For Quick Alerts
  ALLOW NOTIFICATIONS  
  For Daily Alerts

  ಉತ್ತರ ಕರ್ನಾಟಕದ ದ್ರಾಕ್ಷಿ ಬೆಳೆಗಾರ ಈಗ ಕನ್ನಡ ಚಿತ್ರ ನಿರ್ಮಾಪಕ

  By Naveen
  |

  ಒಂದು ಸಿನಿಮಾ ನಿರ್ಮಾಣ ಮಾಡುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ಆದರೆ ಇಂತಹ ಸಾಹಸವನ್ನು ಉತ್ತರ ಕರ್ನಾಟಕದ ದ್ರಾಕ್ಷಿ ಬೆಳೆಗಾರ ಒಬ್ಬರು ಮಾಡಿದ್ದಾರೆ. ಮೂಲತಃ ಕೃಷಿಕರಾಗಿದ್ದ ರವೀಂದ್ರ ಗೌಡ ಪಾಟೀಲ್ 'ಆ ಒಂದು ದಿನ' ಎಂಬ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.

  ದೇಶಕ್ಕೆ ಏನಾದರೂ ಮಾಡಬೇಕು ಎಂಬ ಆಸೆ ಹೊಂದಿದ್ದ ಇವರು ಒಂದು ಸಿನಿಮಾ ಮಾಡಿ ಅದರ ಮೂಲಕ ಒಂದು ಒಳ್ಳೆಯ ಸಂದೇಶವನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಇಂದಿನ ರಾಜಕೀಯ ವ್ಯವಸ್ಥೆ ಹಾಳಾಗಿದೆ, ಪ್ರಜಾಪ್ರಭುತ್ವವನ್ನು ಪ್ರಜೆಗಳೆ ಸರಿ ಮಾಡಬೇಕು ಎನ್ನುವ ಇವರು ತಮ್ಮ 'ಆ ಒಂದು ದಿನ' ಸಿನಿಮಾ ಮೂಲಕ ಜನರಿಗೆ ತಿಳಿ ಹೇಳಿದ್ದಾರೆ. ಈ ಚಿತ್ರದ ಕಥೆ, ಚಿತ್ರಕಥೆ ಕೂಡ ಅವರೇ ಬರೆದಿದ್ದಾರೆ.

  ದೇಶದ ಅಭಿವೃದ್ಧಿಗೆ ಬದಲಾವಣೆ ಮುಖ್ಯ ಎನ್ನುವ ಕಾರಣದಿಂದ ಈ ಚಿತ್ರವನ್ನು ಅವರು ಮಾಡಿದ್ದಾರೆ. 'ಆ ಒಂದು ದಿನ' ಸಿನಿಮಾದ ಹಾಡುಗಳು ಮತ್ತು ಟ್ರೇಲರ್ ಈಗಾಗಲೇ ರಿಲೀಸ್ ಆಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ವಿಶೇಷ ಅಂದರೆ ಈ ಚಿತ್ರದಲ್ಲಿ ನಟಿಸಿರುವ ಎಲ್ಲ ಕಲಾವಿದರು ಕೂಡ ಹೊಸಬರೇ. ಹಳ್ಳಿಯಲ್ಲಿ ಸಿನಿಮಾದ ಚಿತ್ರೀಕರಣ ಮಾಡಿದ್ದು, ಆ ಹಳ್ಳಿಯ ಜನರೇ ಚಿತ್ರದಲ್ಲಿ ನಟಿಸಿದ್ದಾರೆ. ಸಿಮ್ರಾನ್ ಚಿತ್ರದ ನಾಯಕಿ ಆಗಿದ್ದಾರೆ. ಧಾರವಾಡದ ಹುಡುಗಿ ಆಗಿರುವ ಸಿಮ್ರಾನ್ ಮುಂಬೈನಲ್ಲಿ ನೆಲೆಸಿದ್ದರು. ಇದು ಅವರ ಮೊದಲ ಕನ್ನಡ ಸಿನಿಮಾ.

  ಶ್ರೀ ಹರ್ಷಎಂಬುವವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸಿನಿಮಾದ ಒಂದು ಹಾಡನ್ನು ವಿಜಯ ಪ್ರಕಾಶ್ ಹಾಡಿದ್ದು, ಆ ಹಾಡು ಅದ್ಬುತವಾಗಿದೆ. ಸಂಜಯ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

  English summary
  'Aa Ondu Dina' kannada new movie songs released. The movie is producing by Uttara Kannada formar Ravindra Gowda Patil.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X