ನಾಳೆ ತೆರೆಗೆ 'ಆದಿ ಪುರಾಣ' : ಆತ್ಮವಿಶ್ವಾಸ ಹೆಚ್ಚಿಸಿದ ಪ್ರೀಮಿಯರ್ ಶೋ ಪ್ರತಿಕ್ರಿಯೆ

ನಾಳೆ ಶುಕ್ರವಾರ... ಗಾಂಧಿನಗರಕ್ಕೆ ಹೊಸ ಹೊಸ ಸಿನಿಮಾಗಳು ಬರುವ ಶುಭದಿನ. ಅದೇ ರೀತಿ ಈ ವಾರ ಕೆಲ ಸಿನಿಮಾಗಳು ರಿಲೀಸ್ ಆಗಲು ಕಾದು ನಿಂತಿವೆ. ಆ ಪೈಕಿ ತನ್ನ ವಿಭಿನ್ನತೆಯ ಮೂಲಕ ಗಮನ ಸೆಳೆಯುತ್ತಿರುವ ಸಿನಿಮಾ 'ಆದಿ ಪುರಾಣ'.

'ಆದಿ ಪುರಾಣ' ಚಿತ್ರ ನಾಳೆ (ಅಕ್ಟೋಬರ್ 5) ರಂದು ರಾಜ್ಯಾದಂತ್ಯ ಬಿಡುಗಡೆಯಾಗುತ್ತಿದೆ. ಈಗಾಗಲೇ ಸಿನಿಮಾದ ಮೂರು ಪ್ರೀಮಿಯರ್ ಶೋಗಳು ಆಗಿದ್ದು, ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಟ್ರೇಲರ್ ಮತ್ತು ಹಾಡುಗಳ ಮೂಲಕ ಕುತೂಹಲ ಹುಟ್ಟಿಸಿದ್ದ ಈ ಸಿನಿಮಾ ಪ್ರೇಕ್ಷಕರ ನಿರೀಕ್ಷೆಯನ್ನ ಸುಳ್ಳು ಮಾಡಿಲ್ಲ.

ಅಂದಹಾಗೆ, ನಾಳೆ ಚಿತ್ರಮಂದಿರಕ್ಕೆ ಬರಲು ಸಿದ್ಧವಾಗಿರುವ 'ಆದಿ ಪುರಾಣ' ಸಿನಿಮಾದ ಕೆಲವು ವಿವರಗಳು ಮುಂದಿವೆ ಓದಿ...

ಮೂರು ಯಶಸ್ವಿ ಪ್ರೀಮಿಯರ್ ಶೋ

ಮೂರು ಯಶಸ್ವಿ ಪ್ರೀಮಿಯರ್ ಶೋ

ಬೆಂಗಳೂರು, ಮೈಸೂರು ಹಾಗೂ ದಾವಣಗೆರೆಯಲ್ಲಿ 'ಆದಿ ಪುರಾಣ' ಚಿತ್ರದ ಪ್ರೀಮಿಯರ್ ಶೋ ನಡೆದಿದೆ. ಪ್ರೀಮಿಯರ್ ಶೋ ಹೌಸ್ ಫುಲ್ ಆಗಿದ್ದು, ಪ್ರೇಕ್ಷಕರ ಕಡೆಯಿಂದ ಬಂದ ಬೆಂಬಲ ಚಿತ್ರತಂಡದ ಬಲ ಹೆಚ್ಚಿಸಿದೆ. ಅನೇಕರು ಸಿನಿಮಾ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಮಾತನ್ನ ಆಡಿದ್ದಾರೆ.

ಪಕ್ಕಾ ಎಂಟರ್ಟೈನ್ಮೆಂಟ್

ಪಕ್ಕಾ ಎಂಟರ್ಟೈನ್ಮೆಂಟ್

'ಆದಿ ಪುರಾಣ' ಈ ಜಮಾನದ ಸಿನಿಮಾವಾಗಿದ್ದು, ಪಕ್ಕಾ ಎಂಟರ್ಟೈನ್ಮೆಂಟ್ ನೀಡುತ್ತದೆಯಂತೆ. ಚಿತ್ರದಲ್ಲಿ ಮನರಂಜನೆ ಜೊತೆಗೆ ಒಂದು ಸಂದೇಶ ಕೂಡ ಇದೆ. ಆದಿ ಎಂಬ ಒಬ್ಬ ಹುಡುಗನ ಪ್ರೇಮ ಹಾಗೂ ಸಂಸಾರದ ಕಥೆ ಚಿತ್ರದಲ್ಲಿದ್ದು, ನೋಡುಗರಿಗೆ ಒಳ್ಳೆಯ ಮಜಾ ನೀಡಲಿದೆಯತೆ.

ಮೋಹನ್ ಕಾಮಾಕ್ಷಿ ನಿರ್ದೇಶನ, ಶಮಂತ್ ನಿರ್ಮಾಣ

ಮೋಹನ್ ಕಾಮಾಕ್ಷಿ ನಿರ್ದೇಶನ, ಶಮಂತ್ ನಿರ್ಮಾಣ

ಮೋಹನ್ ಕಾಮಾಕ್ಷಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಶಮಂತ್ ತಮ್ಮ ರೈನ್ ಬೋ ಪ್ರೊಡಕ್ಷನ್ಸ್ ನಲ್ಲಿ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಕಿಸ್ಸಿಂಗ್ ಸೀನ್ ಒಂದು ಪ್ರಮುಖ ಘಟ್ಟದಲ್ಲಿ ಬರಲಿದ್ದು, ಈ ಕಾರಣಕ್ಕೆ ಸಿನಿಮಾ ದೊಡ್ಡ ಸುದ್ದಿ ಮಾಡಿದೆ. ಯುವ ಮನಸ್ಸುಗಳ ಜೊತೆಗೆ ಫ್ಯಾಮಿಲಿಯವರಿಗೆ ಸಹ ಸಿನಿಮಾ ಇಷ್ಟ ಆಗಲಿದೆಯಂತೆ.

ನಾಯಕನಾಗಿ ಶಶಾಂಕ್

ನಾಯಕನಾಗಿ ಶಶಾಂಕ್

ಶಶಾಂಕ್ ಈ ಸಿನಿಮಾದ ನಾಯಕನಾಗಿದ್ದಾರೆ. ಅಹಲ್ಯಾ ಹಾಗೂ ಮೋಕ್ಷಕುಲಾಲ್ ಎಂಬ ಇಬ್ಬರು ನಾಯಕಿಯರು ಆದಿಗೆ ಜೋಡಿಯಾಗಿದ್ದಾರೆ. ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯುವನಟ ಆದಿತ್ಯ ಭಾರಧ್ವಜ್ ಎರಡನೇ ಸಿನಿಮಾ ಇದಾಗಿದೆ.

75ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್

75ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್

'ಆದಿ ಪುರಾಣ' ಸಿನಿಮಾ 75ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ತುಮಕೂರು, ಮಂಡ್ಯ, ಹಾಸನ ಸೇರಿದಂತೆ ರಾಜ್ಯಾದಂತ್ಯ ಚಿತ್ರ ತೆರೆಗೆ ಬರುತ್ತಿದೆ. ಬೆಂಗಳೂರಿನಲ್ಲಿ ಮೇನಕಾ ಥಿಯೇಟರ್ ಮುಖ್ಯ ಚಿತ್ರಮಂದಿರವಾಗಿದೆ.

More from Filmibeat

English summary
'Aadi Purana' kannada movie will releasing tomorrow (October 5th)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X