ಕನ್ನಡದ ಮೊದಲ ಹಾರರ್ ತ್ರಿಡಿ ಚಿತ್ರ 'ಆಕ್ರಮಣ'
'ಆಕ್ರಮಣ' ಕನ್ನಡ ಸಿನೆಮಾ ಒಂದು ಪರಾಕ್ರಮ ಸಾಧಿಸಿದ. ತಮ್ಮ ಚೊಚ್ಚಲ ನಿರ್ದೇಶನದಲ್ಲಿ '3ಡಿ ಹಾಗೂ 2ಡಿ' ತಂತ್ರಜ್ಞಾನದ ಸಿನೆಮಾ ನಿರ್ದೇಶನ ಮಾಡಿದವರು ನಿರ್ದೇಶಕ ಪ್ರಾಶಾಂತ್ ಕುಮಾರ್ ಎನ್. ಈಗ ಅವರ ಸಿನೆಮಾ 25 ನಿಮಿಷಗಳ ಗ್ರಾಫಿಕ್ಸ್ ಬಳಕೆಗೆ ಸಿದ್ಧವಾಗಿದೆ.
ಹಾರರ್ ಅಂಶಗಳನ್ನು ಈ ಗ್ರಾಫಿಕ್ಸ್ ತಂತ್ರಜ್ಞಾನದಲ್ಲಿ ಅಳವಡಿಸಿಕೊಂಡಿರುವುದು ಚಿತ್ರಕ್ಕೆ ಇನ್ನಷ್ಟು ಮೆರುಗು ನೀಡಿದೆ. ವಿಮಲ್ ಜೈನ್, ಸುರೇಶ್ ಜೈನ್, ಪರಮೇಶ್ ಜೊತೆ ಸೇರಿ ಪ್ರಶಾಂತ್ ಕುಮಾರ್ ಎನ್ ನಿರ್ಮಾಣ ಸಹ ಮಾಡಿದ್ದಾರೆ. 'ಆಕ್ರಮಣ' ಮೈಸೂರಿನಲ್ಲಿ ಪ್ರಾರಂಭವಾಗಿ ಮೈಸೂರಿನಲ್ಲಿ ಸಂಪೂರ್ಣಗೊಳಿಸಿದ ಚಿತ್ರ.

ಕನ್ನಡದಲ್ಲಿ ತಯಾರಾದ 'ಕಠಾರಿ ವೀರ ಸುರ ಸುಂದರಂಗಿ' ಚಿತ್ರಕ್ಕೆ ಸಹಾಯಕರಾಗಿ ಕೆಲಸ ಮಾಡುತ್ತಿರುವಾಗಲೇ ಇವರಿಗೆ ರತೀಶ್ ಕುಮಾರ್ ಅವರ ಪರಿಚಯವಾಯಿತು. 3ಡಿ ಹಾಗೂ 2ಡಿ ತಂತ್ರಜ್ಞಾನದಲ್ಲಿ ಸಿನೆಮಾ ಮಾಡುವ ಆಸೆ ಮೊಳಕೆ ಒಡದಿದ್ದು ಆಗಲೇ. ಆಕ್ರಮಣ ಚಿತ್ರವನ್ನು ಮೈಸೂರು, ಮಡಿಕೇರಿ, ಕಾಸರಗೊಡಿನಲ್ಲಿ ಚಿತ್ರೀಕರಣ ಮಾಡಲಾಗಿದೆ.
ಚೆನ್ನೈನಲ್ಲಿ ಬಾಲ ಅವರು '3ಡಿ'ಗಾಗಿ, ಬೆಂಗಳೂರಿನಲ್ಲಿ ಜೀವನ್ ಅವರು '2ಡಿ' ತಂತ್ರಜ್ಞಾನದ ಸಂಕಲನ ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಸುನಿಲ್ ಆರ್, ಸತೀಶ್ ಆರ್ಯನ್ ಅವರ ಸಂಗೀತ, ಕೆ.ಜಿ ರತೀಶ್ ಅವರು ಛಾಯಾಗ್ರಾಹಕರು, ಆಸ್ಕರ್ ಅಭಿಶೇಖ್, ಲಲಿತ ರಾಜ್ ವಿನಾಯಕ್, ಆದರ್ಶ್ ಎಂ.ಎನ್ ಸಂಭಾಷಣೆ ಬರೆದಿದ್ದಾರೆ, ಶಂಕರ್, ಮಂಜುನಾಥ ರಾವು, ಆದರ್ಶ್, ಸತೀಶ್ ಆರ್ಯನ್ ಆವರ ಗೀತ ಸಾಹಿತ್ಯವಿದೆ.
ದೀಪಕ್ ಅವರ ನೃತ್ಯ ನಿರ್ದೇಶನ, ಕೆ.ಡಿ ವೆಂಕಟೇಶ್ ಅಂಡ್ ರಾಜೇಶ್ ಕಣ್ಣನ್ ಅವರ ಸಾಹಸ, ಸಹಾಯಕ ನಿರ್ದೇಶಕರಾಗಿ ಆದರ್ಶ, ಲಲಿತ ರಾಜ್ ವಿನಾಯಕ್, ಸಂಜೋತ ಅವರ ಸಹಾಯಕ ನಿರ್ದೇಶನ ಇದೆ.
ತಾರಾಗಣದಲ್ಲಿ ಖಾಕಿ ತೊಟ್ಟ ಅಧಿಕಾರಿಯಾಗಿ ರಘು ಮುಖರ್ಜಿ, ಡೈಸಿ ಶಾ, ಶಿಲ್ಪಿ ಶರ್ಮ, ಮಕರಂದ್ ದೇಶ್ ಪಾಂಡೆ, ಅವಿನಾಶ್, ಸಿದ್ಲಿಂಗು ಶ್ರೀಧರ್, ಸುದರ್ಶನ್, ರಮೇಶ್ ಪಂಡಿತ್, ಡ್ಯಾನಿ ಕುಟ್ಟಪ್ಪ, ಮಾರ್ಕೊ, ಪ್ರಕಾಶ್ ಶೆಣೈ, ಕಿಶೋರಿ ಬಲ್ಲಾಳ್ ಹಾಗೂ ಇತರರು ಇದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











