»   » ಸ್ವಾತಂತ್ರ್ಯ ಇತಿಹಾಸವನ್ನು ಮರುಕಳಿಸಲಿದೆ ಹೊಸಬರ 'ಕ್ರಾಂತಿವೀರ'

ಸ್ವಾತಂತ್ರ್ಯ ಇತಿಹಾಸವನ್ನು ಮರುಕಳಿಸಲಿದೆ ಹೊಸಬರ 'ಕ್ರಾಂತಿವೀರ'

Posted By:
Subscribe to Filmibeat Kannada

ಇತ್ತೀಚೆಗೆ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಕಾಲಿಡುತ್ತಿರುವ ಹೊಸಬರಿಗೆ ಪರ್ವ ಕಾಲ. ಯಾಕೆಂದರೆ ಪ್ರೇಕ್ಷಕರು ಕಥೆ ಚೆನ್ನಾಗಿದ್ದರೆ, ಅವರ ಸಿನಿಮಾಗಳನ್ನು ರತ್ನಗಂಬಳಿ ಹಾಸಿ ಕನ್ನಡ ಚಿತ್ರರಂಗಕ್ಕೆ ಬರಮಾಡಿಕೊಳ್ಳುತ್ತಾರೆ ಅನ್ನೋದು ಈಗಾಗಲೇ ಸಾಬೀತಾಗಿದೆ.

ಇದಕ್ಕೆ ಉತ್ತಮ ನಿದರ್ಶನ ಅಂದರೆ 'ರಂಗಿತರಂಗ' ಹಾಗೂ 'ಕೆಂಡಸಂಪಿಗೆ' ಸಿನಿಮಾ. ಇದೀಗ ಮತ್ತೊಂದು ಹೊಸಬರ ಸಿನಿಮಾ ಸ್ಯಾಂಡಲ್ ವುಡ್ ಗೆ ಬರಲು ತಯಾರಾಗಿ ನಿಂತಿದ್ದು, ಸದ್ದಿಲ್ಲದೆ, ಫಸ್ಟ್ ಶೆಡ್ಯೂಲ್ ಶೂಟಿಂಗ್ ಮುಕ್ತಾಯಗೊಳಿಸಿದೆ.

Aadatt Khan's 'Krranthiveera' Completes first shooting Schedule

ಹೌದು ನಿರ್ದೇಶಕ ಆದತ್ ಖಾನ್ ಆಕ್ಷನ್-ಕಟ್ ಹೇಳುತ್ತಿರುವ, ಹಾಲಪ್ಪ ಕ್ರಿಯೇಷನ್ಸ್ ಮತ್ತು ಎ.ಬಿ ನೆಟ್ ವರ್ಕ್ಸ್ ನಲ್ಲಿ ಮೂಡಿಬರುತ್ತಿರುವ 'ಕ್ರಾಂತಿವೀರ' ಎಂಬ ಸಿನಿಮಾವೊಂದು ಸೈಲೆಂಟ್ ಆಗಿ ಮೊದಲ ಭಾಗದ ಚಿತ್ರೀಕರಣ ಮುಗಿಸಿ ಎರಡನೇ ಹಂತದ ಶೂಟಿಂಗ್ ಮಾಡಲು ಎಲ್ಲಾ ರೀತಿಯ ತಯಾರಿ ನಡೆಸುತ್ತಿದೆ.

ಈ ಮೊದಲು 'ಮರಣದಂಡನೆ' ಎಂಬ ಚಿತ್ರಕ್ಕೆ ಬಂಡವಾಳ ಹೂಡಿದ್ದ ನಿರ್ಮಾಪಕ ಮುರಳಿಧರ ಹಾಲಪ್ಪ ಅವರು 'ಕ್ರಾಂತಿವೀರ' ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

Aadatt Khan's 'Krranthiveera' Completes first shooting Schedule

ಅಂದಹಾಗೆ 'ಕ್ರಾಂತಿವೀರ' ಸಿನಿಮಾ ಪ್ರೇಕ್ಷಕರನ್ನು 1947ರ ಸ್ವಾತಂತ್ರ್ಯ ದಿನಾಚರಣೆಯ ಇತಿಹಾಸಕ್ಕೆ ಕರೆದೊಯ್ಯಲಿದೆ. ಜೊತೆಗೆ ಇದು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಜೀವನ ಚರಿತ್ರೆಯಾಧರಿತ ಕಥೆಯಾಗಿದೆ ಎನ್ನುತ್ತಾರೆ ನಿರ್ದೇಶಕನ ಆದತ್ ಖಾನ್ ಅವರು.

ಇನ್ನು ನಿರ್ದೇಶಕ ಆದತ್ ಖಾನ್ ಅವರು ಈ ಮೊದಲು ನಟಿ ಹರ್ಷಿಕಾ ಪೂನಚ್ಚ ಕಾಣಿಸಿಕೊಂಡಿದ್ದ 'ಅಲೆ' ಎಂಬ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ಇದೀಗ 'ಕ್ರಾಂತಿವೀರ' ಸಿನಿಮಾದ ಮೂಲಕ ಪ್ರೇಕ್ಷಕರಲ್ಲಿ ದೇಶ ಭಕ್ತಿಯನ್ನು ಮೂಡಿಸುವ ಸಣ್ಣ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

Aadatt Khan's 'Krranthiveera' Completes first shooting Schedule

ಚಿತ್ರದಲ್ಲಿ 'ಭಗತ್ ಸಿಂಗ್' ಪಾತ್ರದಲ್ಲಿ ನಾಯಕ ನಟನಾಗಿ ಅಜಿತ್ ಜೈರಾಜ್ ಅವರು ಕಾಣಿಸಿಕೊಳ್ಳಲಿದ್ದಾರೆ. ಸದ್ಯಕ್ಕೆ ಅಜಿತ್ ಜೈರಾಜ್ ಅವರು ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವುದರಿಂದ ಸೆಕೆಂಡ್ ಶೆಡ್ಯೂಲ್ ಶೂಟಿಂಗ್ ಗೆ ಇನ್ನೂ ಡೇಟ್ ಫಿಕ್ಸ್ ಆಗಿಲ್ಲ.

ಅಲ್ಲದೇ ಬಾಲಿವುಡ್ ನ ಖ್ಯಾತ ನಟಿಯೊಬ್ಬರನ್ನು ತಮ್ಮ ಚಿತ್ರದಲ್ಲಿ ನಟಿಸಲು ಕೇಳಿಕೊಂಡು ಸಂಪರ್ಕಿಸಿರುವುದಾಗಿ ಹೇಳಿರುವ ನಿರ್ದೇಶಕ ಆದತ್ ಖಾನ್ ಅವರು ಚಿತ್ರಕ್ಕೆ ನಾಯಕಿಯನ್ನು ಇನ್ನೂ ಪಕ್ಕಾ ಮಾಡಿಲ್ಲ.

ಈಗಾಗಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗಳು ಬಿಡುಗಡೆ ಆಗಿದ್ದು, ಕುತೂಹಲ ಮೂಡಿಸಿದೆ. ಸಂಗೀತ ನಿರ್ದೇಶಕ ಕೃಪಾಕರ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಬಾಗೇಪಲ್ಲಿ, ಕೋಲಾರ, ಕೆ.ಜಿ.ಎಫ್ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ.

English summary
'Ale' movie fame Director Aadatt Khan's Kannada Movie 'Krranthiveera' Completes first shooting Schedule Kannada Actor Ajith Jairaj in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada