'ಆದಿ ಪುರಾಣ'ದ ಸಾರಾಂಶ ಹೇಳುವ 'ನಮ್ಮುರ ರಾಜನು' ಹಾಡು

ಟ್ರೇಲರ್ ಮೂಲಕ ಕುತೂಹಲ ಹುಟ್ಟಿಸಿದ್ದ 'ಆದಿ ಪುರಾಣ' ಚಿತ್ರ ಈಗ ಮತ್ತೆ ಪ್ರೇಕ್ಷಕರ ಗಮನ ಸೆಳೆದಿದೆ. ಅದಕ್ಕೆ ಕಾರಣ 'ಆದಿ ಪುರಾಣ'ದ ಹಾಡು.

ಸಿನಿಮಾದ 'ನಮ್ಮೂರ ರಾಜನು...' ಎಂಬ ಹಾಡಿನ ಟೀಸರ್ ಇದೀಗ ಬಿಡುಗಡೆಯಾಗಿದೆ. ಈ ಟೀಸರ್ ಗೆ ಯೂ ಟ್ಯೂಬ್ ನಲ್ಲಿ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಟೀಸರ್ ನೋಡಿದವರಿಗೆ ಪೂರ್ಣ ಹಾಡು ನೋಡುವ ಬಯಕೆ ಹುಟ್ಟುತ್ತದೆ. 'ಆದಿ ಪುರಾಣ'ದ ಬಗ್ಗೆ ಇದ್ದ ಪ್ರಶ್ನೆಗಳಿಗೆ ಟೀಸರ್ ಉತ್ತರ ನೀಡಲಿದೆ.

ಕವಿರಾಜ್ ಈ ಹಾಡನ್ನ ಬರೆದಿದ್ದಾರೆ, ವಿಕ್ರಂ ವಸಿಷ್ಠ ಹಾಗೂ ಚಂದನ ವಸಿಷ್ಠ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹಾಡಿನ ಟೀಸರ್ ತುಂಬ ಮುದ್ದಾಗಿದೆ. ಚಿತ್ರದಲ್ಲಿ ಶಶಾಂಕ್, ಅಹಲ್ಯಾ ಹಾಗೂ ಮೊಕ್ಷ ಕುಷಾಲ್ ನಟಿಸಿದ್ದಾರೆ. 'ಆದಿ ಪುರಾಣ' ದಲ್ಲಿ ಕಿಸ್ಸಿಂಗ್ ಸೀನ್ ಮಾತ್ರವಲ್ಲ ಒಂದೊಳ್ಳೆ ವಿಷಯ ಇರುವುದನ್ನ ಹಾಡು ಹೇಳುತ್ತಿದೆ.

Aadi purana kannada movie song teaser released.

ಸಿನಿಮಾ ಅಕ್ಟೋಬರ್ 5 ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. ವಿಭಿನ್ನ ಪ್ರಯತ್ನವನ್ನು ಅಷ್ಟೇ ವಿಭಿನ್ನವಾಗಿ ಜನರಿಗೆ ತಲುಪಿಸುತ್ತಿದ್ದಾರೆ. ಮೋಹನ್ ಕಾಮಾಕ್ಷಿ ಚಿತ್ರವನ್ನು ನಿರ್ದೇಶನ ಮಾಡಿದ್ದು, ಶಮಂತ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬಂದಿದೆ.

More from Filmibeat

English summary
Aadi purana kannada movie song teaser released. The movie will be releasing on October 5th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X