»   » ಅಂದು ರವಿಚಂದ್ರನ್ ಮಗಳು, ಈಗ ಹೀರೋಯಿನ್!

ಅಂದು ರವಿಚಂದ್ರನ್ ಮಗಳು, ಈಗ ಹೀರೋಯಿನ್!

Posted By:
Subscribe to Filmibeat Kannada

ಕ್ರೇಜಿಸ್ಟಾರ್ ರವಿಚಂದ್ರನ್ ಮಗಳು ಈಗ ಹೀರೋಯಿನ್ ಎಂದಾಕ್ಷಣ ಆಶ್ಚರ್ಯವಾಗಬೇಡಿ. ರವಿಚಂದ್ರನ್ ಅವರ ನಿಜ ಜೀವನದ ಮಗಳು ಹೀರೋಯಿನ್ ಆಗುತ್ತಿಲ್ಲ. ರವಿಮಾಮನ ಜೊತೆ ಮಗಳಾಗಿ ಸಿನಿ ಪ್ರಪಂಚಕ್ಕೆ ಪರಿಚಯವಾದ ನಟಿ ಈಗ ನಾಯಕಿ ಆಗಿ ನಟಿಸುತ್ತಿದ್ದಾರೆ.

ರವಿಚಂದ್ರನ್ ಅಭಿನಯಿಸಿದ್ದ 'ದೃಶ್ಯ' ಚಿತ್ರವನ್ನ ನೋಡಿದ್ದರೇ, ಆ ಚಿತ್ರದಲ್ಲಿ ಕ್ರೇಜಿಸ್ಟಾರ್ ಗೆ ಮಗಳ ಪಾತ್ರ ಮಾಡಿದ್ದವರ ಪರಿಚಯ ನಿಮಗೆ ಇರುತ್ತೆ. 'ದೃಶ್ಯ'ದಲ್ಲಿ ರವಿಮಾಮನ ಮಗಳಾಗಿ ಕಾಣಿಸಿಕೊಂಡಿದ್ದು ನಟಿ ಆರೋಹಿ, ಈಗ ನಾಯಕಿ ಆಗಿ ಬಡ್ತಿ ಪಡೆದುಕೊಂಡಿದ್ದಾರೆ.

Aarohi Narayan Heroine For Karthik Saragaru Next Movie

ಕಾರ್ತಿಕ್ ಸರಗೂರು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರದಲ್ಲಿ ಆರೋಹಿ ನಾಯಕಿ ಆಗಿದ್ದಾರೆ. 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಅಭಿನಯಿಸಿದ್ದ ಅರವಿಂದ್ ಅಯ್ಯರ್ ಈ ಚಿತ್ರಕ್ಕೆ ನಾಯಕ. ಈ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನ ಅವರು ಬಂಡವಾಳ ಹಾಕುತ್ತಿದ್ದಾರೆ.

Aarohi Narayan Heroine For Karthik Saragaru Next Movie

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಈ ಚಿತ್ರದ ಫಸ್ಟ್ ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರಕ್ಕೆ 'ಭೀಮಸೇನಾ ನಳಮಹಾರಾಜ' ಎಂದು ಶೀರ್ಷಿಕೆ ಇಡಲಾಗಿದೆ. ಇಂದು ಚಿತ್ರದ ಮುಹೂರ್ತ ಸಮಾರಂಭ ನೆರವೇರಲಿದ್ದು, ಆದಷ್ಟೂ ಬೇಗ ಶೂಟಿಂಗ್ ಶುರುವಾಗಲಿದೆ.

English summary
Actress Aarohi Narayan Heroine For Karthik Saragaru Directional Next Movie Titled 'Bheema sena nala Maharaja'. erailer, Aarohi Acted in Ravichandran's Drushya Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada