'ಆ ದೃಶ್ಯ' ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಯ್ತು
ಕನ್ನಡ ರಾಜ್ಯೋತ್ಸವಕ್ಕೆ ಬಿಡುಗಡೆ ಆಗಬೇಕಿದ್ದ, 'ಆಯುಷ್ಮಾನ್ ಭವ' ಸಿನಿಮಾ ಮುಂದಕ್ಕೆ ಹೋಗಿದೆ. ಹೀಗಾಗಿ ಶಿವರಾಜ್ ಕುಮಾರ್ ಅಭಿಮಾನಿಗಳು ನಿರಾಸೆ ಆಗಿದ್ದಾರೆ.
ಒಂದು ಕಡೆ ಈ ಸಿನಿಮಾ ಮುಂದಕ್ಕೆ ಹೋದರೆ, ಮತ್ತೊಂದು ಕಡೆ ರವಿಚಂದ್ರನ್ ನಟನೆಯ ಸಿನಿಮಾದ ಬಿಡುಗಡೆ ಬೇಗವೇ ಆಗುತ್ತಿದೆ. 'ಆ ದೃಶ್ಯ' ಚಿತ್ರದ ರಿಲೀಸ್ ಡೇಟ್ ಪ್ರೀ ಪೋನ್ ಆಗಿದೆ. ಸಿನಿಮಾ ನವೆಂಬರ್ 8 ರಂದು ಬಿಡುಗಡೆ ಆಗಲಿದೆ.
ಈ ಮೊದಲು ಸಿನಿಮಾದ ಬಿಡುಗಡೆ ದಿನಾಂಕ 18ಕ್ಕೆ ನಿಗದಿ ಆಗಿತ್ತು. ಆದರೆ, ಈಗ 10 ದಿನದ ಮುಂಚಿತವಾಗಿ ಸಿನಿಮಾ ರಿಲೀಸ್ ಆಗುತ್ತಿದೆ. ಈ ಹಿಂದೆ 'ದೃಶ್ಯ' ಸಿನಿಮಾದಲ್ಲಿ ರವಿಚಂದ್ರನ್ ನಟಿಸಿದ್ದು, ಈ ಸಿನಿಮಾಗೆ 'ಆ ದೃಶ್ಯ' ಎಂದು ಹೆಸರಿಡಲಾಗಿದೆ.

'ಆ ದೃಶ್ಯ' ಸಿನಿಮಾ ಒಂದು ಮರ್ಡರ್ ಮಿಸ್ಟ್ರಿಯಾಗಿದೆ. 'ಜಿಗರ್ ಥಂಡ' ಸಿನಿಮಾ ನಿರ್ದೇಶಕ ಶಿವ ಗಣೇಶ್ ಡೈರೆಕ್ಷನ್ ಮಾಡಿದ್ದಾರೆ. ಕೆ ಮಂಜು ಈ ಸಿನಿಮಾದ ನಿರ್ಮಾಣ ಮಾಡಿದ್ದಾರೆ. ಎರಡು ವಿಭಿನ್ನ ಪಾತ್ರಗಳಲ್ಲಿ ರವಿಚಂದ್ರನ್ ನಟಿಸುತ್ತಿದ್ದಾರೆ.
ರವಿಚಂದ್ರನ್ ಲುಕ್ ಕೂಡ ಬೇರೆ ರೀತಿ ಇದೆ. ಅಚ್ಚುತ್ ಕುಮಾರ್, ರಮೇಶ್ ಭಟ್, ಯಶ್ ಶೆಟ್ಟಿ, ಅರ್ಜುನ್ ಗೌಡ, ಚೈತ್ರ ಆಚಾರ್ ಸಿನಿಮಾದ ಕಲಾವಿದರಾಗಿದ್ದಾರೆ. ಈಗಾಗಲೇ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದ್ದು, ಭರವಸೆ ಹುಟ್ಟಿಸಿದೆ.


Click it and Unblock the Notifications











