'ಆಟೋ ಭಾಸ್ಕರ'ನ ದೊಡ್ಡ ಸಾಹಸಕ್ಕೆ ಸಿಕ್ತು ಪ್ರೇಕ್ಷಕರ ಪ್ರೀತಿ

''ಒಬ್ಬ ಕಲಾವಿದ, ಹನ್ನೊಂದು ಪಾತ್ರಗಳು'' ಹೀಗೆ ಹೇಳುತ್ತ ಬಂದ 'ಆಟೋ ಭಾಸ್ಕರ' ಚಿತ್ರ ನಿನ್ನೆ ಬಿಡುಗಡೆಯಾಗಿದೆ. ಯೂ ಟ್ಯೂಬ್ ನಲ್ಲಿ ರಿಲೀಸ್ ಆಗಿರುವ ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇಡೀ ಸಿನಿಮಾವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡಿರುವ ಆದಿತ್ಯ ಭಾರಧ್ವಜ್ ಅವರ ಶ್ರಮವನ್ನು ಎಲ್ಲರೂ ಮೆಚ್ಚುತ್ತಿದ್ದಾರೆ.

ಚಿತ್ರದ ಪ್ರಮುಖ ಪಾತ್ರ ಒಬ್ಬ ಆಟೋ ಡ್ರೈವರ್ ಅವನೇ 'ಆಟೋ ಭಾಸ್ಕರ'. ಆತನ ಮೂಲಕ ಶುರುವಾಗುವ ಕಥೆ ಆತನಿಂದಲೇ ಕೊನೆಯಾಗುತ್ತದೆ. ಆತನ ಜೊತೆಗೆ ಬರುವ ಉಳಿದ ಪಾತ್ರಗಳು ಒಂದೊಂದು ರೀತಿ ಇಷ್ಟ ಆಗುತ್ತದೆ. 26 ನಿಮಿಷದ ವಿಡಿಯೋದಲ್ಲಿ ಎಲ್ಲ ರೀತಿಯ ಭಾವನೆಗಳನ್ನು ತೋರಿಸಿದ್ದಾರೆ.

ಆಟೋ ಭಾಸ್ಕರ, ಮುನ್ನಿ (ಆಟೋ ಭಾಸ್ಕರನ ಗೆಳತಿ), ಒಬ್ಬ ಅಂಧ (ರಾಜ್ ಕುಮಾರ್ ಅಭಿಮಾನಿ), ಹಿರಿಯ ನಾಗರಿಕ, ಲವರ್ ಬಾಯ್, 55 ವರ್ಷದ ಮಹಿಳೆ, ಭಾಸ್ಕರನ ಅಪ್ಪ, ಬ್ಯಾಂಕ್ ಮ್ಯಾನೆಜರ್, ಜ್ಯೋತಿಷ್ಯ, ಆಫೀಶಿಯಲ್ ವ್ಯಕ್ತಿ ಹಾಗೂ ನ್ಯೂಸ್ ಅಂಕರ್ ಈ 11 ಪಾತ್ರಗಳನ್ನು ನಟ ಆದಿತ್ಯ ಭಾರಧ್ವಜ್ ಮೈ ಮೇಲೆ ಎಳೆದುಕೊಂಡು ನಟಿಸಿದ್ದಾರೆ.

aaditya bharadwajs auto bhaskara kannada movie released

ಎಲ್ಲಿಯೂ ಬೋರ್ ಆಗದಂತೆ, ಸುಂದರ ಕಥೆ ಜೊತೆಗೆ ಅಷ್ಟೇ ಸುಂದರವಾದ ನಿರೂಪಣೆ ಮೂಲಕ ಚಿತ್ರ ಸಾಗುತ್ತದೆ. ಚಿತ್ರದಲ್ಲಿ ಒಂದು ಹಾಡಿದ್ದು, ತುಂಬ ಇಂಪಾಗಿದೆ. ಮೂಲತಃ ರಂಗಭೂಮಿ ಹಿನ್ನಲೆಯ ಆದಿತ್ಯ ಅವರ ಸಿನಿಮಾ ಪ್ರೇಮ ಮೆಚ್ಚುಬೇಕು.

ಉಳಿದಂತೆ, ಈ ಚಿತ್ರದ ಸಹ ನಿರ್ದೇಶನವನ್ನು ಭರತ್ ಸ ಜಗನ್ನಾಥ್ ಮಾಡಿದ್ದಾರೆ. ಸಹಾಯಕ ನಿರ್ದೇಶಕರಾಗಿ ನಿಶ್ಚಲ್ ಮುದೊಳ್, ಚಿರಾಗ್ ಚಂದ್ರಶೇಖರ್ ಮತ್ತು ಅಪ್ರಮೇಯ ಭಾರಧ್ವಾಜ್ ಕೆಲಸ ಮಾಡಿದ್ದಾರೆ. ದಯಾನಂದ ಸಾಗರ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಶಿಶಿರ್ ಎಸ್ ಪೋಸ್ಟರ್ ಡಿಸೈನ್ ಮಾಡಿದ್ದಾರೆ. ಶರತ್ ಕ್ಯಾಮರಾ ನಿರ್ವಹಿಸಿದ್ದಾರೆ. ಸೋ, ಹೊಸ ಹುಡುಗನ ಈ ಅದ್ಭುತ ಪ್ರಯತ್ನವನ್ನು ನೀವು ಒಮ್ಮೆ ನೋಡಿ.

More from Filmibeat

English summary
Kannada young actor Aaditya Bharadwaj's 'Auto Bhaskara' kannada movie released. The actor played 11 roles in this movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X