ ಮಹಿಳೆಯಿಂದ ಕಳ್ಳತನ ಆರೋಪ ಸಹ ಕೇಳಿ ಬಂದಿದೆ. ರಘು ಪತ್ನಿಯ ಹೆಸರಿನಲ್ಲಿ ಸ್ಥಳೀಯ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. 2015 ರಲ್ಲಿ ಎದುರು ಮನೆಯಲ್ಲಿ ಕಳ್ಳತನಮಾಡಿದ್ದ ಆರೋಪ ಇದೆ. 2016 ರಲ್ಲಿ FIR ದಾಖಲಾಗಿದೆ. ಇನ್ನು ರಘು ಪತ್ನಿ 2015ರಲ್ಲಿ ಖಾಸಗಿ ಬ್ಯಾಂಕಲ್ಲಿ ನಕಲಿ ಗೋಲ್ಡ್ ಇಟ್ಟು ಸಾಲಪಡೆದಿದ್ದರು ಎಂಬ ಆರೋಪ ಸಹ ಇದೆ.


Click it and Unblock the Notifications











