ಕನ್ನಡದ 'ಭಿನ್ನ' ಟ್ರೈಲರ್ ನೋಡಿ ಮೆಚ್ಚಿಕೊಂಡ ಆಮಿರ್ ಖಾನ್

'ಶುದ್ಧಿ' ಚಿತ್ರದ ಖ್ಯಾತಿಯ ನಿರ್ದೇಶಕ ಆದರ್ಶ್ ಈಶ್ವರಪ್ಪ 'ಭಿನ್ನ' ಎನ್ನುವ ವಿಭಿನ್ನ ಸಿನಿಮಾ ಮಾಡಿದ್ದಾರೆ. ಈಗಾಗಲೆ ಸಿನಿಮಾ ಪೂರ್ಣಗೊಳಿಸಿ ದೇಶ-ವಿದೇಶಗಳಲ್ಲಿ ಹಲವು ಸಿನಿಮೋತ್ಸವದಲ್ಲಿ ಭಾಗಿಯಾಗಿ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದೆ.

ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ 'ಭಿನ್ನ' ಸಿನಿಮಾಗೆ ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಬೆಂಬಲ ಸಿಕ್ಕಿದೆ. ಹೌದು, ಚಿತ್ರದ ಟ್ರೈಲರ್ ಅನ್ನು ಆಮಿರ್ ಖಾನ್ ದಂಪತಿ ನೋಡಿ ಮೆಚ್ಚಿಗೆ ವ್ಯಕ್ತಪಡಿಸಿದ್ದಾರಂತೆ. ಟ್ರೈಲರ್ ನೋಡಿ ಇಷ್ಟಪಟ್ಟಿದ್ದು ಮಾತ್ರವಲ್ಲದೆ ಸಿನಿಮಾ ನೋಡುವುದಾಗಿಯು ಹೇಳಿದ್ದಾರಂತೆ. ಆಮಿರ್ ಖಾನ್ ಬೆಂಬಲ ಈಗ ಚಿತ್ರತಂಡದ ಸಂತಸವನ್ನು ಮತ್ತಷ್ಟು ಹೆಚ್ಚಿಸಿದೆ.

ಅಂದ್ಹಾಗೆ 'ಭಿನ್ನ' ಸಿನಿಮಾ ಇತ್ತೀಚಿಗೆ ನಡೆದ 9ನೇ ದಾದಾ ಸಾಹೇಬ್ ಪಾಲ್ಕೆ ಫಿಲ್ಮ್ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ಸ್ಕ್ರೀನ್ ಪ್ಲೇ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಅಷ್ಟೆಯಲ್ಲದೆ ಇಟಲಿಯ ಒನಿರೋಸಿ ಸಿನಿಮೋತ್ಸವದಲ್ಲಿ ಅತ್ಯುತ್ತಮ ಥ್ರಿಲ್ಲರ್ ಚಿತ್ರ, ಅತ್ಯುತ್ತಮ ನಿರ್ದೇಶಕ, ಬೆಸ್ಟ್ ಒರಿಜಿನಲ್ ಸೌಂಡ್ ಟ್ರ್ಯಾಕ್ ವಿಭಿಗದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

Aamir Khan appreciates the Bhinna movie trailer of Kannada

ಸಾಲು ಸಾಲು ಪ್ರಶಸ್ತಿಗಳನ್ನು ಪಡೆದುಕೊಳ್ಳುತ್ತಿರುವ 'ಭಿನ್ನ' ಸಿನಿಮಾ ಸಧ್ಯದಲ್ಲೆ ತೆರೆಗೆ ಬರಲಿದೆ. ಸೈಕಲಾಜಿಕಲ್ ಥ್ರಿಲ್ಲರ್ ವಿಷಯ ಇರುವು 'ಭಿನ್ನ' ಚಿತ್ರದಲ್ಲಿ ರಂಗಭೂಮಿ ಹಿನ್ನಲೆಯ ಶಶಾಂಕ್ ಪುರುಷೋತ್ತಮ್, ಸಿದ್ಧಾರ್ಥ್ ಮಾಧ್ಯಮಿಕ, ಪಾಯಲ್ ರಾಧಕೃಷ್ಣ ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದಾರೆ.

More from Filmibeat

English summary
Bollywood actor Aamir Khan appreciates the 'Bhinna' movie trailer of Kannada. This movie is directed by Adarsh Eshwarapp.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X