ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಸ್ಪಿರಿಚ್ಯುಯಲ್ ಥ್ರಿಲ್ಲರ್ ಡ್ರಾಮಾ 'ಆರ'
ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರದ ನಡುವೆಯೂ ಸ್ಯಾಂಡಲ್‌ವುಡ್‌ನಲ್ಲಿ ಹೊಸಬರ ದರ್ಬಾರ್ ಮುಂದುವರೆದಿದೆ. ಹೊಸ ಹೊಸ ಕಾನ್ಸೆಪ್ಟ್‌ಗಳನ್ನು ಹೊತ್ತು ಚಿತ್ರರಂಗಕ್ಕೆ ಧುಮುಕುತ್ತಿದ್ದಾರೆ. ಇಂತಹ ಹೊಸಬರ ಪಟ್ಟಿಯಲ್ಲಿ ಮತ್ತೊಂದು ಸಿನಿಮಾ ಸೇರಿದೆ, ಅದುವೇ 'ಆರ'.
ಕನ್ನಡದ ಪ್ರತಿಭಾವಂತ ಹಾಗೂ ಯುವ ಸಿನಿಮಾ ಉತ್ಸಾಹಿಗಳ ತಂಡ ಕೇವಲ ಟೀಸರ್‌ನಿಂದಲೇ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಈಗಾಗಲೇ ಟೈಟಲ್ ಹಾಗೂ ಪೋಸ್ಟರ್ ಮೂಲಕ ಕ್ಯೂರಿಯಾಸಿಟಿ ಹುಟ್ಟು ಹಾಕಿರೋ ಚಿತ್ರತಂಡ ಟೀಸರ್ ರಿಲೀಸ್ ಮಾಡಿ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ.

'ಕಾಂತಾರ' ಸಿನಿಮಾ ಮೂಲಕ ಅಪರೂಪದ ಶೈಲಿಯ ಸಿನಿಮಾದ ಕಡೆಗೆ ಸಿನಿಮಾ ಮಂದಿ ವಾಲಿದಂತೆ ಇದೆ. ಕೆಲ ಚಿತ್ರತಂಡ ದೈವ ಹಾಗೂ ದುಷ್ಟ ಶಕ್ತಿಯ ಹಿನ್ನೆಲೆಯುಳ್ಳ ಹಿನ್ನೆಲೆಯುಳ್ಳ ಕಥೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದೆ. ಈಗ 'ಆರ' ದೈವ ಹಾಗೂ ದುಷ್ಟ ಶಕ್ತಿಯ ಹಿನ್ನೆಲೆಯುಳ್ಳ ಕಥೆಯೇ ಆಗಿದೆ.
ಅಂದ್ಹಾಗೆ 'ಆರ' ಸಿನಿಮಾ ಟೀಸರ್ ರಿಲೀಸ್ ಆಗಿದ್ದು, ಇದು ಕೂಡ ಆ ಝಲಕ್ ಅನ್ನು ತೋರಿಸುತ್ತಿದೆ. ಈ ಸಿನಿಮಾವನ್ನು ಅಶ್ವಿನ್ ವಿಜಯಮೂರ್ತಿ ನಿರ್ದೇಶನ ಮಾಡುತ್ತಿದ್ದಾರೆ. ಇಡೀ ಬಹುತೇಕ ಹೊಸಬರಿಂದಲೇ ನಿರ್ಮಾಣಗೊಳ್ಳುತ್ತಿದೆ.
ಇನ್ನು 'ಆರ' ಸಿನಿಮಾ ಪ್ರಮುಖ ಪಾತ್ರದಲ್ಲಿ ರೋಹಿತ್ ಹಾಗೂ ದೀಪಿಕಾ ಆರಾಧ್ಯ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ, ಸಿನಿಮಾ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಈ ಸಿನಿಮಾದ ಹೀರೊ ರೋಹಿತ್ ಅವರೇ ಬರೆದಿದ್ದಾರೆ. ಆನಂದ್ ನೀನಾಸಂ ಸತ್ಯ ರಾಜ್ ನಿಖಿಲ್ ಶ್ರೀಪಾದ್ ಪ್ರತೀಕ್ ಲೋಕೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾ 'ಆರ' ಎಂಬ ಹುಡುಗನ ಜರ್ನಿ ಸುತ್ತವೇ ಕಥೆಯನ್ನು ಹೆಣೆಯಲಾಗಿದೆ. ವಿಧಿಯ ಜೊತೆ ಸೇರಿ ಸಂರಕ್ಷಣೆಗಾಗಿ ಹೋರಾಡುವ ಹುಡುಗನ ಕಥೆಯನ್ನು ತೆರೆಮೇಲೆ ತರಲಾಗಿದೆ. ಈ ಸಿನಿಮಾದ ಬಹುತೇಕ ಚಿತ್ರೀಕರಣ ಉಡುಪಿಯಲ್ಲಿ ಮಾಡಲಾಗಿದೆ. ಇಡೀ ಸಿನಿಮಾದಲ್ಲಿ ಉಡುಪಿಯ ಕನ್ನಡದ ಸಂಭಾಷಣೆಯಿದೆ. ವಾಸ್ತವಕ್ಕೆ ತಕ್ಕಂತೆ ಸ್ಪಿರಿಚ್ಯುಯಲ್ ಸ್ಟೋರಿಯ ಕಥೆ ಮುಂದೆ ಸಾಗುತ್ತಾ ಹಲವು ಆಯಾಮಗಳನ್ನು ಪಡೆದುಕೊಳ್ಳುತ್ತೆ.
'ಆರ' ಸಿನಿಮಾವನ್ನು ಸುಜಾತ ಚಡಗ, ಚಂದ್ರಶೇಖರ್ ಸಿ ಜಂಬಿಗಿ ನಿರ್ಮಾಣ ಮಾಡುತ್ತಿದ್ದಾರೆ. ಯುವ ಪ್ರತಿಭೆ ಶ್ರೀಹರಿ ಛಾಯಾಗ್ರಾಹಣ, ಗಿರೀಶ್ ಹೊತ್ತೂರ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ದೇವಿ ಪ್ರಕಾಶ್ ಕಲಾ ನಿರ್ದೇಶನ 'ಆರ' ಸಿನಿಮಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ, ಜೂನ್‌ನಲ್ಲಿ ತೆರೆಗೆ ಬರಲಿದೆ.


Click it and Unblock the Notifications











