'ಟಾಕ್ಸಿಕ್' ಚಿತ್ರದಲ್ಲಿ ರುಕ್ಮಿಣಿ ವಸಂತ್ ಪಾತ್ರಕ್ಕೆ ಡಬ್ ಮಾಡುತ್ತಿರುವ ಈ ಯುವಕ ಯಾರು?

ಪ್ರಪಂಚದಲ್ಲಿ ಚಿತ್ರವಿಚಿತ್ರ ಪ್ರತಿಭೆಗಳಿದ್ದಾರೆ. ತಮ್ಮ ಮಾತು, ಹಾಡು, ನಟನೆ ಕಾರಣಕ್ಕೆ ಮನೆ ಮಾತಾದವರು ಇದ್ದಾರೆ. ಸ್ಟಾರ್ ನಟ-ನಟಿಯರು ಕೆಲವೊಮ್ಮೆ ಸಿನಿಮಾಗಳಲ್ಲಿ ತಮ್ಮ ಪಾತ್ರಗಳಿಗೆ ವಾಯ್ಸ್ ಡಬ್ ಮಾಡಲ್ಲ. ಅದಕ್ಕಾಗಿ ಸಾಕಷ್ಟು ಜನ ಕಂಠದಾನ ಕಲಾವಿದರಿದ್ದಾರೆ. ಕಲಾವಿದರ ನಟನೆಗೆ ತಮ್ಮ ಧ್ವನಿಯ ಮೂಲಕ ಜೀವ ತುಂಬುತ್ತಾರೆ. ಸಾಕಷ್ಟು ನಟಿಯರಿಗೆ ವಾಯ್ಸ್ ಡಬ್ ಮಾಡಿರುವ ಯುವಕ ಬಗ್ಗೆ ನಿಮಗೆ ಗೊತ್ತಾ?

ಅರೇ, ನಟಿಯರಿಗೆ ಯುವಕ ವಾಯ್ಸ್ ಡಬ್ ಮಾಡೋದಾ? ಅಂತ ಕನ್‌ಫ್ಯೂಸ್ ಆಗ್ತಿದ್ದೀರಾ? ಹೌದು.. ನೀವು ಕೇಳುತ್ತಿರುವುದು ನಿಜ. ಉತ್ತರ ಕರ್ನಾಟಕದ ಪ್ರತಿಭೆ ಆದ್ಯ ಹನುಮಂತು. ತಮ್ಮ ಕಂಠದ ಮೂಲಕ ಸಾಕಷ್ಟು ಮಹಿಳಾ ಪಾತ್ರಗಳಿಗೆ ಜೀವ ತುಂಬಿದ್ದಾರೆ. ರುಕ್ಮಿಣಿ ವಸಂತ್, ಸಾಯಿ ಪಲ್ಲವಿ ರೀತಿಯ ಸ್ಟಾರ್ ನಟಿಯರಿಗೆ ವಾಯ್ಸ್ ಡಬ್ ಮಾಡಿದ್ದಾರೆ. 'ಟಾಕ್ಸಿಕ್' ಚಿತ್ರದಲ್ಲೂ ಮಹಿಳಾ ಪಾತ್ರಗಳಲ್ಲಿ ಆದ್ಯ ಕಂಠದ ಚಮತ್ಕಾರ ಕೇಳಬಹುದು. ಹೀಗೆ ಸಿನಿಮಾಗಳಲ್ಲಿ ನಟಿಯರಿಗೆಲ್ಲಾ ವಾಯ್ಸ್ ಡಬ್ ಮಾಡಿರುವ ಈ ರಾಯಚೂರು ಪ್ರತಿಭೆ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ.

Aadya Hanumanthu Dubs for Rukmini Vasanth in Toxic kannada Talent s Unique Female Voice Goes Viral

ಸದ್ಯ 'ಟಾಕ್ಸಿಕ್' ಚಿತ್ರಕ್ಕಾಗಿ ಆದ್ಯ ಕೆಲಸ ಮಾಡುತ್ತಿದ್ದಾರೆ. ISMU STARS ಯೂಟ್ಯೂಬ್ ಚಾನಲ್ ಪಾಡ್‌ಕಾಸ್ಟ್‌ನಲ್ಲಿ ಅವರು ಮಾತನಾಡಿದ್ದಾರೆ. ತಮ್ಮ ಡಬ್ಬಿಂಗ್ ಜರ್ನಿ ಬಗ್ಗೆ ಮೆಲುಕು ಹಾಕಿದ್ದಾರೆ. ಕೆಲ ಸಿನಿಮಾಗಳಲ್ಲಿ ಬಾಲನಟನಾಗಿ ನಟಿಸಿದ್ದ ಆದ್ಯ 12 ವರ್ಷಗಳಿಂದ ಡಬ್ಬಿಂಗ್ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿದ್ದಾರೆ. 180ಕ್ಕೂ ಅಧಿಕ ಸಿನಿಮಾಗಳಿಗೆ ವಾಯ್ಸ್ ಡಬ್ ಮಾಡಿದ್ದಾರೆ. 'ಸಪ್ತಸಾಗರದಾಚೆ ಎಲ್ಲೊ' ಸರಣಿ ಚಿತ್ರಗಳಲ್ಲಿ ರುಕ್ಮಿಣಿ ವಸಂತ್ ಪಾತ್ರಕ್ಕೂ ಆದ್ಯ ಧ್ವನಿ ನೀಡಿದ್ದರು.

ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಬೆಂಗಾಲಿ, ಮಲಯಾಳಂ ಭಾಷೆಗಳಲ್ಲಿ ಕೂಡ ಆದ್ಯ ಹನುಮಂತು ವಾಯ್ಸ್ ಡಬ್ ಮಾಡಿದ್ದಾರೆ. ಕಾಸ್ಟ್ಯೂಮ್ ಡಿಸೈನರ್ ಆಗಿ ಕೂಡ ಅವರು ಗುರ್ತಿಸಿಕೊಂಡಿದ್ದಾರೆ. ರಾಯಚೂರಿನಲ್ಲಿ ಹುಟ್ಟಿ ಬೆಳೆದ ಆದ್ಯಾ ಬೆಂಗಳೂರಿನಲ್ಲಿ ಮೆಡಿಕಲ್ ಅಭ್ಯಾಸ ಮಾಡುತ್ತಿದ್ದಾರೆ. ಮುಂದೆ ವೈದ್ಯರಾಗಿ ಸೇವೆ ಸಲ್ಲಿಸುವ ಮನಸ್ಸು ಮಾಡಿದ್ದಾರೆ. ಸದ್ಯ ಭಾರತದ ಮೊಟ್ಟ ಮೊದಲ ಪುರುಷ ಮಹಿಳಾ ಧ್ವನಿ ಕಲಾವಿದ ಎಂಬ ಹೆಗ್ಗಳಿಕೆಗೆ ಆದ್ಯ ಪಾತ್ರವಾಗಿದ್ದಾರೆ. ಇದೇ ಪಾಡ್‌ಕಾಸ್ಟ್‌ನಲ್ಲಿ ರುಕ್ಮಿಣಿ ವಸಂತ್ ಪಾತ್ರಕ್ಕೆ ವಾಯ್ಸ್ ಡಬ್ ಮಾಡುವುದು ಹೇಗಿರುತ್ತದೆ ಎಂದು ತೋರಿಸಿದ್ದಾರೆ.

'ಫಿದಾ' ಸಿನಿಮಾದಲ್ಲಿ ಸಾಯಿ ಪಲ್ಲವಿ, '777 ಚಾರ್ಲಿ' ಸಂಗೀತಾ ಶೃಂಗೇರಿ ಪಾತ್ರಗಳಿಗೆ ಆದ್ಯ ವಾಯ್ಸ್ ಡಬ್ ಮಾಡಿದ್ದಾರೆ. ಆಶಾ ಭಟ್, ಆಶಿಕಾ ರಂಗನಾಥ್ ಅವರಿಗೂ ವಾಯ್ಸ್ ಕೊಟ್ಟಿದ್ದಾರೆ. ನನ್ನ ಪ್ರತಿಭೆ ಬಗ್ಗೆ ಕನ್ನಡಿಗರಿಗೆ ಹೆಚ್ಚು ಗೊತ್ತಿಲ್ಲ ಎಂದು ಆದ್ಯ ಹೇಳಿದ್ದಾರೆ. ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳ ಆರ್ಭಟ ನಡೀತಿದೆ. ಒಂದೇ ಭಾಷೆಯ ಸಿನಿಮಾಗಳು ಬೇರೆ ಬೇರೆ ಭಾಷೆಗಳಿಗೆ ಡಬ್ ಆಗುತ್ತಿದೆ. ಹಾಗಾಗಿ ಆದ್ಯ ಅವರಿಗೆ ಹೆಚ್ಚು ಹೆಚ್ಚು ಅವಕಾಶಗಳು ಸಿಗುತ್ತಿದೆ. ಎಐಯಿಂದ ಮುಂದಿನ ದಿನಗಳಲ್ಲಿ ಕಂಠದಾನ ಕಲಾವಿದರಿಗೆ ಅವಕಾಶಗಳು ಕಮ್ಮಿ ಆಗುವ ಆತಂಕ ವ್ಯಕ್ತಪಡಿಸಿದ್ದಾರೆ.

'ಟಾಕ್ಸಿಕ್' ಚಿತ್ರದಲ್ಲಿ ಮಹಿಳಾ ಪಾತ್ರಗಳಿವೆ ವಾಯ್ಸ್ ಡಬ್ ಮಾಡುತ್ತಿರುವ ಬಗ್ಗೆ ಡಾ. ಆದ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಬೇರೆ ಬೇರೆ ಭಾಷೆಗಳಲ್ಲಿ ಡಬ್ ಮಾಡ್ತಿದ್ದೀನಿ. ಇನ್ನು ಡಬ್ಬಿಂಗ್ ಕೆಲಸ ಮುಂದುವರೆದಿದೆ ಎಂದಿದ್ದಾರೆ. ರುಕ್ಮಿಣಿ ವಸಂತ್ ಪಾತ್ರಕ್ಕೆ ಮಾತ್ರ ಆದ್ಯ ವಾಯ್ಸ್ ಕೊಡ್ತಿದ್ದಾರಾ? ಅಥವಾ ಬೇರೆ ಪಾತ್ರಗಳಿಗೂ ಡಬ್ ಮಾಡುತ್ತಿದ್ದಾರಾ? ಎನ್ನುವ ಬಗ್ಗೆ ಹೆಚ್ಚು ಮಾತನಾಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ಸಿಗಲಿದೆ. ಮತ್ತಷ್ಟು ಅವಕಾಶಗಳು ಆದ್ಯ ಅವರನ್ನು ಹುಡುಕಿ ಬರಲಿ ಎಂದು ಆಶಿಸೋಣ.

More from Filmibeat

Read more about: rukmini vasanth toxic yash
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X