»   » ಬಿಗ್ ಸ್ಕ್ರೀನ್ ಮೇಲೆ ಬೇಬಿ ಡಾಲ್ ಆದ್ಯಾ ತುಂಟಾಟ ಶುರು!

ಬಿಗ್ ಸ್ಕ್ರೀನ್ ಮೇಲೆ ಬೇಬಿ ಡಾಲ್ ಆದ್ಯಾ ತುಂಟಾಟ ಶುರು!

Posted By:
Subscribe to Filmibeat Kannada

ಬೇಬಿ ಡಾಲ್ ಆದ್ಯಾ 'ಸರಿಗಮಪ' ಕಾರ್ಯಕ್ರಮದ ಮೂಲಕ ಕರ್ನಾಟಕದ ಜನರ ಮನ ಗೆದಿದ್ದರು. ಕಿರುತೆರೆಯಲ್ಲಿ ತಮ್ಮ ಹಾಡಿನ ಮೂಲಕ ಎಲ್ಲರಿಗೂ ಇಷ್ಟ ಆಗಿದ್ದ ಈ ಪುಟ್ಟ ಹುಡುಗಿ ಈಗ ಬಿಗ್ ಸ್ಕ್ರೀನ್ ಮೇಲೆ ತುಂಟಾಟ ಮಾಡಲಿದ್ದಾರೆ.

ಆದ್ಯಾ ಈಗ ಕನ್ನಡದ 'ಭೀಮಸೇನಾ ನಳಮಹರಾಜ' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾದ ಮುಹೂರ್ತ ಕಾರ್ಯಕ್ರಮ ಕೂಡ ನಡೆದಿದ್ದು, ಅಲ್ಲಿ ಆದ್ಯಾ ಭಾಗವಹಿಸಿದ್ದರು. ಅಂದಹಾಗೆ, ಈ ಸಿನಿಮಾದ ಒಂದು ವಿಶೇಷ ಪಾತ್ರಕ್ಕಾಗಿ ಚಿತ್ರತಂಡ ಆದ್ಯಾ ಅವರನ್ನು ಆಯ್ಕೆ ಮಾಡಿದೆಯಂತೆ.

Aadya making her sandalwood debut in 'Bheema Sena Nala Maharaja'

ಇನ್ನೂ 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಅಭಿನಯಿಸಿದ್ದ ಅರವಿಂದ್ ಅಯ್ಯರ್ ಈ ಚಿತ್ರದ ನಾಯಕನಾಗಿದ್ದಾರೆ.ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನ ಅವರು ಬಂಡವಾಳ ಹಾಕುತ್ತಿದ್ದು, ಕಾರ್ತಿಕ್ ಸರಗೂರು ನಿರ್ದೇಶನ ಮಾಡುತ್ತಿದ್ದಾರೆ. 'ದೃಶ್ಯ' ಸಿನಿಮಾದಲ್ಲಿ ರವಿಚಂದ್ರನ್ ಪುತ್ರಿಯಾಗಿ ಕಾಣಿಸಿಕೊಂಡಿದ್ದ ಆರೋಹಿ ಇಲ್ಲಿ ನಾಯಕಿ ಆಗಿದ್ದಾರೆ.

English summary
'Sarigamapa' Contestant Aadya making her sandalwood debut through Kannada Movie 'Bheema Sena Nala Maharaja'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada