»   » ಯಶ್ 'ರಾಮಾಚಾರಿ' ಮುಂದೆ ಕೇಕೆ ಹಾಕಲಿಲ್ಲ ಆಮೀರ್ 'ಪಿಕೆ'

ಯಶ್ 'ರಾಮಾಚಾರಿ' ಮುಂದೆ ಕೇಕೆ ಹಾಕಲಿಲ್ಲ ಆಮೀರ್ 'ಪಿಕೆ'

Posted By:
Subscribe to Filmibeat Kannada

ಒಂದ್ಕಾಲ ಇತ್ತು....ಬಾಲಿವುಡ್ ನ ಬಿಗ್ ಸ್ಟಾರ್ ಸಿನಿಮಾ ತೆರೆಗೆ ಬರ್ತಿದೆ ಅಂದ್ರೆ, ಇನ್ಯಾವ ಚಿತ್ರಗಳೂ ಅದರ ಪೈಪೋಟಿಗೆ ನಿಲ್ಲುತ್ತಿರಲಿಲ್ಲ. ಅಸಲಿಗೆ ಬೇರೆ ಯಾವ ಚಿತ್ರಗಳಿಗೂ ಭಾರತದಾದ್ಯಂತ ಥಿಯೇಟರ್ ಗಳೇ ಸಿಗುತ್ತಿರಲಿಲ್ಲ.

ಕನ್ನಡ ಚಿತ್ರರಂಗವೂ ಅಷ್ಟೇ, ಪರಭಾಷಾ ಹಾವಳಿಯಿಂದ ಬಳಲಿ ಬೆಂಡಾಗಿದೆ. ವರ್ಷಕ್ಕೆ ಒಂದೇ ಸಿನಿಮಾ ಮಾಡುವ ಶಾರುಖ್ ಖಾನ್, ಸಲ್ಮಾನ್ ಖಾನ್, ಆಮೀರ್ ಖಾನ್ ತೆರೆಗೆ ಬರ್ತಿದ್ದಾರೆ ಅಂದ್ರೆ, ಸಣ್ಣ ಪುಟ್ಟ ಹೀರೋಗಳ ಸಿನಿಮಾಗಳು ರಿಲೀಸ್ ಆಗ್ತಿತ್ತೇ ಹೊರತು, ಸ್ಟಾರ್ ಗಳ ಚಿತ್ರ ಬಿಡುಗಡೆಯಾಗುತ್ತಿರಲಿಲ್ಲ.

PK

ಆದ್ರೆ, ಈ ಕ್ರಿಸ್ಮಸ್ ಸಂದರ್ಭದಲ್ಲಿ ಆಗಿದ್ದೇ ಬೇರೆ...ಯಾರು ಏನೇ ಹೇಳಿದರೂ, ''ನಮಗೆ ನಾವೇ ಹೀರೋ ಆಗಬೇಕು'' ಅಂತ ಡೈಲಾಗ್ ಹೊಡೆದಿದ್ದ ಯಶ್, ತಮ್ಮ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಮೂಲಕ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಅಭಿನಯದ 'ಪಿಕೆ' ಚಿತ್ರಕ್ಕೆ ಚಾಲೆಂಜ್ ಹಾಕೇ ಬಿಟ್ಟರು.

ಹಾಗೆ, ಹಾಕಿದ್ದ ಸವಾಲಿನಲ್ಲಿ ಇಂದು ಗೆದ್ದು ಬೀಗ್ತಿದ್ದಾರೆ ಯಶ್. ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನ ಚಿಂದಿ ಉಡಾಯಿಸುತ್ತಿರುವ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ ಕರ್ನಾಟಕದ ಮಾರುಕಟ್ಟೆಯಲ್ಲಿ ಆಮೀರ್ 'ಪಿಕೆ'ಯನ್ನ ಮಕಾಡೆ ಮಲಗಿಸಿಬಿಟ್ಟಿದೆ. [ವಿಷ್ಣು ಅಭಿಮಾನಿಗಳೇ, 'ರಾಮಾಚಾರಿ' ನೋಡಲು ಮರೆಯದಿರಿ..]

MR and MRS Ramachari2

ಸ್ಯಾಂಡಲ್ ವುಡ್ ನ ಅಚ್ಚರಿ ಅಂದ್ರೆ ಇದೆ, ಡಿಸೆಂಬರ್ 19 ರಂದು ತೆರೆಗೆ ಬಂದ 'ಪಿ.ಕೆ' ಚಿತ್ರ ಕೇವಲ ನಾಲ್ಕು ದಿನಗಳಲ್ಲಿ 6.30 ಕೋಟಿ ರೂಪಾಯಿಯನ್ನ ಬಾಚಿ ದಾಖಲೆ ಮಾಡಿತ್ತು.

ಮೊದಲ ವಾರ ಕರ್ನಾಟಕದ ಬಾಕ್ಸ್ ಆಫೀಸ್ ನಲ್ಲಿ ಜೋರು ಕಲೆಕ್ಷನ್ ಮಾಡಿದ್ದ ಪಿಕೆ, ಎರಡನೇ ವಾರದ ಹೊತ್ತಿಗೆ ಡಲ್ ಆಗ್ಬಿಟ್ಟಿದೆ. ಇದಕ್ಕೆ ಕಾರಣ ಡಿಸೆಂಬರ್ 25 ರಂದು ತೆರೆಗೆ ಬಂದ ಕನ್ನಡ ಚಿತ್ರ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ'. [ಸಪ್ತ ಸಾಗರದಾಚೆಗೆ ಹಾರಿದ 'ರಾಮಾಚಾರಿ']

PK2

ನಾಲ್ಕು ದಿನಗಳ ಕಲೆಕ್ಷನ್ ಪ್ರಕಾರ, ಅಂದಾಜಿನಲ್ಲಿ ಲೆಕ್ಕ ಹಾಕಿದ್ರೆ. ಎರಡು ವಾರಗಳಲ್ಲಿ 'ಪಿಕೆ' 20 ಕ್ಕೂ ಹೆಚ್ಚು ಕೋಟಿ ಬಾಚಬೇಕಿತ್ತು. ಆದ್ರೆ 10 ದಿನಗಳಲ್ಲಿ 'ಪಿಕೆ' ಕಲೆಕ್ಟ್ ಮಾಡಿರುವುದು ಎಷ್ಟು ಗೊತ್ತಾ, ಬರೀ 16.04 ಕೋಟಿ.

ಇದು ಬಾಲಿವುಡ್ ಚಿತ್ರದ ಮಟ್ಟಿಗೆ ಕರ್ನಾಟಕದಲ್ಲಿ ದಾಖಲೆ ಆದರೂ, 'ರಾಮಾಚಾರಿ' ಮುಂದೆ ಆಮೀರ್ ಸಪ್ಪೆ ಆಗಿದ್ದಾರೆ. ಅದಕ್ಕೆ ಲೆಕ್ಕ ಇಲ್ಲಿದೆ ನೋಡಿ....

ರಿಲೀಸ್ ಆದ ಮೊದಲ ವಾರವೇ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಬರೋಬ್ಬರಿ 12 ಕೋಟಿ ರೂಪಾಯಿ ಕಮಾಯಿ ಮಾಡಿತ್ತು. ಇನ್ನೂ ಎರಡನೇ ವಾರ 9-10 ಕೋಟಿ ವಸೂಲಿ ಮಾಡಿದೆ. ಅಂದ್ರೆ ಎರಡು ವಾರಗಳಲ್ಲಿ 'ರಾಮಾಚಾರಿ' ಸಾಧನೆ ಸುಮಾರು 22 ಕೋಟಿ. (ಥಿಯೇಟರ್ ಬಾಡಿಗೆಯನ್ನ ಹೊರತು ಪಡಿಸಿ)

MR and MRS Ramachari3

ಅಲ್ಲಿಗೆ, 'ರಾಮಾಚಾರಿ'ಯ ಜಯ ಘೋಷದ ಮುಂದೆ ಆಮೀರ್ 'ಪಿಕೆ'ಗೆ ಅಭಿಮಾನಿಗಳು ಕೇಕೆ ಹಾಕ್ಲಿಲ್ಲ ಅಂತ ಅರ್ಥ. ಮೊದಲ ವಾರ 'ಪಿಕೆ'ಗೆ ಭರ್ಜರಿ ಓಪನ್ನಿಂಗ್ ಸಿಕ್ಕರೂ, 'ರಾಮಾಚಾರಿ' ಬಂದ್ಮೇಲಿಂದ 'ಪಿಕೆ', ಕಲೆಕ್ಷನ್ ಗ್ರಾಫ್ ನಲ್ಲಿ ಕುಂಟುತ್ತಿದೆ. [ಧೂಮ್ 3 ದಾಖಲೆ ಧೂಳಿಪಟ, ಪಿಕೆ 600+ ಕೋಟಿ ರು ಗಳಿಕೆ]

ವಿಶ್ವದಾದ್ಯಂತ 'ಪಿಕೆ' 600 ಕೋಟಿಯನ್ನ ಗಳಿಸಿ ರೆಕಾರ್ಡ್ ಮಾಡಿರಬಹುದು. ಆದ್ರೆ, ಕರ್ನಾಟಕದಲ್ಲಿ 'ರಾಮಾಚಾರಿ'ಯದ್ದೇ ಹವಾ. ಬೇಕಾದ್ರೆ, ಒಮ್ಮೆ 'ಬುಕ್ ಮೈ ಶೋ' ಕೂಡ ಚೆಕ್ ಮಾಡಿ, 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ'ಗೆ 81% ಟ್ರೆಂಡ್ ಇದ್ದರೆ, 'ಪಿಕೆ' ಟ್ರೆಂಡಿಂಗ್ 77%. [ಬಾಕ್ಸ್ ಆಫೀಸ್ ನಲ್ಲಿ 'ರಾಮಾಚಾರಿ' ತಕಧಿಮಿತ]

Aamir Khan's PK collection drops due to Yash's MR and MRS Ramachari

ಒಳ್ಳೆಯ ಕನ್ನಡ ಸಿನಿಮಾ ಮಾಡಿದ್ರೆ, ಕನ್ನಡ ಪ್ರೇಕ್ಷಕರು ಕೈಬಿಡಲ್ಲ, ಯಾವ ಬಾಲಿವುಡ್ ಚಿತ್ರಗಳೂ ನಿಲ್ಲಲ್ಲ ಅನ್ನುವುದಕ್ಕೆ ಇಷ್ಟು ಸಾಕ್ಷಿ ಸಾಕಲ್ವಾ..?! (ಫಿಲ್ಮಿಬೀಟ್ ಕನ್ನಡ)

English summary
Rocking Star Yash starrer MR and MRS Ramachari has bought about a major affect in Aamir's PK collection in Karnataka Box Office. The Kannada movie has opened up to positive reviews from audience. Thus, till date collection wise in Karnataka Mr and Mrs Ramachari stands first and not PK.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada